ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗಾಪುರದ 'ಲಯನ್' ಲೀ ಸ್ಮರಿಸಿದ ಮೋದಿ

By Mahesh
|
Google Oneindia Kannada News

ನವದೆಹಲಿ, ಮಾ.23: ಆಧುನಿಕ ಸಿಂಗಾಪುರ ನಿರ್ಮಾತೃ, ಪ್ರಪ್ರಥಮ ಪ್ರಧಾನಿ ಲೀ ಕೌನ್ ಯೀವ್ (91) ಸೋಮವಾರ ನಿಧನರಾಗಿದ್ದಾರೆ. ಲೀ ಅವರನ್ನು ಏಷ್ಯಾದ ರಾಜಕೀಯ ಮುಖಂಡರ ಪೈಕಿ 'ಲಯನ್'ಎಂದು ಪ್ರಧಾನಿ ನರೇಂದ್ರ ಮೋದಿ ಹಾಡಿ ಹೊಗಳಿದ್ದಾರೆ.

ಬ್ರಿಟಿಷರ ಸಾಧಾರಣ ವಸಾಹತು ಪ್ರದೇಶವಾಗಿದ್ದ ಸಿಂಗಾಪುರವನ್ನು ವಿಶ್ವದ ಟಾಪ್ ಬಿಸಿನೆಸ್ ಕೇಂದ್ರವನ್ನಾಗಿ ಪರಿವರ್ತಿಸಿದ್ದಲ್ಲದೆ, ಕ್ರೈಂ ರೇಟ್ ಶೂನ್ಯಗೊಳಿಸಿ ಸುಧಾರಿತ ರಾಷ್ಟ್ರಗಳ ಸಾಲಿಗೆ ಸೇರಿಸಿದ ಕೀರ್ತಿ ಲೀ ಅವರಿಗೆ ಸಲ್ಲುತ್ತದೆ.

Lee Kuan Yew a lion among leaders: Modi

ಫೆ.5ರಿಂದ ಅನಾರೋಗ್ಯ ಪೀಡಿತರಾಗಿ ಆಸ್ಪತ್ರೆಯಲ್ಲಿದ್ದ ಲೀ ಅವರು ಸಿಂಗಾಪುರದ ಜನರಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಲೀ ಅವರ ಪುತ್ರ ಮತ್ತು ಸಿಂಗಪೂರ್‌ನ ಹಾಲಿ ಪ್ರಧಾನಿ ಲೀ ಹ್ಸೀನ್ ಲೂಂಗ್ ಅವರು ಸಿಂಗಾಪುರದ ಬಹು ಜನಪ್ರಿಯ ನಾಯಕನ ಸಾವಿನ ಸುದ್ದಿಯನ್ನು ಪ್ರಕಟಿಸಿದರು.

ಮಾ.25ರಿಂದ 28ರವರೆಗೆ ಸಂಸತ್ತಿನ ಸಭಾಂಗಣದಲ್ಲಿ ಅವರ ಪಾರ್ಥೀವ ಶರೀರವನ್ನು ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗುವುದು ಎಂದು ಜೂನಿಯರ್ ಲೀ ತಿಳಿಸಿದ್ದಾರೆ. ಭಾರತ ಪ್ರಧಾನಿ ಮೋದಿ, ಅಮೆರಿಕ ಅಧ್ಯಕ್ಷ ಒಬಾಮ ಸೇರಿದಂತೆ ವಿಶ್ವದ ಗಣ್ಯರು ಲೀ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.

ಕೇಂಬ್ರಿಡ್ಜ್ ವಿವಿಯಿಂದ ಪದವಿಗೊಂಡು ಸಿಂಗಾಪುರಕ್ಕೆ ಆಗಮಿಸಿದ ಲೀ ಅವರು 1954ರಲ್ಲಿ ಸ್ಥಾಪನೆಗೊಂಡ ಪೀಪಲ್ಸ್ ಆಕ್ಷನ್ ಪಾರ್ಟಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಹೊಸ ಸ್ವಾವಲಂಬಿ ದೇಶದ ಕನಸು ಹೊತ್ತು ಸಾಕಾರಗೊಳಿಸಿದರು. ಲೀ ಅವರು ಭಾರತಕ್ಕೆ ಮೂರು ಬಾರಿ ಭೇಟಿ ನೀಡಿದ್ದರು. 1959ರಿಂದ ಸುಮಾರು ಅರ್ಧ ಶತಮಾನದ ಕಾಲ ಆಳಿದ ಸಿಂಗಾಪುರವನ್ನು ಆಳಿದರು.

English summary
Prime Minister Narendra Modi on Monday condoled the demise of Singapore’s founding father Lee Kuan Yew. "A far-sighted statesman and a lion among leaders, Mr. Lee Kuan Yew's life teaches valuable lessons to everyone. News of his demise is saddening,” he said in a statement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X