ಕೇರಳದಲ್ಲಿ ಮತ್ತೊಬ್ಬ ಆರೆಸ್ಸೆಸ್ ಕಾರ್ಯಕತನ ಭೀಕರ ಹತ್ಯೆ

Posted By:
Subscribe to Oneindia Kannada

ತಿರುವನಂತಪುರಂ, ಜುಲೈ 30: ಕೇರಳದಲ್ಲಿ ರಾಜಕೀಯ ದ್ವೇಷದಿಂದ ಹಲ್ಲೆ, ಹತ್ಯೆಗಳ ಸರಣಿ ಮುಂದುವರೆದಿದೆ. ಬಿಜೆಪಿ ಕೇಂದ್ರ ಕಚೇರಿ ಮೇಲೆ ಸಿಪಿಎಂ ಕಾರ್ಯಕರ್ತರಿಂದ ದಾಳಿ ನಡೆದ ಬೆನ್ನಲ್ಲೇ ಶನಿವಾರ ಸಂಜೆ ವೇಳೆ ಆರೆಸ್ಸೆಸ್ ಕಾರ್ಯಕರ್ತನೊಬ್ಬನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ.

ಆರ್.ಎಸ್.ಎಸ್. ಕಾರ್ಯಕರ್ತನ ಹತ್ಯೆಗೆ ಸಿ.ಪಿ.ಎಂ. ಕಾರ್ಯಕರ್ತರೇ ಕಾರಣ ಎಂದು ಆರೋಪಿಸಿರುವ ಬಿಜೆಪಿ, ರಾಜ್ಯವ್ಯಾಪ್ತಿ ಪ್ರತಿಭಟನೆಗೆ ಕರೆ ನೀಡಲಾಗಿದೆ.

Kerala: BJP calls for strike over murder of RSS worker

ತಿರವನಂತಪುರಂನ ಶ್ರೀಕಾರ್ಯಂ ಏರಿಯಾದಲ್ಲಿ ಅರೆಸ್ಸೆಸ್ ಕಾರ್ಯಕರ್ತ ರಾಜೇಶ್ ಎಡವಕೊಡೆ ಅವರನ್ನು ಶನಿವಾರ ಸಂಜೆ ಹತ್ಯೆ ಮಾಡಲಾಗಿದೆ. ಶಾಖೆ ಮುಗಿಸಿಕೊಂಡು ಮನೆಗೆ ಹಿಂತಿರುಗುತ್ತಿದ್ದ ರಾಜೇಶ್ ಮೇಲೆ ಮಾರಾಕಾಸ್ತ್ರಗಳಿಂದ ಕೊಚ್ಚಿ ಹಾಕಲಾಗಿದೆ.

ರಾಜೇಶ್ ದೇಹದ 20ಕ್ಕೂ ಅಧಿಕ ಕಡೆಗಳಲ್ಲಿ ಗಾಯಗಳಾಗಿ ತೀವ್ರ ರಕ್ತಸ್ರಾವದಿಂದ ರಸ್ತೆಯಲ್ಲಿ ಬಿದ್ದಿದ್ದ ರಾಜೇಶ್ ನನ್ನು ತಿರುವನಂತಪುರಂ ಮೆಡಿಕಲ್ ಕಾಲೇಜಿಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ವೇಳೆಗೆ ರಾಜೇಶ್ ಸಾವನ್ನಪ್ಪಿದ್ದಾನೆ.

Political Violence In Kerala | Oneindia kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kerala BJP chief on Sunday called for a statewide strike over murder of an RSS worker in Thiruvananthapuram's Sreekaryam.
Please Wait while comments are loading...