ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಾಲೂ ಪುತ್ರಿ ಮೀಸಾಗೆ ಐಟಿ ಇಲಾಖೆಯಿಂದ ಸಮನ್ಸ್!

ಬಹುಕೋಟಿ ಮನಿಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮೀಸಾ ಭಾರತಿಗೆ ಆದಾಯ ತೆರಿಗೆ ಇಲಾಖೆಯಿಂದ ಸಮನ್ಸ್ ಕಳಿಸಲಾಗಿದೆ.

By Mahesh
|
Google Oneindia Kannada News

ನವದೆಹಲಿ, ಮೇ 24: ಬಹುಕೋಟಿ ಮನಿಲಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರ ಪುತ್ರಿ ಮೀಸಾ ಭಾರತಿಗೆ ಆದಾಯ ತೆರಿಗೆ ಇಲಾಖೆಯಿಂದ ಸಮನ್ಸ್ ಕಳಿಸಲಾಗಿದೆ.

ಅಕ್ರಮ ಹಣ ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೀಸಾ ಭಾರತಿ ಅವರ ಅಕೌಂಟೆಂಟ್ ರಾಜೇಶ್ ಅಗರವಾಲ್ ಅವರನ್ನು ಬಂಧಿಸಿ,ದೆಹಲಿಯ ಕೋರ್ಟಿನಲ್ಲಿ ಮಂಗಳವಾರ(ಮೇ 23) ಹಾಜರುಪಡಿಸಲಾಗಿತ್ತು.

Lalu Prasad Yadav's daughter Misa Bharti summoned by IT department

ಇದಾದ ಬಳಿಕ ಈಗ ರಾಜ್ಯಸಭಾ ಸದಸ್ಯೆ ಮೀಸಾ ಭಾರತಿ ಹಾಗೂ ಆಕೆಯ ಪತಿ ಶೈಲೇಶ್ ಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಆದಾಯ ತೆರಿಗೆ ಇಲಾಖೆ ಸಮನ್ಸ್ ಕಳಿಸಿದೆ.

ಕಳೆದ ವಾರ ಆದಾಯ ತೆರಿಗೆ ಇಲಾಖೆಯ ತಂಡವು ಲಾಲೂ ಪ್ರಸಾದ್ ಯಾದವ್ ಅವರ ಸಹಚರ ಮನೆ, ಕಚೇರಿಗಳ ಮೇಲೆ ದಾಳಿ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. 22 ಸ್ಥಳಗಳಲ್ಲಿ 1000 ಕೋಟಿ ರು ಗೂ ಅಧಿಕ ಬೇನಾಮಿ ಅಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಳಿ ನಡೆಸಲಾಗಿತ್ತು.

English summary
The income tax department has summoned Lalu Prasad Yadav's daughter Misa Bharti for questioning. The Rajya Sabha MP along with her husband Shailesh Kumar have been asked to appear for questioning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X