ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಭಾವಂತ ವಿದ್ಯಾರ್ಥಿನಿಯ ರಕ್ತ ಹೀರುತ್ತಿರುವ ಕ್ಯಾನ್ಸರ್

|
Google Oneindia Kannada News

ಕೋಲ್ಕತ್ತಾ, ಜು. 15: ಆಕೆಯ ಕಣ್ಣುಗಳಲ್ಲಿ ಕನಸಿತ್ತು, ಸಾಧನೆ ಮಾಡಬೇಕೆಂಬ ಛಲವಿತ್ತು, ಮಧ್ಯಮ ವರ್ಗದಪ್ರತಿಭಾವಂತ ವಿದ್ಯಾರ್ಥಿನಿಗೆ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುವ ಎಲ್ಲ ಸಾಮರ್ಥ್ಯವಿತ್ತು.

ಆದರೆ ಅದೊಂದು ಘಟನೆ ಅವಳ ಎಲ್ಲ ಕನಸುಗಳನ್ನು ಪುಡಿಪುಡಿ ಮಾಡಿತು. ಕೆಮಿಸ್ಟ್ರಿ ಪರೀಕ್ಷೆ ಬರೆಯುತ್ತಿದ್ದ ಆಕೆಯ ಕಾಲುಗಳಲ್ಲಿ ಇದ್ದಕ್ಕಿದ್ದಂತೆ ಯಮಯಾತನೆ ಆರಂಭವಾಗಿತ್ತು. ಪರೀಕ್ಷೆಯನ್ನು ಬರೆಯಲು ಸಾಧ್ಯವಾಗದೇ ಆಕೆ ಕೊಠಡಿಯಿಂದ ಹೊರಬಂದಿದ್ದಳು.[ಪುಟಾಣಿ ಚಂದನ್ ಹೋರಾಟಕ್ಕೆ ಅಂತ್ಯ ಹಾಡಿದ ಕ್ಯಾನ್ಸರ್]

cancer

ಆಸ್ಪತ್ರೆಗೆ ತೆರಳಿ ಎಲ್ಲ ಪರೀಕ್ಷೆಗಳನ್ನು ಮಾಡಿದ ನಂತರ ಗೊತ್ತಾದ ಆಘಾತಕಾರಿ ಸಂಗತಿ ಆಕೆಯ ಜೀವನವನ್ನು ಮತ್ತೊಂದು ಹೋರಾಟಕ್ಕೆ ಸಿಕ್ಕಿಸಿತ್ತು. ಟಾಟಾ ಮೆಡಿಕಲ್ ಸೆಂಟರ್ ನ ವೈದ್ಯರು ಆಕೆಗೆ ರಕ್ತದ ಕಾನ್ಸರ್(Barcids Lyphoma) ಎಂದು ವರದಿ ನೀಡಿದ್ದರು.

ಮೂವರು ಮಕ್ಕಳಲ್ಲಿ ಶೊಹೆಲಿ ಚಕ್ರವರ್ತಿ ಕಿರಿಯಳು. ತಂದೆ ಸಾರಿಗೆ ಇಲಾಖೆಯಲ್ಲಿ ದಿನಗೂಲಿ ನೌಕರ. ಚಿಕ್ಕಂದಿನಿಂದಲೇ ಓದಿನಲ್ಲಿ ಮುಂದಿದ್ದ ಶೊಹೆಲಿ ಈ ಬಾರಿ ಇಂಜಿನಿಯರಿಂಗ್ ಪ್ರವೇಶ ಪಡೆಯಬೇಕು ಎಂದು ಬಯಸಿದ್ದಳು. ಆದರೆ ಕಾನ್ಸರ್ ಎಂಬ ಮಾರಿ ಅವಳನ್ನು ಬರಸೆಳೆದು ಅಪ್ಪಿಕೊಂಡಿತ್ತು.[ಇಂಥ ಕನ್ನಡಿಗ ಇನ್ನಿಲ್ಲ ಎಂದರೆ ನಂಬುವುದಕ್ಕಾಗಲ್ಲ]

ಮುಗಿಯದ ಪ್ರಯಾಣ
ಸೋಹೆಲಿಯನ್ನು ಕೆಮೋಥೆರಫಿ ಮೂಲಕ ಬದುಕಿಸಲು ಸಾಧ್ಯವಿದೆ. ರಕ್ತ ಬದಲಾವಣೆ ಪ್ರಕ್ರಿಯೆಯನ್ನು ನಿರಂತರವಾಗಿ ಮಾಡಬೇಕು. ಆದರೆ ಇದಕ್ಕೆ 12 ಲಕ್ಷ ರು. ಗೂ ಅಧಿಕ ವೆಚ್ಚ ತಗುಲಲಿದ್ದು ಕುಟುಂಬ ಪ್ರೀತಿಯ ಮಗಳನ್ನು ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದೆ. ಆಕೆಯದ್ದು "ಓ" ನೆಗೆಟಿವ್ ರಕ್ತದ ಗುಂಪು ಆಗಿರುವುದು ಸಮಸ್ಯೆಯನ್ನು ಮತ್ತಷ್ಟು ಜಟಿಲವಾಗಿದೆ. ಆಕೆಯ ಕುಟುಂಬ ಮತ್ತು ಬಂಧುಬಳಗದವರು ತಮ್ಮ ಕೈಯಲ್ಲಾದ ಎಲ್ಲ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಅವರ ಪ್ರಾರ್ಥನೆ ಸಾಕಾಗುತ್ತಿಲ್ಲ.

ಶೊಹೆಲಿ ತಂದೆ ತಪನ್ ಚಕ್ರವರ್ತಿ ಅವರಿಗೆ ಮಗಳ ಚಿಕಿತ್ಸೆಗೆ ಹಣ ಎಲ್ಲಿಂದ ತರಬೇಕು ಎಂಬ ದಾರಿಗಳು ತಿಳಿಯುತ್ತಿಲ್ಲ. ಸ್ಥಳೀಯ ಸ್ಪೋರ್ಟ್ಸ್ ಕ್ಲಬ್ ಮತ್ತು ಶೊಹೆಲಿ ಶಾಲೆ ಸಹ ಸಹಾಯ ಮಾಡಿದೆ. ಕ್ಲಬ್ ಸದಸ್ಯ ಸಜಲ್ ಚಂದಾ ಹೇಳುವಂತೆ ಬೇಕಾಗಿರುವ ಹಣಕ್ಕೆ ಹೋಲಿಕೆ ಮಾಡಿದರೆ ಇದು ಏನಕ್ಕೂ ಸಾಕಾಗುವುದಿಲ್ಲ ಎಂದು ತಿಳಿಸಿದ್ದಾರೆ.[ಕರ್ನಾಟಕದಲ್ಲಿ ಹೆಚ್ಚುತ್ತಿರುವ ಸ್ತನ ಕ್ಯಾನ್ಸರ್ ಪ್ರಕರಣ]

ಕಳೆದ ಮೂರು ತಿಂಗಳಿನಿಂದ ಬಾಲಕಿ ಯಮಯಾತನೆ ಅನುಭವಿಸುತ್ತಿದ್ದಾಳೆ. ಆಕೆಯ ನೆರವಿಗೆ ಸ್ಪಂದಿಸಲು ಮತ್ತು ರಕ್ತ ದಾನ ಮಾಡಲು 9535613441 ಕ್ಕೆ ಕರೆ ಮಾಡಬಹುದು.

ನೇರವಾಗಿ ಧನ ಸಹಾಯ ಮಾಡುವರಿದ್ದರೆ
* ಖಾತೆ ಸಂಖ್ಯೆ: 0163010445894
* ಐಎಫ್ ಎಸ್ ಸಿ ಕೋಡ್ : UTBI0UTT221
* ಮೊಬೈಲ್ ಸಂಖ್ಯೆ: 9433328681

ಬಾಲಕಿಯ ಜೀವ ಉಳಿಸಲು ನೆರವಾಗಿ ಮತ್ತು ಸಂಗತಿಯನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ

English summary
She had big dreams for a bright future until they came crashing one fine day. A very bright student, Shoheli Chakravarthy wanted the top ranks in Higher Secondary examinations and Joint Entrance examination for engineering and she was heading that way until came the big turn in her life. She felt a stinging pain in her limbs and back during her Chemistry paper that forced her to leave the examination mid-way. She was not keeping well, true, but this came as a shock for her.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X