ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದು ವಿಜಯ್ ದಿವಸ್: ಕಾರ್ಗಿಲ್ ಯೋಧರಿಗೆ ಪ್ರಧಾನಿ ಮೋದಿ ಗೌರವ ನಮನ

ಕಾರ್ಗಿಲ್ ಹೀರೋಗಳನ್ನು ಸ್ಮರಿಸಿದ ಪ್ರಧಾನಿ ಮೋದಿ. ಟ್ವಿಟ್ಟರ್ ನಲ್ಲಿ ಸ್ಮರಣೆ ಮಾಡಿದ ಪ್ರಧಾನಿ.

|
Google Oneindia Kannada News

ನವದೆಹಲಿ, ಜುಲೈ 26: 1999ರಲ್ಲಿ ನಡೆದಿದ್ದ ಕಾರ್ಗಿಲ್ ಯುದ್ಧದಲ್ಲಿ ವೀರ ಮರಣವನ್ನಪ್ಪಿದ ಭಾರತೀಯ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ಅಶ್ರುನಮನ ಸಲ್ಲಿಸಿದ್ದಾರೆ.

ಟ್ವೀಟರ್ ನಲ್ಲಿ ಭಾರತೀಯ ಸೇನಾನಿಗಳ ತ್ಯಾಗ, ಬಲಿದಾನಗಳನ್ನು ನೆನಪಿಸಿಕೊಂಡಿರುವ ಮೋದಿ, ''ಕಾರ್ಗಿಲ್ ಯುದ್ಧದ ಗೆಲುವಿನ ಪ್ರತೀಕವಾದ ವಿಜಯ್ ದಿವಸ್ ನಿಂದಾಗಿ, ಭಾರತದ ಸೇನಾ ಶಕ್ತಿಯು ಜಗತ್ತಿನ ಮುಂದೆ ಅನಾವರಣಗೊಂಡಿದೆ. ಹಲವಾರು ಸೈನಿಕರ ನಿಶ್ಚಲ ಮನಸ್ಸಿನಿಂದ ಭಾರತವು ಎಂದೆಂದಿಗೂ ಸುರಕ್ಷಿತ ಎಂಬುದನ್ನು ಸಾಬೀತುಪಡಿಸಿದೆ'' ಎಂದು ಅವರು ಹೇಳಿದ್ದಾರೆ.

ವಿಜಯ್ ದಿವಸ್ ಅಂಗವಾಗಿ ಟ್ವೀಟ್ ಮಾಡಿರುವ ಕೇಂದ್ರ ರಕ್ಷಣಾ ಸಚಿವ ಅರುಣ್ ಜೇಟ್ಲಿ, ''ಕಾರ್ಗಿಲ್ ಯುದ್ಧದಲ್ಲಿ ದೇಶಕ್ಕಾಗಿ ಅದ್ಭುತ ಸೇವೆಗೈದ ಎಲ್ಲಾ ಭಾರತೀಯ ಯೋಧರಿಗೆ ನಮ್ಮ ಹೃತ್ಪೂರ್ವಕ ನಮನ'' ಎಂದಿದ್ದಾರೆ.

17 ವರ್ಷಗಳ ಹಿಂದಿನ ಯುದ್ಧ

17 ವರ್ಷಗಳ ಹಿಂದಿನ ಯುದ್ಧ

ಇಲ್ಲಿಗೆ ಸರಿಯಾಗಿ ಹದಿನೇಳು ವರ್ಷಗಳ ಹಿಂದೆ, ಭಾರತವು ಪಾಕಿಸ್ತಾನದ ಕುತಂತ್ರದ ಪ್ರತೀಕವಾಗಿದ್ದ ಕಾರ್ಗಿಲ್ ಯುದ್ಧವನ್ನು ಗೆದ್ದು ಕೊಂಡಿತ್ತು.
ಭಾರತ, ಪಾಕಿಸ್ತಾನ ಗಡಿ ಪ್ರದೇಶವಾದ ಕಾರ್ಗಿಲ್ ನಲ್ಲಿ ಪಾಕಿಸ್ತಾನ ಸೇನೆ ವಶಪಡಿಸಿಕೊಂಡಿದ್ದ ಪ್ರದೇಶಗಳನ್ನು ಭಾರತೀಯ ಸೇನೆ ಮರುವಶಪಡಿಸಿಕೊಂಡ ದಿನವಿದು.

ಅಕ್ರಮ ಅತಿಕ್ರಮಣ

ಅಕ್ರಮ ಅತಿಕ್ರಮಣ

ಅಂದಿನ ಪಾಕಿಸ್ತಾನದ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಆಜ್ಞೆಯ ಮೇರೆಗೆ ಪಾಕಿಸ್ತಾನ ಸೇನೆ, ಅಂದಿನ ಪ್ರಧಾನಿ ನವಾಜ್ ಷರೀಫ್ (ಈಗಲೂ ಅವರೇ ಅಲ್ಲಿಯ ಪ್ರಧಾನಿ) ಅವರ ಅನುಮತಿ ಪಡೆದು ಭಾರತದ ಪಾಲಿನ ಭೂಭಾಗವನ್ನು ಅತಿಕ್ರಮಿಸುತ್ತಾ ಬಂದಿತ್ತು.

ಗೆಲುವಿನ ಸಂಕೇತ ವಿಜಯ್ ದಿವಸ್

ಗೆಲುವಿನ ಸಂಕೇತ ವಿಜಯ್ ದಿವಸ್

ಪಾಕಿಸ್ತಾನದ ಈ ಕುತಂತ್ರ ಹತ್ತಿಕ್ಕಲು ತನ್ನ ಶಕ್ತಿ ಮೀರಿ ಪ್ರಯತ್ನಿಸಿದ ಭಾರತ, ಕೊನೆಗೂ ಇದರಲ್ಲಿ ಜಯಶಾಲಿಯಾಯಿತು. ಪ್ರತೀಕವಾಗಿ 1999ರ ಜುಲೈ 26ರ ದಿನವನ್ನು ಭಾರತೀಯ ಸೇನೆಯ ವಿಜಯ್ ದಿವಸ್ ಎಂದು ಘೋಷಣೆ ಮಾಡಿತು. ಅಂದಿನಿಂದ ಪ್ರತಿ ವರ್ಷ ಇದನ್ನು ವಿಜಯ್ ದಿವಸ್ ಎಂದೇ ಆಚರಿಸಲಾಗುತ್ತಿದೆ.

ಪಾಕಿಸ್ತಾನದಿಂದಲೂ ಹಲವರು ಹುತಾತ್ಮ

ಪಾಕಿಸ್ತಾನದಿಂದಲೂ ಹಲವರು ಹುತಾತ್ಮ

ಈ ಯುದ್ಧದಲ್ಲಿ ಭಾರತದ 527 ಯೋಧರು ಹುತಾತ್ಮರಾದರು. ಈ ಯುದ್ಧದಲ್ಲಿ ಅಸುನೀಗಿದ ಪಾಕಿಸ್ತಾನದ ಯೋಧರ ಕರಾರುವಾಕ್ ಲೆಕ್ಕ ಸಿಕ್ಕಿಲ್ಲವಾದರೂ, ಭಾರತೀಯ ಸೇನೆಯ ಅಂದಾಜಿನ ಪ್ರಕಾರ, 357ರಿಂದ 453ರಷ್ಟು ಸೈನಿಕರು ಸಾವಿಗೀಡಾಗಿರಬಹುದು ಎಂದು ಹೇಳಲಾಗಿದೆ.

ಸದಾ ನೆನಪಿನಲ್ಲಿಡಬೇಕಾದ ಹೆಸರುಗಳಿವು!

ಸದಾ ನೆನಪಿನಲ್ಲಿಡಬೇಕಾದ ಹೆಸರುಗಳಿವು!

ಕಾರ್ಗಿಲ್ ನಲ್ಲಿ ಹುತಾತ್ಮರಾದ ಅಥವಾ ಗಣನೀಯ ಸೇವೆ ಸಲ್ಲಿಸಿದ ಭಾರತೀಯ ಯೋಧರಿಗೆ ಭಾರತ ಸರ್ಕಾರ ಈ ಗೌರವಗಳನ್ನು ನೀಡಿದೆ.

- ಗ್ರೆನೇಡಿರ್ ಯೋಗೇಂದ್ರ ಸಿಂಗ್ ಯಾದವ್ (18 ಗ್ರೆನೇಡಿಯರ್ಸ್) - ಪರಮ ವೀರ ಚಕ್ರ

- ಗೋರ್ಖಾ ರೈಫಲ್ಸ್ ಪಡೆಯ ಲೆಫ್ಟನೆಂಟ್ ಮನೋಜ್ ಕುಮಾರ್ ಪಾಂಡೆ ಗೆ ಪರಮವೀರ ಚಕ್ರ (ಮರಣೋತ್ತರ)

- 13 ಜೆಎಕೆ ರೈಫಲ್ಸ್ ನ ಕ್ಯಾಪ್ಟನ್ ವಿಕ್ರಮ್ ಬಾತ್ರಾ - ಪರಮ ವೀರ ಚಕ್ರ (ಮರಣೋತ್ತರ)

- 13 ಜೆಎಕೆ ರೈಫಲ್ಸ್ ನ ರೈಫಲ್ ಮ್ಯಾನ್ ಸಂಜಯ್ ಕುಮಾರ್ - ಪರಮವೀರ ಚಕ್ರ

- 17ನೇ ಜೆಎಟಿ ರೆಜಿಮೆಂಟ್ ನ ಕ್ಯಾಪ್ಟನ್ ಅನುಜ್ ನಾಯರ್ - ಮಹಾವೀರ ಚಕ್ರ (ಮರಣೋತ್ತರ)

- 18ನೇ ಗ್ರೆನೆಡಿಯರ್ಸ್ ನ ಮೇಜರ್ ರಾಜೇಶ್ ಸಿಂಗ್ ಅಧಿಕಾರಿ - ಮಹಾವೀರ ಚಕ್ರ (ಮರಣೋತ್ತರ)

English summary
Prime Minister Narendra Modi, on 26 July, hailed the Indian armed forces for their prowess and sacrifices for the country on the occasion of 'Kargil Vijay Diwas' – the anniversary of India's victory in the 1999 Kargil conflict with Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X