ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಮ ಮಾತುಗಾರ : ಕೇರಳ ಮಾಜಿ ಸಚಿವ ಮೇಲೆ ನ್ಯಾಯಾಂಗ ತನಿಖೆ

ಮಹಿಳೆಯೊಬ್ಬರೊಂದಿಗೆ ಕಾಮೋತ್ತೇಜಕ ಮಾತುಗಳನ್ನಾಡಿದ ಆರೋಪದ ಮೇಲೆ ರಾಜೀನಾಮೆ ನೀಡಿರುವ ಕೇರಳದ ಸಾರಿಗೆ ಸಚಿವ ಶಶೀಂದ್ರನ್ ವಿರುದ್ಧ ನ್ಯಾಯಾಂಗ ತನಿಖೆಗೆ ಎಲ್ ಡಿಎಫ್ ಸರ್ಕಾರ ಆದೇಶಿಸಿದೆ.

By Mahesh
|
Google Oneindia Kannada News

ತಿರುವನಂತಪುರಂ, ಮಾರ್ಚ್27: ಮಹಿಳೆಯೊಬ್ಬರೊಂದಿಗೆ ಕಾಮೋತ್ತೇಜಕ ಮಾತುಗಳನ್ನಾಡಿದ ಆರೋಪದ ಮೇಲೆ ರಾಜೀನಾಮೆ ನೀಡಿರುವ ಕೇರಳದ ಸಾರಿಗೆ ಸಚಿವ ಶಶೀಂದ್ರನ್ ವಿರುದ್ಧ ನ್ಯಾಯಾಂಗ ತನಿಖೆಗೆ ಪಿಣರಾಯಿ ವಿಜಯನ್ ಅವರ ಎಲ್ ಡಿಎಫ್ ಸರ್ಕಾರ ಆದೇಶಿಸಿದೆ.

ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಅವರು ಸಹಾಯ ಬೇಡಿ ಬಳಿ ಬಂದಿದ್ದ ಮಹಿಳೆಯ ಜೊತೆ ಫೋನ್‍ನಲ್ಲಿ ಅಶ್ಲೀಲವಾಗಿ ಕಾಮೋತ್ತೇಜಿತನಾಗಿ ಮಾತನಾಡಿದ ಆಡಿಯೋ ತುಣುಕನ್ನು ಹೊಚ್ಚ ಹೊಸ ಚಾನೆಲ್ ಮಂಗಳಂ ಟಿವಿ ತನ್ನ ಮೊದಲ ದಿನದ ಕಾರ್ಯರಂಭದಲ್ಲೇ ಪ್ರಸಾರ ಮಾಡಿತು. ನಂತರ ಸಚಿವರು ರಾಜೀನಾಮೆ ನೀಡಿ ತನಿಖೆಗೆ ಸಿದ್ಧ ಎಂದಿದ್ದರು.

Kerala: Judicial probe ordered in Ex-minister Saseendran case

ರಾಜ್ಯದಲ್ಲಿ ಎಲ್‍ಡಿಎಫ್ ಸರ್ಕಾರ ಬಂದ ಮೇಲೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಈ ಪ್ರಕರಣದ ಸೂಕ್ತ ತನಿಖೆಯಾಗಬೇಕು ಎಂದು ಕಾಂಗ್ರೆಸ್ ಮುಖಂಡ ರಮೇಶ್ ಆಗ್ರಹಿಸಿದ್ದಾರೆ.

ಕೇರಳದಲ್ಲಿ ಎಲ್‍ಡಿಎಫ್ ಸರ್ಕಾರಕ್ಕೆ ಬಂದ ನಂತರ ಸಚಿವರು ರಾಜೀನಾಮೆ ನೀಡುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ 2016ರ ಅಕ್ಟೋಬರ್ ನಲ್ಲಿ ಕೈಗಾರಿಕಾ ಸಚಿವ ಇ.ಪಿ.ಜಯರಾಜನ್ ಅವರು ಸ್ವಜನಪಕ್ಷಪಾತದ ಆರೊಪ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

English summary
The government on Monday announced ordered a judicial probe into the allegations against former minister A K Saseendran. Chief minister Pinarayi Vijayan told the media that a judicial inquiry will be initiated to probe the matter after which further action will be initiated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X