ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿರ್ಭಯಾ ಪ್ರಕರಣದಲ್ಲಿ ಬಿಡುಗಡೆಯಾದವನಿಗೆ ಅದೆಲ್ಲಾ ನೆನಪೇ ಇಲ್ವಂತೆ!

|
Google Oneindia Kannada News

ನವದೆಹಲಿ, ಮೇ 5: ನಿರ್ಭಯಾ ಮೇಲೆ ಮೃಗಗಳಂತೆ ಅತ್ಯಾಚಾರವೆಸಗಿ, ಆನಂತರ ಬಾಲಾಪರಾಧಿ ಎಂದು ಪರಿಗಣಿಸಲ್ಪಟ್ಟು ಮೂರು ವರ್ಷಗಳ ಶಿಕ್ಷೆ ಬಳಿಕ ಬಿಡುಗಡೆ ಹೊಂದಿರುವ ಆ ಕುಖ್ಯಾತ ಅಪರಾಧಿಗೆ ಮೇ 5ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಗೊತ್ತೇ ಇಲ್ವಂತೆ!

ಅಂದಹಾಗೆ, ಈ ಪ್ರಕರಣದ ಬಾಲಾಪರಾಧಿ ಈಗ ದಕ್ಷಿಣ ಭಾರತದ ಹೈವೇ ರಸ್ತೆಯ ಪಕ್ಕದಲ್ಲಿನ ಡಾಬಾವೊಂದರಲ್ಲಿ ಅಡುಗೆಯವನಾಗಿ ಕೆಲಸ ಮಾಡುತ್ತಿದ್ದಾನೆಂದು ಮೂರು ತಿಂಗಳ ಹಿಂದೆಯೇ ಸುದ್ದಿಯೊಂದು ಮಾಧ್ಯಮಗಳಲ್ಲಿ ಹರಿದಾಡಿತ್ತು.[ನಿರ್ಭಯಾ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದ ಸುಪ್ರೀಂ ಕೋರ್ಟ್]

Juvenile in Nirbhaya Case doesn't know the 'Supreme' Verdict

ಆ ವರದಿಯ ಜಾಡು ಹಿಡಿದ ಕೆಲ ಪತ್ರಕರ್ತರು, ಮೇ 5ರಂದು ಅದೇ ಡಾಬಾಕ್ಕೆ ಭೇಟಿ ನೀಡಿ ಅಲ್ಲಿ ಕೆಲಸ ಮಾಡಿಕೊಂಡಿದ್ದ ಆ ಯುವಕನನ್ನು ಮಾತನಾಡಿದ್ದಾರೆ.[ಈ ಮೃಗಗಳು ಮಾಡಿದ್ದು ಕ್ಷಮಿಸಲು ಅರ್ಹವಲ್ಲದ ಅಪರಾಧ, ಬದುಕಲು ಅರ್ಹರಲ್ಲ!]

ಹಾಗೆ, ಬಂದ ಕೆಲ ಪತ್ರಕರ್ತರೊಂದಿಗೆ ಒಲ್ಲದ ಮನಸ್ಸಿನಿಂದಲೇ ಮಾತಿಗಿಳಿದ ಆ ಯುವಕ, ತನಗರಿವಿಲ್ಲದಂತೆ ಮಾಡಿದ ತಪ್ಪನ್ನು ಮರೆಯಲು ಯತ್ನಿಸಿ ಅದರಲ್ಲಿ ಕೊಂಚ ಸಫಲನಾಗಿದ್ದೇನೆ. ಎಲ್ಲವನ್ನೂ ಕೆಟ್ಟ ಕನಸಿನಂತೆ ಮರೆಯಲೆತ್ನಿಸಿದ್ದೇನೆ. ಹಾಗಾಗಿ, ನನ್ನ ಬಿಡುಗಡೆಯ ನಂತರ, ಆ ಪ್ರಕರಣ ಏನಾಯಿತು, ನನ್ನ ಜತೆಗೆ ಆ ಅಪರಾಧದಲ್ಲಿ ಭಾಗಿಯಾಗಿದ್ದವರು ಏನಾದರು ಎಂಬುದನ್ನು ತಿಳಿಯಲೂ ನಾನು ಪ್ರಯತ್ನ ಮಾಡಿಲ್ಲ ಎಂದಿದ್ದಾನೆ.['ನಿರ್ಭಯಾ 13 ದಿನ ಬದುಕುಳಿದಿದ್ದೇ ದೊಡ್ಡ ಪವಾಡ'!]

ಇಷ್ಟು ಹೇಳಿದ ಆತನಿಗೆ ಮೇ 5ರಂದು ಬಂದ ತೀರ್ಪಿನ ಬಗ್ಗೆ ಕೇಳಿದರೆ, ಒಂದು ನಿಡಿದಾದ ನಿಟ್ಟುಸಿರು ಬಿಟ್ಟು ಎದ್ದು ಹೋಗಿದ್ದಾನೆ.

English summary
The Juvenile who was convicted for 3 years under Juvenile Justice Act in Nirbhaya Case, now working as a cook and doesn't know the Supreme Court's verdict in the incident.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X