ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕ ನಮ್ಮ ದೊಡ್ಡಣ್ಣ, ಶತ್ರುವಲ್ಲ: ಗೋವಾ ಸಿಎಂ

By Mahesh
|
Google Oneindia Kannada News

ಪಣಜಿ, ಜುಲೈ 30: ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ಖಂಡಿಸಿ ಕರ್ನಾಟಕದಲ್ಲಿ ಶನಿವಾರ ಬಂದ್ ಆಚರಿಸಲಾಗುತ್ತಿದೆ. ತೀರ್ಪು ಬಂದ ಕೂಡಲೇ 'ಹೋರಾಟ ಇನ್ನೂ ಮುಗಿದಿಲ್ಲ' ಎಂದು ಪ್ರತಿಕ್ರಿಯಿಸಿದ್ದ ಗೋವಾ ಸಿಎಂ ಲಕ್ಷ್ಮಿಕಾಂತ್ ಪರ್ಸೆಕರ್ ಅವರು ಈಗ ಉಲ್ಟಾ ಹೇಳಿಕೆ ನೀಡಿದ್ದಾರೆ.

'ಕರ್ನಾಟಕ-ಗೋವಾ ಅಕ್ಕ ಪಕ್ಕ ರಾಜ್ಯಗಳು, ನಾವು ಕರ್ನಾಟಕವನ್ನು ಶತ್ರುವಿನಂತೆ ಕಾಣುತ್ತಿಲ್ಲ. ಕರ್ನಾಟಕ ನಮ್ಮ ದೊಡ್ಡಣ್ಣ ಇದ್ದ ಹಾಗೆ, ಮಹದಾಯಿ ತೀರ್ಪಿನ ಬಗ್ಗೆ ಕಾನೂನು ಹೋರಾಟ ಏನೇ ಇರಬಹುದು, ಉಭಯ ರಾಜ್ಯಗಳ ಪರಸ್ಪರ ಸೌಹಾರ್ದತೆಗೆ ಧಕ್ಕೆ ಉಂಟಾಗಬಾರದು' ಎಂದು ಗೋವಾ ಸಿಎಂ ಲಕ್ಷ್ಮಿಕಾಂತ್ ಹೇಳಿದ್ದಾರೆ.

Parsekar

ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲಿ ಕೆಲ ರಾಜಕೀಯ ಶಕ್ತಿಗಳು ಎರಡು ರಾಜ್ಯಗಳ ನಡುವೆ ವಿಷಬೀಜ ಬಿತ್ತುತ್ತಿವೆ. ಇದರಿಂದ ಜನರು ಉದ್ರಿಕ್ತಗೊಂಡು ಬಂದ್ ನಡೆಸುತ್ತಿದ್ದಾರೆ. ನಾಗರಿಕರಾಗಿ ನಾವು ವರ್ತಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಗೋವಾದಿಂದ ಕರ್ನಾಟಕಕ್ಕೆ ಬಸ್ ಸಂಚಾರ ಈಗಾಗಲೇ ಬಂದ್ ಆಗಿದೆ, ಸೋಮವಾರ ತನಕ ಬಸ್ ಸಂಚಾರ ಇರುವುದಿಲ್ಲ. ಆದರೆ, ಕರ್ನಾಟಕದಿಂದ ಗೋವಾಕ್ಕೆ ಬಸ್ ಸಂಚಾರ ನಿಲ್ಲಿಸಿಲ್ಲ. ಶನಿವಾರ ಮಾತ್ರ ಬಂದ್ ಕಾರಣ ಬಸ್ ಸಂಚಾರ ಸ್ತಬ್ಧವಾಗಿದೆ.

ಕರ್ನಾಟಕದಲ್ಲಿರುವ ಗೋವಾ ಮೂಲದವರನ್ನು ರಕ್ಷಿಸುವ ಭರವಸೆ ಸಿಕ್ಕಿದೆ. ಈ ಬಗ್ಗೆ ಮುಖ್ಯಕಾರ್ಯದರ್ಶಿಗಳು ಹಾಗೂ ಡಿಜಿಪಿಗಳು ಕರ್ನಾಟಕದ ಪ್ರತಿನಿಧಿಗಳ ಜತೆ ನಿರಂತ್ರ ಸಂಪರ್ಕದಲ್ಲಿದ್ದಾರೆ. ಕಾನೂನು ಹೋರಾಟ ಮುಂದುವರೆಯಲಿದೆ. ನ್ಯಾಯಾಂಗಕ್ಕೆ ತಲೆ ಬಾಗಬೇಕು. ಇದು ಅಂತಾರಾಜ್ಯ ಯುದ್ಧವಲ್ಲ ಎಂದು ಪರ್ಸೆಕರ್ ಹೇಳಿದ್ದಾರೆ. (ಪಿಟಿಐ)

English summary
Chief Minister Laxmikant Parsekar termed Karnataka as a "big brother" of Goa and said the neighbouring state should not be seen as an "enemy" on the Mahadayi river water diversion issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X