ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಬರಿಮಲೆ ವಿಮಾನ ನಿಲ್ದಾಣಕ್ಕೆ ಕೇರಳ ಸರ್ಕಾರ ಗ್ರೀನ್ ಸಿಗ್ನಲ್

|
Google Oneindia Kannada News

ತಿರುವನಂತಪುರಂ, ಜುಲೈ 20 : ಶಬರಿಮಲೆ ದೇವಸ್ಥಾನಕ್ಕೆ ಬರುವ ಲಕ್ಷಾಂತರ ಯಾತ್ರಿಕರ ಅನುಕೂಲಕ್ಕಾಗಿ ವಿಮಾನಯಾನ ಸಂಪರ್ಕ ಕಲ್ಪಿಸಲು ಕೇರಳ ಸರ್ಕಾರ ಮುಂದಾಗಿದೆ.

ಶಬರಿಮಲೆ ಅಯ್ಯಪ್ಪಸ್ವಾಮಿ ಹುಂಡಿಯಲ್ಲಿ ಪಾಕಿಸ್ತಾನದ ನೋಟು ಪತ್ತೆ!ಶಬರಿಮಲೆ ಅಯ್ಯಪ್ಪಸ್ವಾಮಿ ಹುಂಡಿಯಲ್ಲಿ ಪಾಕಿಸ್ತಾನದ ನೋಟು ಪತ್ತೆ!

ಶಬರಿಮೆಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಆಗಮಿಸುವ ಭಕ್ತರಿಗೆ ವಿಮಾನಯಾನ ಸಂಪರ್ಕ ಕಲ್ಪಿಸಲು ಶಬರಿಮಲೆಯಿಂದ 48 ಕಿ.ಮೀ.ದೂರದಲ್ಲಿರುವ ಕೊಟ್ಟಾಯಂ ಜಿಲ್ಲೆಯ ಚೆರುವಾಲಿ ಎಸ್ಟೇಟ್‌ ನಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಕೇರಳ ಸರ್ಕಾರ ಬುಧವಾರ ಒಪ್ಪಿಗೆ ಸೂಚಿಸಿದೆ.

Kerala government clears plot for Sabarimala airport

ಪ್ರಸ್ತುತ ಯಾತ್ರಿಕರು ರಸ್ತೆ ಮಾರ್ಗವಾಗಿ ಮಾತ್ರವೇ ಶಬರಿಮಲೆಗೆ ಹೋಗಬಹುದಾಗಿದೆ. ಇತ್ತೀಚಿಗೆ ಶಬರಿಮಲೆಗೆ ಹೋಗುವ ಯಾತ್ರಿಕರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಕೊಟ್ಟಾಯಂ ಜಿಲ್ಲೆಯ ಕಂಜಿರಪಾಳ್ಯ ತಾಲೂಕಿನಲ್ಲಿ ಸುಮಾರು 2,263 ಎಕರೆ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ನಿರ್ಮಿಸಿಲು ಕೇರಳ ಸಚಿವ ಸಂಪುಟ ಸಭೆ ಗ್ರೀನ್ ಸಿಗ್ನಲ್ ನೀಡಿದೆ.

ಶಬರಿಮಲೆಯಿಂದ 48 ಕಿ.ಮೀ. ದೂರದಲ್ಲಿರುವ ಕಂಜಿರಾಪಲ್ಲಿಯಲ್ಲಿರುವ ಚೆರುವಾಲಿ ಎಸ್ಟೇಟ್ 2263 ಎಕರೆ ಪ್ರದೇಶಕ್ಕೆ ವ್ಯಾಪಿಸಿದೆ. ಹೆಚ್ಚುವರಿ ಮುಖ್ಯಕಾರ್ಯದರ್ಶಿ ಪಿ.ಎಚ್. ಕುರಿಯನ್ ನೇತೃತ್ವದ ನಾಲ್ವರು ಸದಸ್ಯರ ಸಮಿತಿ ವಿಮಾನ ನಿಲ್ದಾಣಕ್ಕೆ ಚೆರುವಾರಿ ಎಸ್ಟೇಟ್ ಅನ್ನು ಶಿಫಾರಸು ಮಾಡಿತ್ತು.

English summary
The Kerala government has decided to create a new airport to cater to the inflow of devotees to Sabarimala temple in the state. The state cabinet on Wednesday decided to initiate the process to set up the airport at Harrisons Malayalam Ltd’s Cheruvally Estate in Kanjirapally taluk of Kottayam district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X