ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಎಸ್‌ಐಎಸ್‌ ಸೇರೋದ್ರಲ್ಲಿ ಕರ್ನಾಟಕದವರೇ ಫಸ್ಟ್!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ನವೆಂಬರ್, 24: ಕರ್ನಾಟಕದಿಂದಲೇ ಅತಿ ಹೆಚ್ಚು ಯುವಕರು ಐಎಸ್ ಐಸ್ ಉಗ್ರ ಸಂಘಟನೆ ಸೇರುತ್ತಿದ್ದಾರೆಯೇ? ಇಂಥದ್ದೊಂದು ಗಂಭೀರ ಪ್ರಶ್ನೆ ಹುಟ್ಟಿಕೊಳ್ಳಲು ಸಿಕ್ಕಿರುವ ಮಾಹಿತಿಗಳು ಪುಷ್ಠಿ ನೀಡುತ್ತವೆ.

ಉತ್ತರ ಕನ್ನಡ ಜಿಲ್ಲೆ ಭಟ್ಕಳದ ನಿವಾಸಿ ಅರ್ಮಾರ್ ಎಂಬಾತ ಸಂಘಟನೆಗೆ ಯುವಕರನ್ನು ಸೆಳೆಯುವುದರಲ್ಲಿ ಸದಾ ಕಾರ್ಯನಿರತನಾಗಿದ್ದ. 'ಅನ್ಶರ್ ಉಲ್ ತಹೀದ್' ಎಂಬ ಸಂಸ್ಥೆ ಹೆಸರಿನಲ್ಲಿ ಯುವಕರಿಗೆ ಗಾಳ ಹಾಕುತ್ತಿದ್ದ ಎಂಬ ಸಂಗತಿ ಬಯಲಾಗಿದೆ.[ಐಎಸ್ ಐಎಸ್ ಸೇರುವ ಯುವಕರಿಗೆ ಹಣ, ಕೆಲಸದ ಆಮಿಷ]

Karnataka tops list of ISIS recruits

ಕೆಲ ತಿಂಗಳ ಹಿಂದೆಯೇ ಅರ್ಮಾರ್ ಸಾವಿಗೀಡಾಗಿದ್ದ ಎಂಬ ಸುದ್ದಿ ಬಂದಿತ್ತು. ಆದರೆ ಭಾರತದ ಗುಪ್ತಚರದಳ ಈ ಮಾಹಿತಿಯನ್ನು ದೃಢಪಡಿಸಿರಲಿಲ್ಲ. ಆದರೆ ಇದೀಗ ಐಎಸ್ ಐಎಸ್ ಪರವಾಗಿ ಕೆಲಸ ಮಾಡುತ್ತಿದ್ದ 6 ಜನ ಭಾರತೀಯ ಮೂಲದವರು ಇರಾಕ್ ಮತ್ತು ಸಿರಿಯಾದಲ್ಲಿ ಸಾವನ್ನಪ್ಪಿದ್ದು ಅದರಲ್ಲಿ ಅರ್ಮಾರ್ ಸಹ ಸೇರಿದ್ದಾನೆ ಎಂದು ತಿಳಿಸಿದೆ.

ಸಾವನ್ನಪ್ಪಿದ್ದ ಆರು ಜನ ಯಾರು?
ಒಟ್ಟು ಆರು ಜನ ಭಾರತೀಯರು ಸಾವನ್ನಪ್ಪಿದ್ದಾರೆ. ತೆಲಂಗಾಣದ ಅತೀಫ್ ವಾಸೀಮ್, ಬೆಂಗಳೂರು ಶಿವಾಜಿನಗರದ ಮೊಹಮದ್ ಉಮರ್, ಭಟ್ಕಳದ ಮೌಲಾನಾ ಅಬ್ದುಲ್ ಕಬೀರ್ ಸುಲ್ತಾನ್ ಅರ್ಮಾರ್, ಥಾಣೆಯ ಸಹೀಮ್ ಫಾರೂಕ್ ಥಂಕಿ, ಬೆಂಗಳೂರಿನ ಫಯಾಜ್ ಮಸೂದ್ , ಅಜಂಗಢದ ಮೊಹಮದ್ ಸಜೀದ್ ಸಾವಿಗೀಡಾದ ಆರು ಜನರು.[ಭಾರತಕ್ಕೆ ಬಂದ ಉಗ್ರ ನವೀದ್ ಎಲ್ಲಿದ್ದಾನೆ?]

ಈಗ ಭಾರತದ 23 ಜನ ಐಸ್ ಐಸ್ ಜತೆ ಕೆಲಸ ಮಾಡುತ್ತಿದ್ದಾರೆ. ಅದರಲ್ಲಿ 5 ಜನ ಕರ್ನಾಟಕದವರು, 3 ಜನ ತಮಿಳುನಾಡಿನವರು ಮತ್ತು ತೆಲಂಗಾಣ, ಮಹಾರಾಷ್ಟ್ರ ಮತ್ತು ಕೇರಳದ ತಲಾ ನಾಲ್ಕು ಜನ ಸೇರಿದ್ದಾರೆ ಎಂದು ಗುಪ್ತಚರ ಇಲಾಖೆ ವರದಿಯಲ್ಲಿ ತಿಳಿಸಿದೆ.

ಭಟ್ಕಳದ ಅರ್ಮಾರ್ ಸಾವಿನ ನಂತರ ಆತನ ಸಹೋದರ ಶಫಿ ಅರ್ಮಾರ್ ಚಲನವಲನಗಳ ಮೇಲೆ ಗುಪ್ತಚರ ಇಲಾಖೆ ಕಣ್ಣಿಟ್ಟಿದೆ. ಯುಎಇಯಿಂದ ಶಫಿ ಕೆಲ ವ್ಯವಹಾರಗಳನ್ನು ನಿಯಂತ್ರಿಸುತ್ತಿದ್ದಾನೆ ಎಂಬ ಮಾಹಿತಿಯಿದೆ. ಈತ ಅಲ್ಲಿಂದ ಸಿರಿಯಾಕ್ಕೆ ಹಾರಲು ಯತ್ನ ನಡೆಸಿದ್ದಾನೆ ಎಂದು ಇಲಾಖೆ ತಿಳಿಸಿದೆ.

English summary
There had been a great deal of confusion over the status of Sultan Armar, the head and founder of the Ansar-ul-Tawhid which is the recruiting agency for the ISIS in India. Armar a resident of Bhatkal was a major operative and had even been declared the emir of the Ansar in a video message by none other than Abu Bakr al-Bhagdadi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X