ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮದ್ವೆಯಾದ 4 ವಾರಕ್ಕೆ ವಾಟ್ಸಪ್ ಮೂಲಕ ತಲಾಖ್

By Mahesh
|
Google Oneindia Kannada News

ಕೊಟ್ಟಾಯಂ, ಅ. 08: ಕೇರಳದ ಕೊಟ್ಟಾಯಂನ ಯುವಕನೊಬ್ಬ ತಂತ್ರಜ್ಞಾನ ಬಳಕೆಯ ಪರಮಾವಧಿಯನ್ನು ಮುಟ್ಟಿದ್ದಾನೆ. ಮದುವೆಯಾದ ಕೇವಲ 4 ವಾರಕ್ಕೆ ತನ್ನ 21 ವರ್ಷದ ಪತ್ನಿಗೆ ವಾಟ್ಸಪ್ ಮೂಲಕ ತಲಾಖ್ ಸಂದೇಶ ಕಳಿಸಿದ್ದಾನೆ.

ದುಬೈನಿಂದ 'ಮೂರು ತಲಾಖ್' ಸಂದೇಶ ರವಾನಿಸಿದ ಘಟನೆ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಆಲಪ್ಪುಳ ಜಿಲ್ಲೆಯ ಚೆರ್ತಲಾದ ದಂತ ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ನವ ವಿವಾಹಿತೆ ಈ ಸಂದೇಶವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ. ಕಾಲೇಜು ಬಿಟ್ಟು, ನೆರವಿಗಾಗಿ ಮಹಿಳಾ ಆಯೋಗದ ಮೊರೆ ಹೋಗಿದ್ದಾರೆ.[ಹೊಡಿತಾಳೆ, ಬೈತಾಳೆ ನನ್ಹೆಂಡ್ತಿ ಎಂದ ತಮಿಳು ನಟ!]

ನೀನು ನನಗೆ ಕರೆ ಮಾಡಬೇಕಾಗಿಲ್ಲ, ನೀನು ನನಗೆ ನಿನ್ನಲ್ಲಿ ಇಷ್ಟವಿಲ್ಲ. ನನಗಾಗಿ ಕಾಯಬೇಡ. ಸೇಬನ್ನು ನಾವು ಇಷ್ಟಪಡುತ್ತೇವೆಂದು ಎಲ್ಲಾ ದಿನಗಳಲ್ಲಿಯೂ ಅದನ್ನೇ ತಿಂದುಕೊಂಡು ಇರಲು ಸಾಧ್ಯವೇ? ಬೇರೆ ಹಣ್ಣುಗಳನ್ನೂ ತಿನ್ನುವ ಇಷ್ಟ ನಮಗಾಗುತ್ತದೆ. ತಲಾಕ್ ತಲಾಕ್ ತಲಾಕ್'' ಎಂದಿದ್ದ ಸಂದೇಶವನ್ನು ಆಯೋಗದ ಸದಸ್ಯೆಜೆ ಪ್ರಮೀಳಾ ದೇವಿ ಅವರಿಗೆ ನೊಂದ ಯುವತಿ ತೋರಿಸಿದ್ದಾರೆ.

Kerala Man Divorces Wife Of Four Weeks Over WhatsApp

ಮದುವೆ ಚೆನ್ನಾಗೇ ನಡೆದಿತ್ತು: ವರನಿಗೆ ಸುಮಾರು 10 ಲಕ್ಷ ರು ವರದಕ್ಷಿಣೆ ನೀಡಲಾಗಿತ್ತು. ಜೊತೆಗೆ 80ಸವರನ್ ಚಿನ್ನವನ್ನು ನೀಡಲಾಗಿತ್ತು. ಮದುವೆಯ ಉಪಚಾರದಲ್ಲಿ ಏನು ಕಡಿಮೆ ಮಾಡಿಲ್ಲ. ಅದರೂ ಆತ ಹೀಗೆ ಏಕೆ ಮಾಡುತ್ತಿದ್ದಾನೆ ಗೊತ್ತಾಗುತ್ತಿಲ್ಲ ಎಂದು ನೊಂದ ಯುವತಿಯ ತಾಯಿ ಹೇಳಿದ್ದಾರೆ.[ದುಬೈನಲ್ಲಿ ಸಂಸಾರ ಮುರಿದ ವಾಟ್ಸಾಪ್ ಸಂದೇಶ]

ಮಹಿಳಾ ಆಯೋಗ ಹಾಗೂ ಕೇರಳದ ಜಾಮ್ ಇಯ್ಯಾತುಲ್ ಉಲಮಾ, ಇಸ್ಲಾಂ ವಿದ್ವಾಂಸರು ವಾಟ್ಸಪ್ ಮೂಲಕ ಕಳಿಸಿದ 'ತಲಾಕ್' ನಿಜಕ್ಕೂ ಮಾನ್ಯತೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದಾರೆ. ಇಸ್ಲಾಂ ವಿದ್ವಾಂಸರ ಪ್ರಕಾರ ಈ ರೀತಿ ತಲಾಕ್ ನೀಡಲು ಅನುಮತಿ ಹಾಗೂ ಮಾನ್ಯತೆ ಇದೆಯಂತೆ. ಅದರೆ, ತಲಾಕ್ ನೀಡಲು ಕುಟುಂಬದ ಸಮ್ಮತಿಯೂ ಬೇಕಂತೆ.

ವಾಟ್ಸಪ್ ಸಂದೇಶವನ್ನು ಕಾನೂನಿನ ಪ್ರಕಾರ ಮಾನ್ಯತೆ ಪಡೆದ ಪತ್ರ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಇಸ್ಲಾಂ ಸಂಘಟನೆಯೊಂದು ಹೇಳಿರುವುದು ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸಿದೆ. 27 ವರ್ಷ ವಯಸ್ಸಿನ ವರನಿಗಾಗಿ ಹುಡುಕಾಟ ನಡೆಯುತ್ತಿದೆ. ಮುಂದಿನ ವಿಚಾರಣೆ ಇಸ್ಲಾಂ ಮುಖಂಡರು ಹಾಗೂ ಮಹಿಳಾ ಆಯೋಗದ ಮುಂದೆ ನಡೆಯಲಿದೆ. ಅಲ್ಲಿ ತನಕ ವಾಟ್ಸಪ್ ಸಂದೇಶದ ಬಗ್ಗೆ ಚರ್ಚೆ ಸಾಗಿದೆ.[ಮದುವೆಗೆ ಮುಂಚೆ ಈ ಪರೀಕ್ಷೆ ಬೇಕೋ? ಬೇಡವೋ?]

ಏಕಪಕ್ಷೀಯವಾಗಿ ಬಾಯಲ್ಲಿ ಮೂರು ಬಾರಿ ತಲಾಖ್ ಹೇಳಿ ಹೆಂಡತಿಗೆ ವಿಚ್ಛೇದನ ಕೊಡುವ ಅನಿಷ್ಟ ಪದ್ಧತಿ ರದ್ದಾಗಬೇಕು ಎಂಬ ಚರ್ಚೆ ಇನ್ನೂ ಜಾರಿಯಲ್ಲಿದೆ. ಅನೇಕ ರಾಜ್ಯಗಳಲ್ಲಿನ ಬಹುತೇಕ ಎಲ್ಲಾ ಮುಸ್ಲಿಂ ಮಹಿಳೆಯರು (ಶೇ. 92ಕ್ಕೂ ಹೆಚ್ಚು) ಈ ಪದ್ಧತಿ ನಮಗೆ ಬೇಡ ಎಂದಿದ್ದಾರೆ. ಈಗ ವಾಟ್ಸಪ್ ಸಂದೇಶದ ತಲಾಖ್ ಗೆ ಮಾನ್ಯತೆ ಸಿಕ್ಕರೆ ಮಹಿಳೆಯರ ನೋವು ಇನ್ನಷ್ಟು ಹೆಚ್ಚಲಿದೆ.

English summary
A 21-year-old woman from Kerala has been divorced by her husband over WhatsApp after just four weeks of marriage, according to a report in the Times Of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X