ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾವೇರಿ ನ್ಯಾಯಾಧಿಕರಣ ಅಧ್ಯಕ್ಷರಾಗಿ ನ್ಯಾ. ಮನೋಹರ್ ಸಪ್ರೆ ನೇಮಕ

ಬರೋಬ್ಬರಿ 20 ವರ್ಷಗಳ ನಂತರ ಕಾವೇರಿ ನ್ಯಾಯಾಧೀಕರಣದ ಅಧ್ಯಕ್ಷರನ್ನಾಗಿ ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆಯವರನ್ನು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ನೇಮಕ ಮಾಡಿದ್ದಾರೆ.

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಫೆಬ್ರವರಿ 20: ಬರೋಬ್ಬರಿ 20 ವರ್ಷಗಳ ನಂತರ ಕಾವೇರಿ ನ್ಯಾಯಾಶಿಕರಣಕ್ಕೆ ಅಧ್ಯಕ್ಷರೊಬ್ಬರನ್ನು ನೇಮಕ ಮಾಡಲಾಗಿದೆ. ನ್ಯಾಯಮೂರ್ತಿ ಅಭಯ್ ಮನೋಹರ್ ಸಪ್ರೆಯವರನ್ನು ನ್ಯಾಯಾಧಿಕರಣದ ಮುಖ್ಯಸ್ಥರನ್ನಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ನೇಮಕ ಮಾಡಿದ್ದಾರೆ.

ಇತ್ತೀಚೆಗೆ ರಾಜ್ಯಸಭೆಯಲ್ಲಿ ಮಾತನಾಡಿದ್ದ ಕೇಂದ್ರ ಇಂಧನ ಮಂತ್ರಿ ಪೀಯೂಷ್ ಗೋಯಲ್ ಕಾವೇರಿ ನ್ಯಾಯಾಧಿಕರಣದಲ್ಲಿ ದೀರ್ಘ ಕಾಲದಿಂದ ಅಧ್ಯಕ್ಷರ ಹುದ್ದೆ ಖಾಲಿ ಇದೆ. ಮಾತ್ರವಲ್ಲದೆ ಇರುವ ಇಬ್ಬರೂ ಸದಸ್ಯರಿಗೆ 70 ವರ್ಷ ದಾಟಿದೆ ಎಂದು ಹೇಳಿದ್ದರು. ಇದೀಗ ಅಧ್ಯಕ್ಷರ ಹುದ್ದೆಯನ್ನು ಭರ್ತಿ ಮಾಡಲಾಗಿದೆ.[ಇಬ್ಬರು ಕನ್ನಡಿಗರೀಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು]

Justice Sapre to head Cauvery Waters Tribunal

"ಯಾವುದೇ ಕಾರಣಕ್ಕೂ ಸಪ್ರೆ ನೇಮಕದ ನಂತರ ಕಾವೇರಿ ವಿಚಾರಣೆಯನ್ನು ನ್ಯಾಯಾಧಿಕರಣ ಪುನರಾರಂಭಿಸುತ್ತಿಲ್ಲ. ಬದಲಿಗೆ ಸಮಿತಿ ಈವರಗೆ ನಿರ್ವಹಿಸಿದ್ದ ಜವಾಬ್ದಾರಿಗಳನ್ನು ನ್ಯಾಯಮೂರ್ತಿ ಸಪ್ರೆ ಮುಂದುವರಿಸಲಿದ್ದಾರೆ," ಎಂದು ಪೀಯೂಷ್ ಗೋಯಲಕ್ ಸ್ಪಷ್ಟಪಡಿಸಿದ್ದರು.

ಅಭಯ್ ಮನೋಹರ್ ಸಪ್ರೆ
ಅಭಯ್ ಮನೋಹರ್ ಸಪ್ರೆ ಹಿಂದೆ ಮಧ್ಯಪ್ರದೇಶ ಹೈಕೋರ್ಟಿನ ನ್ಯಾಯಮೂರ್ತಿಯಾಗಿದ್ದರು. ಸದ್ಯ ಸುಪ್ರಿಂ ಕೋರ್ಟಿನ ನ್ಯಾಯಮೂರ್ತಿಯಾಗಿ ಸಪ್ರೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಗಸ್ಟ್ 19, 2019ರಲ್ಲಿ ನ್ಯಾಯಮೂರ್ತಿ ಸಪ್ರೆ ಸುಪ್ರೀಂ ಕೋರ್ಟಿನಿಂದ ನಿವೃತ್ತರಾಗಲಿದ್ದಾರೆ.['ಸಿನಿಮಾ ಭಾಗವಾಗಿ ರಾಷ್ಟ್ರಗೀತೆ ಪ್ರಸಾರವಾದರೆ ಎದ್ದು ನಿಲ್ಲಬೇಕಿಲ್ಲ']

ಸದ್ಯ ಕಾವೇರಿ ನ್ಯಾಯಾಧಿಕರಣದ ಆದೇಶವನ್ನು ಕರ್ನಾಟಕ ಮತ್ತು ತಮಿಳುನಾಡು ಸರಕಾರಗಳು ಪ್ರಶ್ನಿಸಿದ್ದು, ಸುಪ್ರೀಂ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ

English summary
Justice Abhay Manohar Sapre has been appointed as the chairman of the Cauvery Waters Disputes Tribunal. The appointment to the post lying vacant for the past 20 years was made by Chief Justice of India, J S Khehar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X