ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೇನಾಮಿ ಕಾಯ್ದೆಯಡಿ ಲಾಲೂ ಹೆಂಡತಿ ಮಕ್ಕಳ ಮೇಲೆ ಕೇಸ್

By Prasad
|
Google Oneindia Kannada News

ಪಟ್ನಾ, ಜೂನ್ 20 : ಬೇನಾಮಿ ವಹಿವಾಟು ಕಾಯ್ದೆಯಡಿ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಹೆಂಡತಿ, ಮಗಳು ಮತ್ತು ಮಗನ ವಿರುದ್ಧ ಆದಾಯ ತೆರಿಗೆ ಇಲಾಖೆ ಪ್ರಕರಣ ದಾಖಲಿಸಿದೆ.

ಲಾಲೂ ಅವರ ಹೆಂಡತಿ, ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ, ಮಗ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಮಗಳು ಮಿಸಾ ಭಾರತಿ ವಿರುದ್ಧ ಹೊಸ ಕಾಯ್ದೆಯಡಿ ಕೇಸನ್ನು ದಾಖಲಿಸಲಾಗಿದೆ.

Lalu Prasad's Yadav's wife, son and daughter charged under Benami Act

ಆರ್ಜೆಡಿ ಸಂಸದೆ ಮಿಸಾ ಭಾರತಿ, ಅವರ ಗಂಡ ಶೈಲೇಶ್ ಕುಮಾರ್ ಮತ್ತು ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ಬೇನಾಮಿ ಆಸ್ತಿಯನ್ನು ಆದಾಯ ತೆರಿಗೆ ಇಲಾಖೆ ಸೋಮವಾರ ಜಪ್ತಿ ಮಾಡಿಕೊಂಡಿದೆ.

ರಾಬ್ಡಿ ದೇವಿಯವರ ಬಳಿ 18 ಫ್ಲಾಟ್ ಗಳು, 18 ಪಾರ್ಕಿಂಗ್ ಜಾಗಗಳು ಇವೆ ಎಂದು ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರು ಆರೋಪಿಸಿದ್ದಾರೆ. ರಾಬ್ಡಿ ದೇವಿ ಅವರ ಸಹೋದರಿಯರಾದ ರಾಗಿಣಿ ಮತ್ತು ಚಂದಾ ಯಾದವ್ ಅವರಿಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಮಿಸಾ ಭಾರತಿ ಮತ್ತು ಶೈಲೇಂದ್ರ ಕುಮಾರ್ ಅವರಿಗೆ ಸೇರಿದ ಜಲಪುರದಲ್ಲಿರುವ 12 ನಿವೇಶನ, ದೆಹಲಿಯಲ್ಲಿನ ಒಂದು ಫಾರ್ಮ್ ಹೌಸ್, ನ್ಯೂ ಫ್ರೆಂಡ್ಸ್ ಕಾಲೋನಿಯಲ್ಲಿರುವ ಒಂದು ಬಂಗ್ಲೆಗೆ ಸಂಬಂಧಿಸಿದ ಕಾಗದಪತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. (ಒನ್ಇಂಡಿಯಾ ಸುದ್ದಿ)

English summary
The Income tax department has filed charges under the new Benami transaction act against Lalu Prasad' Yadav's family. Lalu's wife Rabri, son and Bihar minister Tejashwi Yadav and daughter Misa Bharti have been charged under the new law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X