ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಳದ ಬಿಷಪ್ ಮನೆಯಿಂದ 150 ಗ್ರಾಂ ಚಿನ್ನ ಲೂಟಿ

|
Google Oneindia Kannada News

ಕೊಟ್ಟಾಯಮ್, ನ.27: ಕೊಟ್ಟಾಯಮ್(ಕೇರಳ)ನ ಜಾಕೋಬೈಟ್ ಸಿರಿಯನ್ ಕ್ರಿಶ್ಚಿಯನ್ ಚರ್ಚ್ ಬಿಷಪ್ ವೊಬ್ಬರು ತಮ್ಮ ಮನೆಯನ್ನು ದರೋಡೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದಾರೆ.

ಮನೆಯಲ್ಲಿದ್ದ 150 ಗ್ರಾಂ ಚಿನ್ನ ಸೇರಿದಂತೆ 48 ಸಾವಿರ ರೂ. ನಗದು ಮತ್ತು ಅತ್ಯಾಧುನಿಕ ಕ್ಯಾಮರಾವೊಂದನ್ನು ದೋಚಲಾಗಿದೆ ಎಂದು ಗುರುವಾರ ಬಿಷಪ್ ಮೋರ್ ಪೊಲಿಕಾರ್ ಪೋಸ್ ಜಕೇರಿಯನ್ ಹೇಳಿಕೆ ನೀಡಿದ್ದಾರೆ.[ಸಿಕ್ರೆಟ್ ಸಂಗಾತಿ ಮತ್ತು ಕತ್ತಲು ಕಪಾಟು!]

kerala

ನಾನು ವೈನಾಡು ಬಿಟ್ಟು ಕೊಟ್ಟಾಯಮ್ ಗೆ ಬಂದಾಗಲೆಲ್ಲ ಮನ್ನಾರ್ ಕಾಡುನಲ್ಲಿರುವ ಮನೆಯಲ್ಲಿ ಉಳಿದುಕೊಳ್ಳುತ್ತೇನೆ. ಎಂದಿನಂತೆ ಬೆಳಗ್ಗೆ ಮೂರು ಜನ ಶಿಷ್ಯರು ನನ್ನ ಮನೆಗೆ ಬಂದಿದ್ದಾರೆ ಆಗ ಬಾಗಿಲು ಒಡೆದು ಕಳ್ಳತನ ಮಾಡಿರುವುದು ಗೊತ್ತಾಗಿದೆ ಎಂದು ಹೇಳಿದ್ದಾರೆ. 27 ಗ್ರಾಂ ತೂಕದ ಚಿನ್ನದ ಸರ, ಎರಡು ಬಂಗಾರದ ರಿಂಗ್ ಗಳು ಕಳ್ಳತನವಾಗಿವೆ ಎಂದು ದೂರು ನೀಡಿದ್ದಾರೆ.[ಅಶ್ಲೀಲ ಚಿತ್ರ ಕ್ಲಿಕ್ಕಿಸಿ ಹಣ ಕೇಳಿದವರ ಬಂಧನ]

ಪೊಲೀಸ್ ಇನ್ಸ್ ಪೆಕ್ಟರ್ ಸಜು ವರ್ಘಶೇ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು ಶ್ವಾನ ದಳದಿಂದ ಪರಿಶೀಲನೆ ನಡೆಸಲಾಗಿದೆ. ಆದರೆ ಈ ಬಿಷಪ್ ಪುಣ್ಯಾತ್ಮ ಇಷ್ಟು ಬಂಗಾರ ಮತ್ತು ನಗದನ್ನು ಮನೆಯಲ್ಲಿ ಯಾಕೆ ತಂದಿಟ್ಟುಕೊಂಡಿದ್ದ ಎಂಬುದೇ ಉತ್ತರ ತಿಳಿಯದ ಪ್ರಶ್ನೆಯಾಗಿದೆ.

English summary
A bishop of the Jacobite Syrian Christian Church here said Thursday his house was robbed of 19 sovereigns of gold, Rs.48,000 cash. Bishop Mor Policarpose Zacharias told that he left for his headquarters in Wayanad district from Kottayam Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X