ಕಮಲ್ ಹಾಸನ್ ಸಹೋದರ ಚಂದ್ರಹಾಸನ್ ನಿಧನ

Posted By:
Subscribe to Oneindia Kannada

ನವದೆಹಲಿ, ಮಾರ್ಚ್. 19: ಬಹುಭಾಷಾ ನಟ ಕಮಲ್ ಹಾಸನ್ ಅವರ ಹಿರಿಯ ಸಹೋದರ, ಖ್ಯಾತ ಸಿನಿಮಾ ನಿರ್ಮಾಪಕ ಚಂದ್ರಹಾಸನ್ (82) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮಗಳು ಸಿನಿಮಾ ನಟಿ ಅನು ಹಾಸನ್ ಅವರ ಲಂಡನ್‍ ನಲ್ಲಿರುವ ನಿವಾಸದಲ್ಲಿ ಇವರು ಶುಕ್ರವಾರ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಭಾನುವಾರ ಮಾಧ್ಯಮಗಳಲ್ಲಿ ವರದಿಯಾಗಿದೆ. ಕೆಲವು ತಿಂಗಳುಗಳ ಹಿಂದೆಯಷ್ಟೇ ಚಂದ್ರಹಾಸನ್ ಅವರ ಪತ್ನಿ ಗೀತಾಮಣಿ ಮರಣ ಹೊಂದಿದ್ದರು.

Kamal Haasan's elder brother Chandrahasan passes away

ರಾಜ್‍ ಕಮಲ್ ಫಿಲಂಸ್‍ ನ ಉಸ್ತುವಾರಿ ವಹಿಸಿದ್ದ ಇವರು ಕಮಲ್ ಹಾಸನ್ ಅವರ ಹಲವಾರು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು.

ಕಮಲ್ ಹಾಸನ್ ಅವರ ವಿಶ್ವರೂಪಂ ಮತ್ತು ತೂಂಗಾವನಂ ಸಿನಿಮಾದ ನಿರ್ಮಾಣದಲ್ಲಿಯೂ ಇವರು ಕಾರ್ಯವಹಿಸಿದ್ದರು.

English summary
Kamal Haasan's elder brother Chandrahasan passed away at his residence in London on Friday. According to reports, Chandrahasan suffered a cardiac arrest. He was 82. Chandrahasan is the younger brother of Charuhasan.
Please Wait while comments are loading...