ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳ ಸರ್ಕಾರಿ ವೆಬ್ ಸೈಟಿಗೆ ಪಾಕಿಸ್ತಾನಿಗಳಿಂದ ಕನ್ನ!

By Mahesh
|
Google Oneindia Kannada News

ತಿರುವನಂತಪುರಂ, ಸೆ. 27: 'ದೇವರ ನಾಡು' ಕೇರಳ ರಾಜ್ಯದ ಪ್ರಮುಖ ವೆಬ್ ಸೈಟ್ ಮೇಲೆ ಪಾಕಿಸ್ತಾನದ ಹ್ಯಾಕರ್ ಗಳ ಕಣ್ಣು ಬಿದ್ದಿದೆ. ಕೇರಳ ಸರ್ಕಾರದ ಅಧಿಕೃತ ವೆಬ್ ಸೈಟಿಗೆ ಹ್ಯಾಕರ್ಸ್ ಕನ್ನ ಹಾಕಿರುವ ಸುದ್ದಿ ಹೊರಬಂದಿದೆ. ಸದ್ಯಕ್ಕೆ ವೆಬ್ ಸೈಟ್ ಮುಖಪುಟದಲ್ಲಿ 'ದುರಸ್ತಿ ಕಾರ್ಯ ಜಾರಿಯಲ್ಲಿದೆ' ಎಂಬ ಫಲಕ ಹಾಕಲಾಗಿದೆ.

ಕೇರಳ ಸರ್ಕಾರದ ವೆಬ್ ಸೈಟ್ (www.kerala.gov.in) ಮೇಲೆ ಪಾಕಿಸ್ತಾನ ಮೂಲದ ಹ್ಯಾಕರ್ಸ್ ಶನಿವಾರ ತಡರಾತ್ರಿ ದಾಳಿ ಮಾಡಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಕೂಡಾ ಸ್ಪಷ್ಟಪಡಿಸಿದ್ದು, ಕೊಟ್ಟಾಯಂನಲ್ಲಿ ಈ ಬಗ್ಗೆ ಹೇಳಿಕೆ ನೀಡಿ' ಇದು ಮುಗಿದ ಅಧ್ಯಾಯ' ಏನು ಹಾನಿಯಾಗಿಲ್ಲ ಎಂದಿದ್ದಾರೆ.

Kerala government website hacked by Pakistani hackers

ಕೇರಳ ರಾಜ್ಯ ಪೊಲೀಸರು ಈ ಘಟನೆ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ವೆಬ್ ಸೈಟ್ ನ ಮುಖಪುಟಕ್ಕೆ ಮಾತ್ರ ಕನ್ನ ಹಾಕಲಾಗಿದ್ದು, ಸರ್ವರ್ ಗೆ ಯಾವುದೇ ಹಾನಿಯಾಗಿಲ್ಲ. ವೆಬ್ ಸೈಟ್ ನ ಅನೇಕ ಸಬ್ ಡೊಮೈನ್ ಗಳು ಈಗಲೂ ಕಾರ್ಯನಿರ್ವಹಿಸುತ್ತಿವೆ.

ಶಿಕ್ಷಣ, ಟೆಂಡರ್, ಗೆಜೆಟ್, ಸರ್ಕಾರಿ ಆದೇಶ, ಸಾಮಾಜಿಕ ಕಲ್ಯಾಣ ಇಲಾಖೆ ಸೇರಿದಂತೆ ಅನೇಕ ಸಬ್ ಡೊಮೈನ್ ಗಳು ಕಾರ್ಯನಿರ್ವಹಿಸುತ್ತಿವೆ.ಮುಖ್ಯಪುಟದ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಸರಿಪಡಿಸಲಾಗುವುದು ಎಂದು ಕೇರಳ ರಾಜ್ಯದ ಸರ್ಕಾರಿ ವೆಬ್ ಸೈಟ್ ನಿಯಂತ್ರಣ ಸಂಸ್ಥೆ ಇಮೇಜ್ ಟೆಕ್ನಾಲಜಿ ಪ್ರಕಟಿಸಿದೆ.

ಇದಕ್ಕೂ ಮುನ್ನ ಪಾಕಿಸ್ತಾನಿ ಮೂಲದ ಹ್ಯಾಕರ್ಸ್ ಎಂದು ಹೇಳಿಕೊಂದ ಗುಂಪೊಂದು ಕೇರಳದ ಅಧಿಕೃತ ವೆಬ್ ಸೈಟ್ ನಲ್ಲಿ ಭಾರತದ ತ್ರಿವರ್ಣ ಧ್ವಜ ಸುಡುವ ಚಿತ್ರವನ್ನು ಹಾಕಿ, ಪಾಕಿಸ್ತಾನ ಪರ ಘೋಷಣೆಗಳನ್ನು ಮುಖಪುಟದಲ್ಲಿ ಹಾಕಿದ್ದರು. (ಐಎಎನ್ ಎಸ್)

English summary
Suspected Pakistani hackers have hacked the official website of the Kerala government, www.keralagov.in. Chief Minister Oommen Chandy told reporters at his hometown Kottayam on Sunday that the hacking was a "grave issue".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X