ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತ್ತಾ: ಫ್ಲೈ ಓವರ್ ಕುಸಿತ, ವಿಡಿಯೋ ಕ್ಲಿಪ್ಪಿಂಗ್

By Mahesh
|
Google Oneindia Kannada News

ಕೋಲ್ಕತ್ತಾ, ಮಾರ್ಚ್ 31: ನಿರ್ಮಾಣ ಹಂತದಲ್ಲಿದ್ದ ಮೇಲ್ಸೇತುವೆಯೊಂದು ಗುರುವಾರ ಮಧ್ಯಾಹ್ನ ಕುಸಿತ ಪರಿಣಾಮ 14 ಜನ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವಶೇಷಗಳ ಅಡಿಯಲ್ಲಿ 150ಕ್ಕೂ ಮಂದಿ ಸಿಲುಕಿರುವ ಸಾಧ್ಯತೆ ಕಂಡು ಬಂದಿದೆ.

ಗಣೇಶ್ ಟಾಕೀಸ್ ಬಳಿ ಇರುವ ವಿವೇಕಾನಂದ ಫ್ಲೈ ಓವರ್ ದಿಢೀರ್ ಆಗಿ ಕುಸಿದಿದೆ. ಸೇತುವೆ ಕುಸಿತ ಸಂದರ್ಭದಲ್ಲಿ ಮಿನಿ ಬಸ್ಸೊಂದು ಚಲಿಸುತ್ತಿತ್ತು ಎಂದು ಮಾಹಿತಿ ಸಿಕ್ಕಿದೆ. [ಮೇಲ್ಸೇತುವೆ ದುರಂತ: ತುರ್ತು ಸೇವೆಗಾಗಿ ಕರೆ ಮಾಡಿ]

Kolkata mishap: 14 killed after flyover collapses, CM at site

ದುರಂತ ಸಂಭವಿಸಿದ ಕ್ಷಣದ ವಿಡಿಯೋ ಕ್ಲಿಪ್ಪಿಂಗ್:


* ಮಮತಾ ಬ್ಯಾನರ್ಜಿ ಅವರು ಇದೇ ಹಾದಿಯಲ್ಲಿ ಸಾಗಬೇಕಾಗಿತ್ತು ಎಂದು ತೃಣಮೂಲ ಕಾಂಗ್ರೆಸ್ಸಿನ ನಾಯಕ ಡೆರೆಕ್ ಓಬ್ರಿಯಾನ್ ಅವರು ಹೇಳಿದ್ದಾರೆ.

* ಗಿರೀಶ್ ಪಾರ್ಕಿನ ಗಣೇಶ್ ಟಾಕೀಸ್ ಬಳಿಯಲ್ಲಿ ನಡೆದ ಈ ದುರಂತದ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.


* ಚುನಾವಣಾ ಸಮಾವೇಶವನ್ನು ಬದಿಗೊತ್ತಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಥಳಕ್ಕೆ ಧಾವಿಸಿದ್ದಾರೆ.

* 2 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್) ಗಣೇಶ್ ಟಾಕೀಸ್ ನತ್ತ ಬಂದಿದ್ದು, ಹೆಚ್ಚಿನ ಪಡೆ ಬಳಕೆ ಸಾಧ್ಯತೆಯಿದೆ.

* ಉತ್ತರ ಕೋಲ್ಕತ್ತಾದಲ್ಲಿ ನಡೆಯುತ್ತಿರುವ ರಕ್ಷಣಾ ಕಾರ್ಯಕ್ಕೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಕೂಡಲೇ ಒದಗಿಸಲಾಗುವುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

* 2009ರಿಂದ ನಿರ್ಮಾಣ ಹಂತದಲ್ಲೇ ಇರುವ ಆಗಾಗ ದುರಸ್ತಿ ನಡೆಯುವ ಈ ಮೇಲ್ಸೇತುವೆ ಹಲವಾರು ಬಾರಿ ಈ ರೀತಿ ಅಪಘಾತದ ಆಘಾತವನ್ನು ತಂದೊಡ್ಡಿದೆ.

ಈ ದುರ್ಘಟನೆ ಬಗ್ಗೆ ವಿಡಿಯೋದಲ್ಲಿ ಸುದ್ದಿ ಕೇಳಿಸಿಕೊಳ್ಳಲು ಕ್ಲಿಕ್ ಮಾಡಿ


English summary
An under-construction flyover collapsed in Kolkata near Ganesh Talkies on Thursday killing 14 people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X