ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರ ಲಖ್ವಿ ಬಿಡುಗಡೆ :ಚೀನಾದಿಂದ ಭಾರತಕ್ಕೆ ಅಡ್ಡಗಾಲು

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜೂ.24: 26/11ರ ಮುಂಬೈ ಸರಣಿ ಸ್ಫೋಟದ ಪ್ರಕರಣದ ಪ್ರಮುಖ ರೂವಾರಿ ಲಷ್ಕರ್ ಇ ತೋಯ್ಬಾದ ಜಾಕೀ ಉರ್ ರೆಹ್ಮಾನ್ ಲಖ್ವಿ ಬಿಡುಗಡೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಗೆ ಭಾರತ ಸಲ್ಲಿಸಿದ ಮನವಿಗೆ ಚೀನಾ ಅಡ್ಡಗಾಲು ಹಾಕಿದೆ. ಈ ಮೂಲಕ ತನ್ನ ಬಹುಕಾಲದ ಮಿತ್ರ ಪಾಕಿಸ್ತಾನದ ಬೆನ್ನ ಹಿಂದೆ ಮತ್ತೊಮ್ಮೆ ನಿಂತಿದೆ.

ಲಖ್ವಿ ಹಸ್ತಾಂತರಕ್ಕೆ ಒಪ್ಪಂದ ಪಾಕಿಸ್ತಾನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿಶ್ವಸಂಸ್ಥೆಗೆ ಭಾರತ ಮನವಿ ಸಲ್ಲಿಸಿದ ಬೆನ್ನಲ್ಲೇ ಚೀನಾ ಭಾರತದ ಕ್ರಮಕ್ಕೆ ತಡೆಯೊಡ್ಡಿದೆ.

ವಿಶ್ವದ ಯಾವುದೇ ಭಾಗದಲ್ಲಿದ್ದರೂ ಅಲ್ ಖಾಯಿದಾ ಹಾಗೂ ಲಷ್ಕರರ್ ಇ ತೋಯ್ಬಾದಂಥ ಉಗ್ರ ಸಂಘಟನೆಗಳೊಂದಿಗೆ ನಿಕಟ ಸಂಪರ್ಕ ಹೊಂದಿರುವ ಸಂಸ್ಥೆ ಅಥವಾ ವ್ಯಕ್ತಿಗಳಿಗೆ ವಿಶ್ವಸಂಸ್ಥೆಯ ನಿರ್ಬಂಧ ನಿಯಮಾವಳಿ ಅನ್ವಯಿಸುತ್ತದೆ. ಆದರೆ, ವಿಶ್ವಸಂಸ್ಥೆಯ ನಿರ್ಬಂಧ ಸಮಿತಿ ಚರ್ಚೆ ಸಂದರ್ಭದಲ್ಲಿ ಭಾರತದ ಮನವಿಯಲ್ಲಿ ಹುರುಳಿಲ್ಲ, ಸರಿಯಾದ ದಾಖಲೆ ಒದಗಿಸಿಲ್ಲ ಎಂದು ಚೀನಾ ವಿರೋಧ ವ್ಯಕ್ತಪಡಿಸಿದೆ.

ಚೀನಾದಿಂದ ಭಯೋತ್ಪಾದನೆ ವಿರೋಧಿ ನಾಟಕ
ರಿಸರ್ಚ್ ಆಂಡ್ ಅನಾಲಿಸಿಸ್ ವಿಂಗ್ ನ ಮಾಜಿ ಮುಖ್ಯಸ್ಥರಾದ ಸಿಡಿ ಸಹಾಯ್ ಅವರು ಒನ್ ಇಂಡಿಯಾಕ್ಕೆ ನೀಡಿರುವ ಪ್ರತಿಕ್ರಿಯೆಯಂತೆ, ಇದು ಭಯೋತ್ಪಾದನೆ ವಿರುದ್ಧ ಚೀನಾ ತೆಗೆದುಕೊಂಡ ಕ್ರಮವಂತೂ ಅಲ್ಲ. ಎಲ್ಲಾ ಕಾಲಕ್ಕೂ ಪಾಕಿಸ್ತಾನವನ್ನು ಬೆಂಬಲಿಸುತ್ತಾ ಬಂದಿರುವ ಚೀನಾ ಈಗಲೂ ಅದೇ ಕೆಲಸವನ್ನು ಮಾಡಿದೆ. ಇದಕ್ಕೆ ವಿಶ್ವಸಂಸ್ಥೆ ಸಭೆಯಲ್ಲೇ ಸಾಕ್ಷಿ ಸಿಕ್ಕಿದೆ ಎಂದಿದ್ದಾರೆ.

Lakhvi

ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ
ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ನೀಡಲು ಅಮೆರಿಕ ಇತ್ತೀಚೆಗೆ ಬೆಂಬಲ ವ್ಯಕ್ತಪಡಿಸಿತ್ತು. ಇದಕ್ಕೆ ಪೂರಕವಾಗಿ ಚೀನಾ ಕೂಡಾ ಭಾರತಕ್ಕೆ ವಿಶ್ವಸಂಸ್ಥೆಯ ಖಾಯಂ ಸದಸ್ಯತ್ವ ನೀಡುವಂತೆ ಬೆಂಬಲ ಸೂಚಿಸಿತ್ತು. ಆದರೆ, ಈಗ ವಿಶ್ವಸಂಸ್ಥೆಯಲ್ಲಿ ಭಾರತದ ನಡೆಗೆ ಚೀನಾ ತಡೆ ಒಡ್ಡಿದೆ.

ವಿಶ್ವಸಂಸ್ಥೆಯ ನಿರ್ಬಂಧ ಸಮಿತಿಯ ಐದು ಖಾಯಂ ಹಾಗೂ 10 ಖಾಯಂ ಅಲ್ಲದ ಸದಸ್ಯರಾಷ್ಟ್ರಗಳಿವೆ. ಲಖ್ವಿ ಬಿಡುಗಡೆ ಬಗ್ಗೆ ಅಮೆರಿಕ, ರಷ್ಯಾ, ಬ್ರಿಟನ್, ಫ್ರಾನ್ಸ್ ಹಾಗೂ ಜರ್ಮನಿ ಕೂಡಾ ಕಳವಳ ವ್ಯಕ್ತಪಡಿಸಿವೆ.

2015ರ ಏಪ್ರಿಲ್ 8ರಂದು ಪಾಕ್ ನ್ಯಾಯಾಲಯವೊಂದು ಲಖ್ವಿಯನ್ನು ಪ್ರಕರಣದಲ್ಲಿ ದೋಷಮುಕ್ತಗೊಳಿಸಿ ಬಿಡುಗಡೆಗೊಳಿಸಿತ್ತು. ಈ ಬೆಳವಣಿಗೆಯು, ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ತೆಗೆದುಕೊಳ್ಳುವ ಕಠಿಣ ಕ್ರಮಗಳ ಭರವಸೆಯನ್ನು ಪಾಕಿಸ್ತಾನ ಹುಸಿಗೊಳಿಸಿರುವುದಾಗಿ ಭಾರತ ಪ್ರತಿಕ್ರಿಯಿಸಿತ್ತು.

ತನಿಖೆ, ವಿಚಾರಣೆ ಎಲ್ಲವೂ ಆಮೆಗತಿಯಲ್ಲಿದೆ
ಲಖ್ವಿ ಬಿಡುಗಡೆ ನಂತರ ಎಲ್ಲಿದ್ದಾನೆ? ಹೇಗಿದ್ದಾನೆ? ಎಂಬ ಮಾಹಿತಿ ಪಾಕಿಸ್ತಾನಕ್ಕೆ ಬಿಟ್ಟರೆ ಉಳಿದವರೇ ಗೊತ್ತಿಲ್ಲ. ಎಲ್ಲಾ ಜಿಹಾದಿಗಳ ಇಮಾಮ್ ರೀತಿಯಲ್ಲಿ ಉಳಿಸಿಕೊಳ್ಳಲಾಗಿರುವುದರಿಂದ ಆತನ ವಿರುದ್ಧ ಯಾವುದೇ ಕ್ರಮ ಜರುಗಿಸುವುದು ಅಥವಾ ವಿಚಾರಣೆಗಾಗಿ ಭಾರತಕ್ಕೆ ಹಸ್ತಾಂತರಿಸುವುದು ಎಲ್ಲವೂ ಅಸಾಧ್ಯದ ಮಾತು.

English summary
Why did China block action at the United Nations against Pakistan for freeing Zaki-ur-Rehman Lakhvi, the Lashkar-e-Tayiba operative? While India has raised objections to this, the reasoning behind is very simple- China has just defended its all weather friend
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X