ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮಹಿಳೆ ಜೀನ್ಸ್ ತೊಟ್ಟು ತೊಂದರೆ ಕೊಡಬಾರದು'

By Prasad
|
Google Oneindia Kannada News

ತಿರುವನಂತಪುರ, ಅ. 3 : ಮಹಿಳೆಯರು ಜೀನ್ಸ್ ತೊಡಬಾರದು, ಅದು ನಮ್ಮ ಭಾರತೀಯ ಸಂಸ್ಕೃತಿಗೆ ವಿರುದ್ಧವಾದುದು ಎಂದು ಹೇಳಿರುವ ಸಂಗೀತ ದಿಗ್ಗಜ, ಖ್ಯಾತ ಹಿನ್ನೆಲೆ ಗಾಯಕ ಕೆ.ಜೆ. ಯೇಸುದಾಸ್ (74) ಅವರು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಗಾಂಧಿ ಜಯಂತಿಯಂದು ತಿರುವನಂತಪುರದಲ್ಲಿ ಆಯೋಜಿಸಲಾಗಿದ್ದ ಖಾಸಗಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡುತ್ತಿದ್ದ ಅವರು, "ಮಹಿಳೆಯರು ಜೀನ್ಸ್ ಧರಿಸಿ ಇತರರಿಗೆ ತೊಂದರೆ ಕೊಡಬಾರದು. ಏನೇನು ಕವರ್ ಆಗಿರಬೇಕೋ ಅದೆಲ್ಲ ಕವರ್ ಆಗಿರಬೇಕು" ಎಂದು ಹೇಳಿರುವುದು ಮಹಿಳೆಯರ ಕೆಂಗಣ್ಣಿಗೆ ಗುರಿಯಾಗಿದೆ.

ಸರಳತೆ ಮತ್ತು ಸ್ನೇಹಪರತೆ ಮಹಿಳೆಯರ ಅತ್ಯುನ್ನತ ಗುಣಗಳು. ಅವರು ಧರಿಸುವ ಉಡುಪುಗಳೂ ಸರಳವಾಗಿರಬೇಕು, ಕೆಣಕುವಂತಿರಬಾರದು ಎಂದು ಸುಶ್ರಾವ್ಯ ಕಂಠದ ಸಂಗೀತಗಾರ ಯೇಸುದಾಸ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

KJ Yesudas sparks row : Women should not wear jeans

ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಕೇರಳ ಕಾಂಗ್ರೆಸ್ ನ ಮಹಿಳಾ ಘಟಕ ಮೆರವಣಿಗೆ ನಡೆಸಿ ಪ್ರತಿಭಟಿಸಿದೆ. ಈ ಅಭಿಪ್ರಾಯ ಸರ್ವಸಮ್ಮತವಲ್ಲ. ಇದು ಮಹಿಳಾ ಸ್ವಾತಂತ್ರ್ಯದ ಹರಣ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಬಿಂದು ಕೃಷ್ಣಾ ಅವರು ಪಿಟಿಐಗೆ ತಿಳಿಸಿದ್ದಾರೆ.

ಯೇಸುದಾಸ್ ಅವರು ಅತ್ಯುತ್ಕೃಷ್ಟ ಗಾಯಕ. ಸಂಗೀತ ಕ್ಷೇತ್ರಕ್ಕೆ ಅವರು ಅಪಾರ ಕಾಣಿಕೆ ಸಲ್ಲಿಸಿದ್ದಾರೆ. ಅವರ ಕೊಡುಗೆಯ ಬಗ್ಗೆ ಅಪಾರವಾದ ಗೌರವವಿದೆ. ಆದರೆ, ಮಹಿಳಾ ವಿರೋಧಿ ಹೇಳಿಕೆ ನೀಡಿರುವುದು ನಿಜಕ್ಕೂ ದುರಾದೃಷ್ಟಕರ ಎಂದು ಬಿಂದು ಕೃಷ್ಣಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Legendary singer KJ Yesudas has stirred up a controversy by saying women should not wear jeans, as it is against Indian culture. He said in a private function in Tiruvanantapuram that, women should not trouble others by wearing jeans.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X