ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲ್ಲೆ, ಕಿರುಕುಳದ ಬಗ್ಗೆ ಕೊನೆಗೂ ಮೌನ ಮುರಿದ ನಟಿ

ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮಾನಸಿಕ, ದೈಹಿಕ ಕಿರುಕುಳ ಅನುಭವಿಸಿದ ಎರಡುವಾರಗಳ ಬಳಿಕ ಮಲಯಾಳಂ ನಟಿ ತಮ್ಮ ನೋವು ತೋಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಫ್ರೊಫೈಲ್ ನಲ್ಲಿ ಈ ದುರ್ಘಟನೆ ಬಗ್ಗೆ ಬರೆದುಕೊಂಡಿದ್ದಾರೆ.

By ಅನುಷಾ ರವಿ
|
Google Oneindia Kannada News

ತಿರುವನಂತಪುರಮ್, ಫೆಬ್ರವರಿ 28: ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿ ಮಾನಸಿಕ, ದೈಹಿಕ ಕಿರುಕುಳ ಅನುಭವಿಸಿದ ಎರಡುವಾರಗಳ ಬಳಿಕ ಮಲಯಾಳಂ ನಟಿ ತಮ್ಮ ನೋವು ತೋಡಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಫ್ರೊಫೈಲ್ ನಲ್ಲಿ ಈ ದುರ್ಘಟನೆ ಬಗ್ಗೆ ಬರೆದುಕೊಂಡಿದ್ದಾರೆ.

ಘಟನೆ ಬಳಿಕ ಎಲ್ಲೂ ಕಾಣಿಸಿಕೊಳ್ಳದೆ ನೋವು ಅನುಭವಿಸಿದ್ದ ನಟಿ ಈಗ ಸಾಮಾಜಿಕ ಜಾಲ ತಾಣ ಇನ್ಸ್ಟಾ ಗ್ರಾಮ್ ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದಾರೆ. ಮತ್ತೆ ಶೂಟಿಂಗಿಗೆ ಹಾಜರಾಗಿರುವ ನಟಿ, ನನಗೆ ಎದುರಾಗುವ ಎಲ್ಲಾ ಸವಾಲು, ಸಮಸ್ಯೆಯನ್ನು ಧೈರ್ಯದಿಂದ ಎದುರಿಸುತ್ತೇನೆ ಎಂದಿದ್ದಾರೆ.[ನಟಿ ಮೇಲೆ ಹಲ್ಲೆ ಪ್ರಕರಣ, ಪಲ್ಸರ್ ಸುನಿ ಮೊಬೈಲ್ ಎಲ್ಲಿ?]

'Life has knocked me down a few times, it showed me things I never even imagined. But I could face all those and will overcome in the future as well' ಎಂದು ಬರೆದುಕೊಂಡಿದ್ದಾರೆ.

Kerala molestation case: Actress breaks silence on Instagram

ಈ ನಡುವೆ ಪೊಲೀಸ್ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿರುವ ನಟಿ, ನಾಲ್ವರನ್ನು ಗುರುತಿಸಿದ್ದಾರೆ. ನಾಲ್ವರು ಕೂಡಾ ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳಾಗಿದ್ದು, ತನಿಖೆ ಮುಂದುವರೆದಿದೆ. ಪ್ರಮುಖ ಆರೋಪಿ ಪಲ್ಸರ್ ಸುನಿ ಹಾಗೂ ವಿಜೇಶ್ ನನ್ನು ಕೊಯಮತ್ತೂರಿಗೆ ಕರೆದೊಯ್ದಿರುವ ಕೇರಳ ಪೊಲೀಸರು ಮಹತ್ವದ ದಾಖಲೆಗಳನ್ನು ಜಪ್ತಿ ಮಾಡಿದ್ದಾರೆ. ಆದರೆ, ದುಷ್ಜೃತ್ಯವನ್ನು ಸೆರೆ ಹಿಡಿದ ಮೊಬೈಲ್ ಫೋನ್ ಇನ್ನೂ ಪತ್ತೆಯಾಗಿಲ್ಲ.[ಮಲಯಾಳಿ ನಟಿ ದೌರ್ಜನ್ಯ : ಪಲ್ಸರ್ ಸುನಿಯನ್ನು ಬಂಧಿಸಿದ್ದು ಹೇಗೆ?]

ನಟಿಯ ಧೈರ್ಯವನ್ನು ಮೆಚ್ಚಿರುವ ಕೇರಳ ಚಿತ್ರರಂಗ ಆಕೆಯ ಬೆಂಬಲಕ್ಕೆ ನಿಂತಿದೆ. ನಟ ಪೃಥ್ವಿರಾಜ್, ಅಂಜಲಿ ಮೆನನ್, ಮಂಜು ವಾರಿಯರ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ನಟಿಯ ಬೆಂಬಲಿಸಿ, ಸಾಮಾಜಿಕ ಜಾಲ ತಾಣಗಳಲ್ಲಿ ಜಾಗೃತಿ ಮೂಡಿಸಿದ್ದಾರೆ.

English summary
Nearly two weeks after she was kidnapped and molested, an actress from the Malayalam film industry showed immense courage and took to her Instagram profile to break her silence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X