ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್ ಬುಕ್, ವಾಟ್ಸಾಪ್ ಮೇಲೆ ಖಾಪ್ ಕೆಂಗಣ್ಣು

By Kiran B Hegde
|
Google Oneindia Kannada News

ಮುಜಾಫರ್‌ನಗರ, ನ. 19: ವಾಟ್ಸಾಪ್ ಹಾಗೂ ಫೇಸ್ ಬುಕ್‌ನಂತಹ ಸಾಮಾಜಿಕ ಜಾಲ ತಾಣಗಳ ಉಪಯೋಗವನ್ನು ಅಪ್ರಾಪ್ತರಿಗೆ ಅದರಲ್ಲೂ ಬಾಲಕಿಯರಿಗೆ ನಿಷೇಧಿಸಬೇಕೆಂದು ಉತ್ತರ ಪ್ರದೇಶದ ಖಾಪ್ ಪಂಚಾಯತ್‌ ಆಗ್ರಹಿಸಿದೆ

ಉತ್ತರ ಪ್ರದೇಶ ರಾಜ್ಯದ ಶೋರಮ್ ಎಂಬ ಗ್ರಾಮದಲ್ಲಿ ಆಯೋಜಿಸಿದ್ದ ಜಾತಿ ಪಂಚಾಯಿತಿಗಳ ಸಭೆಯಲ್ಲಿ ಭಾಗವಹಿಸಿದ್ದ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಹುಲ್ ಅಹಲಾವತ್ ಈ ಬೇಡಿಕೆ ಮುಂದಿಟ್ಟಿದ್ದಾರೆ. [ಸಗೋತ್ರ ವಿವಾಹ ತಡೆಗೆ ಸುಪ್ರೀಂ ನಕಾರ]

ವಾಟ್ಸಾಪ್, ಫೇಸ್ ಬುಕ್‌ನಂತಹ ಸಾಮಾಜಿಕ ಜಾಲತಾಣಗಳನ್ನು ಮಕ್ಕಳು ಅಶ್ಲೀಲ ಚಿತ್ರ ನೋಡಲು ಉಪಯೋಗಿಸುತ್ತಿದ್ದಾರೆ. ಇದರಿಂದ ಅವರು ದಾರಿ ತಪ್ಪುತ್ತಿದ್ದಾರೆಂದು ಆರೋಪಿಸಿದ್ದಾರೆ.

network

ಇದಕ್ಕೆ ದನಿಗೂಡಿಸಿರುವ ಮಹಾರಾಣಾ ಪ್ರತಾಪ್ ಸಂಘರ್ಷ ಸಮಿತಿ ಕಾರ್ಯಕರ್ತ ನರೇಂದ್ರ ಪುನಧೀರ್, ಫೇಸ್ ಬುಕ್‌ನಲ್ಲಿಯೇ ಸ್ನೇಹಿತರಾಗಿ, ಪ್ರೀತಿಯಲ್ಲಿ ಬಿದ್ದು ನಂತರ ಬೇರೆಯಾಗುತ್ತಿದ್ದಾರೆ. ಪಾಶ್ಚಿಮಾತ್ಯ ರಾಷ್ಟ್ರಗಳ ಸಂಸ್ಕೃತಿ ರೂಢಿಸಿಕೊಳ್ಳುತ್ತಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲತಾಣವನ್ನು ನಾವು ವಿರೋಧಿಸುತ್ತಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಆದ್ದರಿಂದ ಇನ್ನೂ 18 ವರ್ಷ ತುಂಬಿರದ ಹದಿವಯಸ್ಕರಿಗೆ, ಅದರಲ್ಲಿಯೂ ಬಾಲಕಿಯರಿಗೆ ಮೊಬೈಲ್ ನೀಡಬಾರದು. ತಂತ್ರಜ್ಞಾನ ಕಲಿಕೆಯನ್ನು ಶಿಕ್ಷಣಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ. [ಹೆಣ್ಣು ಶಿಶು ಹತ್ಯೆಗೆ ತಡೆ: ಕೋಟಿ ರೂ. ಬಹುಮಾನ]

ಖಾಪ್ ವಿರುದ್ಧ ಕ್ರಮ ಕೈಗೊಳ್ಳಿ: ಆದರೆ, ಈ ಬೇಡಿಕೆಯನ್ನು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಮೀನಾ ಶಫೀಕ್ ಖಂಡಿಸಿದ್ದಾರೆ. ಈ ಬೇಡಿಕೆ ಅಭಿವೃದ್ಧಿಗೆ ಮಾರಕವಾಗಿದೆ. ಖಾಪ್ ಪಂಚಾಯತ್‌ಗಳ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

English summary
A khap panchayat of Uttar Pradesh opposed access to WhatsApp messenger service and social networking sites like Facebook for youngsters below 18 years. It claims youths are going in wrong way because of social networks. That is why it must be limited for education purpose.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X