ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೊಲೀಸ್ ಕಸ್ಟಡಿಯಲ್ಲಿ ವ್ಯಕ್ತಿ ಸಾವು, ಹರತಾಳಕ್ಕೆ ಕರೆ ನೀಡಿದ ಬಿಜೆಪಿ

ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಬಿಎಂಎಸ್ ಕಾರ್ಯಕರ್ತ ಸಂದೀಪ್ (25) ಶುಕ್ರವಾರ ಸಂಜೆ ಮೃತರಾಗಿದ್ದಾರೆ.ಪೊಲೀಸರ ದೌರ್ಜನ್ಯಕ್ಕೆ ಸಂದೀಪ್ ಬಲಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.

By Mahesh
|
Google Oneindia Kannada News

ಕಾಸರಗೋಡು, ಏಪ್ರಿಲ್ 08: ಸಾರ್ವಜನಿಕ ಸ್ಥಳದಲ್ಲಿ ಮದ್ಯಪಾನ ಮಾಡುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಬಿಎಂಎಸ್ ಕಾರ್ಯಕರ್ತ ಸಂದೀಪ್ (25) ಶುಕ್ರವಾರ ಸಂಜೆ ಮೃತರಾಗಿದ್ದಾರೆ. ಕಾಸರಗೋಡು ನಗರಠಾಣಾ ಪೊಲೀಸರ ದೌರ್ಜನ್ಯಕ್ಕೆ ಸಂದೀಪ್ ಬಲಿಯಾಗಿದ್ದಾನೆ ಎಂದು ಸಂದೀಪ್ ಕುಟುಂಬಸ್ಥರು ಆರೋಪಿಸಿದ್ದಾರೆ.

ಪೊಲೀಸ್ ದೌರ್ಜನ್ಯದಿಂದ ಸಂದೀಪ್ ಮೃತಪಟ್ಟಿರುವುದಾಗಿ ಆರೋಪಿಸಿ ಸಂಘಪರಿವಾರ ಕಾರ್ಯಕರ್ತರು ಕಾಸರಗೋಡು ನಗರ ಠಾಣೆಗೆ ಮುತ್ತಿಗೆ ಹಾಕಿದರು. ಶನಿವಾರ(ಏಪ್ರಿಲ್ 09) ದಂದು ಕಾಸರಗೋಡು ಜಿಲ್ಲೆಯಲ್ಲಿ ಹರತಾಳ ನಡೆಸಲು ಬಿಜೆಪಿ ಕರೆ ನೀಡಿದೆ. ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ ಆರರಿಂದ ಸಂಜೆ ಆರರತನಕ ಹರತಾಳ ನಡೆಯಲಿದೆ.

Sandeep

ಬೀರಂತಬೈಲ್ ನ ಕೃಷಿ ಉತ್ಪನ್ನ ಕೇಂದ್ರ ಸಮೀಪ ಮದ್ಯಪಾನ ಮಾಡುತ್ತಿದ್ದ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದರು. ಸಂದೀಪ್ ಸೇರಿದಂತೆ ಮೂವರನ್ನು ವಶಕ್ಕೆ ಪಡೆಯಲಾಗಿತ್ತು. ಪೊಲೀಸರ ಹಿಡಿತದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸಂದೀಪ್ ಆಯತಪ್ಪಿ ಬಿದ್ದಿದ್ದಾರೆ. ಕೂಡಲೇ ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲು ಯತ್ನಿಸಲಾಗಿದೆ. ಆದರೆ, ಹೃದಯಾಘಾತದಿಂದ ಸಂದೀಪ್ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

English summary
Kasaragod: A BMS activist Sandeep (25) who was accused of consuming alcohol in public place died in Police custody on Friday(April 8. Sandeep's family alleged that police torture resulted in his death. BJP called for a Hartal in Kasaragod district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X