ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡೈರಿಯಲ್ಲಿ ಕಂಡ ಡೊನೆಷನ್ ಆರ್ ಜಿ ಟೂರಿಗೆ ವಿನಿಯೋಗ: ಸಿಟಿಆರ್

ಕರ್ನಾಟಕದ ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಅವರ ಮನೆಯಿಂದ ವಶ ಪಡಿಸಿಕೊಳ್ಳಲಾಗಿದೆ ಎನ್ನಲಾದ ಡೈರಿಯ ಆಯ್ದ ಭಾಗಗಳು ದೆಹಲಿಯಲ್ಲಿ ಗುರುವಾರ ಸಂಜೆ ಬಿಡುಗಡೆಯಾಗಿದೆ. ಇದಕ್ಕೆ ಟ್ವಿಟ್ಟರ್ ನಲ್ಲಿ ಬಗೆ ಬಗೆ ಪ್ರತಿಕ್ರಿಯೆಗಳು ಹರಿದು ಬಂದಿವೆ

By Mahesh
|
Google Oneindia Kannada News

ಬೆಂಗಳೂರು, ಫೆಬ್ರವರಿ 23: ಕರ್ನಾಟಕದ ವಿಧಾನ ಪರಿಷತ್ ಸದಸ್ಯ ಗೋವಿಂದ ರಾಜು ಅವರ ಮನೆಯಿಂದ ವಶ ಪಡಿಸಿಕೊಳ್ಳಲಾಗಿದೆ ಎನ್ನಲಾದ ಡೈರಿಯ ಆಯ್ದ ಭಾಗಗಳು ದೆಹಲಿಯಲ್ಲಿ ಗುರುವಾರ ಸಂಜೆ ಬಿಡುಗಡೆಯಾಗಿದೆ. ರಾಷ್ಟ್ರೀಯ ಮಾಧ್ಯಮದ ಮೂಲಕ ಈ ಸುದ್ದಿ ಸ್ಫೋಟಗೊಳ್ಳುತ್ತಿದ್ದಂತೆ ಟ್ವಿಟ್ಟರ್ ನಲ್ಲಿ ಬಗೆ ಬಗೆ ಪ್ರತಿಕ್ರಿಯೆಗಳು ಹರಿದು ಬಂದಿವೆ.

ಕಾಂಗ್ರೆಸ್ ಹೈ ಕಮಾಂಡಿಗೆ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ಸಾವಿರಾರು ಕೋಟಿ ರು ದೇಣಿಗೆ ನೀಡಿದೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇತ್ತೀಚೆಗೆ ಆರೋಪ ಮಾಡಿದ್ದರು. ಈ ಆರೋಪಕ್ಕೆ ಪೂರಕವಾಗಿ ಡೈರಿ ಬಿಡುಗಡೆಯಾಗಿದ್ದು, ಡೈರಿ ತುಂಬಾ ಯಾರಿಗೆ ಎಷ್ಟು ದುಡ್ಡು ನೀಡಲಾಗಿದೆ ಎಂಬ ವಿವರವಿದೆ.

ಆದರೆ, ಎಲ್ಲಾ ಹೆಸರುಗಳನ್ನು ಇನಿಶಿಯಲ್ ನಲ್ಲಿ ಬರೆಯಲಾಗಿದೆ. ಉದಾ: KJG,RG..ಇತ್ಯಾದಿ, ರಾಜ್ಯ ಸರ್ಕಾರದ ಪ್ರಭಾವಿ ಸಚಿವರ ಹೆಸರುಗಳು, ನೋನಿಯಾ ಗಾಂಧಿ, ರಾಹುಲ್ ಗಾಂಧಿ ಕಚೇರಿಗಳಿಗೆ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಎಂ.ವೋರಾ, ದಿಗ್ವೀಜಯ್ ಸಿಂಗ್ ಮತ್ತಿತರಿಗೆ ಕೋಟಿಗಳಿಗೆ ಹಣ ಸಂದಾಯವಾಗಿದೆ ಎಂಬ ಹೋಲಿಕೆಯ ಇನಿಶಿಯಲ್ ಗಳಿವೆ. [ಡೈರಿ ಸ್ಪೋಟ: ಕೋಟಿ ಕೋಟಿ ಹಣದ ಸಂಪೂರ್ಣ ವಿವರ]

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆಗಳು ಬಂದಿದ್ದು, ಈ ಎಲ್ಲಾ ಮೊತ್ತವನ್ನು ರಾಹುಲ್ ಗಾಂಧಿ ಅವರ ವಿದೇಶಿ ಪ್ರವಾಸಕ್ಕೆ ಖರ್ಚು ಮಾಡಲಾಗಿದೆ ಎಂದು ಸಾರ್ವಜನಿಕರು ಹಾಸ್ಯ ಮಾಡಿದ್ದಾರೆ.

ಮಾಧ್ಯಮಗಳಿಂದ ಡೈರಿ ಬಹಿರಂಗ

ಮಾಧ್ಯಮಗಳಿಂದ ಡೈರಿ ಬಹಿರಂಗ

ಕೆಪಿಸಿಸಿ ಖಜಾಂಚಿ ಹಾಗೂ ಮುಖ್ಯಮಂತ್ರಿಯವರ ಸಂಸದೀಯ ಕಾರ್ಯದರ್ಶಿ, ಎಂಎಲ್ ಸಿ ಕೆ.ಗೋವಿಂದರಾಜು ಅವರ ಮನೆಯ ಮೇಲೆ 2016ರಲ್ಲಿ ಐಟಿ ದಾಳಿ ನಡೆಸಲಾಗಿತ್ತು.[ವಿವರ ಇಲ್ಲಿ ಓದಿ] ಈ ಸಂದರ್ಭದಲ್ಲಿ ಜಪ್ತಿ ಮಾಡಲಾದ ಡೈರಿ ಈಗ ಜಾರಿ ನಿರ್ದೇಶನಾಲಯದ ವಶದಲ್ಲಿದೆ. ಇದೇ ಡೈರಿಯ ಬಗ್ಗೆ ಯಡಿಯೂರಪ್ಪ ಸುಳಿವು ನೀಡಿದ್ದರು. ಅದೇ ಡೈರಿ ವಿವರ ಈಗ ಬಹಿರಂಗವಾಗಿದೆ.

ಸಿಟಿ ರವಿ ಪ್ರತಿಕ್ರಿಯೆ

ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದ ರಾಜು ಅವರ ಡೈರಿಯಲ್ಲಿ ಇರುವ ಮೊತ್ತದಲ್ಲಿ ಬಹುಪಾಲು ರಾಹುಲ್ ಗಾಂಧಿ ಅವರ ವಿದೇಶಿ ಯಾತ್ರೆಗೆ ವಿನಿಯೋಗಿಸಲಾಗಿದೆ ಎಂದ ಬಿಜೆಪಿ ಮುಖಂಡ ಸಿ.ಟಿ ರವಿ.

ಕುರ್ತಾ ಖರೀದಿಸಲಿಲ್ಲವೇ

ಸಾವಿರಾರು ಕೋಟಿ ರು ದೇಣಿಗೆ ಸಿಕ್ಕರೂ ರಾಹುಲ್ ಗಾಂಧಿ ಅವರು ಹರಿದ ಕುರ್ತಾ ಹಾಕಿಕೊಂಡು ತಿರುಗಾಡುತ್ತಿದ್ದಾರೆ. ಹೊಸ ಕುರ್ತಾ ಖರೀದಿಗೆ ದುಡ್ಡು ಸಾಲುತ್ತಿಲ್ಲವೇ?

ಸರ್ಕಾರದಿಂದ ಡೈರಿ ಭಾಗ್ಯ

ಸಿದ್ದರಾಮಯ್ಯ ಸರ್ಕಾರದಿಂದ ಡೈರಿ ಭಾಗ್ಯ, ಭ್ರಷ್ಟಾಚಾರ ಭಾಗ್ಯ #donationagate

ಟಿವಿ ಸ್ಕ್ರೀನ್ ಶಾಟ್ ಹಂಚಿಕೆ

ಟೈಮ್ಸ್ ನೌ #donationgate ಅಡಿಯಲ್ಲಿ ಭ್ರಷ್ಟಾಚಾರದ ಮಾಹಿತಿ ಬಹಿರಂಗ ಪಡಿಸುತ್ತಿದ್ದಂತೆ ವಿವರಗಳನ್ನು ಹಂಚಿಕೊಂಡ ಸಾರ್ವಜನಿಕರು.

ಬಿಬಿಎಂಪಿ ಹಗರಣ ಬಯಲಿಗೆ

ಯಡಿಯೂರಪ್ಪ ಅವರು ಶುಕ್ರವಾರದಂದು 3,000 ಕೋಟಿ ರು ಮೌಲ್ಯದ ಬಿಬಿಎಂಪಿ ಹಗರಣದ ವಿವರ ನೀಡಲಿದ್ದಾರೆ, ಕಾದು ನೋಡಿ

English summary
A diary containing several names to whom kickbacks were paid allegedly by Congress MLC Govindraj has become public. The diary entry of the leader who was recently raided by the Income Tax department contains initials.. Here are the reaction on Twitter.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X