ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕನ ವಿರುದ್ಧ ದನಿ ಎತ್ತಿದ ಪತ್ರಕರ್ತನ ಸುಟ್ಟು ಕೊಂದರೇ?

By Mahesh
|
Google Oneindia Kannada News

ಷಹಜಹಾನ್‌ಪುರ, ಜೂ.9: ಉತ್ತರಪ್ರದೇಶದ ಆಡಳಿತಾರೂಢ ಸಮಾಜವಾದಿ ಪಕ್ಷದ ಶಾಸಕ ರಾಮಮೂರ್ತಿ ಅವರ ವಿರುದ್ಧ ಲೇಖನವೊಂದನ್ನು ಪ್ರಕಟಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹಾಕಿದ ತಪ್ಪಿಗೆ ಜಗೇಂದ್ರ ಸಿಂಗ್ ಎಂಬ ಪತ್ರಕರ್ತನನ್ನು ಸಜೀವ ದಹನ ಮಾಡಿದ ಹೃದಯ ವಿದ್ರಾವಕ ಘಟನೆ ನಡೆದಿದೆ.

ಪತ್ರಕರ್ತ ಜಗೇಂದ್ರಸಿಂಗ್ ಅವರನ್ನು ಶಾಸಕನ ಕಡೆಯ ಕೆಲವು ದುಷ್ಕರ್ಮಿಗಳು ಬೆಂಕಿಹಚ್ಚಿ ಸುಟ್ಟು ಹಾಕಲು ಪ್ರಯತ್ನಿಸಿದ್ದಾರೆ. ಅಷ್ಟರಲ್ಲೇ ಇದನ್ನು ಕಂಡ ಕೆಲವರು ಬೆಂಕಿಯಲ್ಲಿ ಬೇಯುತ್ತಿದ್ದ ಸಿಂಗ್‌ ಆವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಮಾರ್ಗ ಮಧ್ಯೆಯಲ್ಲೇ ಜಗೇಂದ್ರ ಸಿಂಗ್ ಕೊನೆಯುಸಿರೆಳೆದಿದ್ದಾರೆ.

ದುರಂತವೆಂದರೆ, ಜಗೇಂದ್ರ ಸಿಂಗ್ ಅವರಿಗೆ ಬೆಂಕಿ ಹಚ್ಚಿದವರ ಪೈಕಿ ಪೊಲೀಸ್ ಅಧಿಕಾರಿಯೂ ಇದ್ದರು. ಇದು ಶಾಸಕ ರಾಮಮೂರ್ತಿ ಅವರದ್ದೇ ಕೃತ್ಯ್ತ ಎಂದು ಸಿಂಗ್ ಅವರ ಕುಟುಂಬ ಆರೋಪಿಸಿದೆ.

Journalist allegedly burnt to death for Facebook posts against Samajwadi Party MLA Ram Murti in UP

ಶಾಸಕ ರಾಮಮೂರ್ತಿ ಅಕ್ರಮ ಗಣಿಗಾರಿಕೆ, ಭೂ ಕಬಳಿಕೆಗಳ ಮುಂತಾದ ಭ್ರಷ್ಟಾಚಾರ ಕೃತ್ಯಗಳನ್ನು ನಡೆಸಿದ ಆರೋಪವಿದೆ. ಈ ಬಗ್ಗೆ ಪತ್ರಿಕೆಗಳಿಗೆ ಜಗೇಂದ್ರ ಸಿಂಗ್ ವರದಿ ಮಾಡಿದ್ದರು. ಅದರೆ, ಸಿಂಗ್ ವಿರುದ್ಧ ಸುಳ್ಳು ಕೇಸ್ ದಾಖಲಿಸಿಕೊಂಡು ಅವರನ್ನು ಬಂಧಿಸಲು ಪೊಲೀಸರು ಬಂದಿದ್ದಾರೆ. ನಂತರ ಸಜೀವ ದಹನವಾಗಿದೆ.

ಇದೊಂದು ಆತ್ಮಹತ್ಯೆ ಪ್ರಕರಣ, ಜಗೇಂದ್ರ ಸಿಂಗ್‌ ರನ್ನು ಬಂಧಿಸಲು ಯತ್ನಿಸಲಾಯಿತು. ಅದರೆ, ಅಷ್ಟರಲ್ಲಿ ಸಿಂಗ್ ಆತ್ಮಹತ್ಯೆ ಶರಣಾದರು ಎಂಬುದು ಷಹಜಹಾನ್‌ಪುರ ಪೊಲೀಸರು ಪ್ರತಿಕ್ರಿಯಿಸಿದ್ದಾರೆ.

English summary
In a shocking incident, Shahjahanpur-based journalist Jagendra Singh has died after he was allegedly burnt alive for a Facebook post against Samajwadi Party MLA Ram Murti reported CNN IBN.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X