ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ: ಸುಪ್ರೀಂ ಆದೇಶದ ವಿರುದ್ಧ ಮೇಲ್ಮನವಿ

|
Google Oneindia Kannada News

ನವದೆಹಲಿ, ಜ. 9: ಚಿತ್ರಮಂದಿರಗಳಲ್ಲಿ ಚಲನಚಿತ್ರ ಆರಂಭಕ್ಕೂ ಮುನ್ನ ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಮೊಳಗಿಸುವ ಬಗ್ಗೆ ಸುಪ್ರೀಂ ಕೋರ್ಟ್ ನ ಆದೇಶದ ವಿರುದ್ಧ ಕ್ರಿಶ್ಚಿಯನ್ ಸಮುದಾಯವೆಂದೇ ಪರಿಗಣಿಸಲ್ಪಡುವ ಜೆಹೋವಾ ವಿಟ್ನೆಸ್ ಪಂಥವು ಮೇಲ್ಮನವಿ ಸಲ್ಲಿಸಲಿದೆ.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆಗೆ ಎಲ್ಲರೂ ಕಡ್ಡಾಯವಾಗಿ ನಿಲ್ಲಲೇಬೇಕೆಂಬ ಆದೇಶ ಸಂವಿಧಾನವು ಭಾರತೀಯ ನಾಗರಿಕರಿಗೆ ನೀಡಿರುವ ಧಾರ್ಮಿಕ ಹಕ್ಕುಗಳ ಆಚರಣೆಗೆ ಧಕ್ಕೆಯುಂಟಾಗಲಿದೆ ಎಂಬುದು ಈ ಪಂಥದ ವಾದವಾಗಿದೆ.

Jehovah’s Witnesses may challenge SC anthem order

ಕಳೆದ ವರ್ಷ ನವೆಂಬರ್ 30ರಂದು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್, ಎಲ್ಲಾ ಚಿತ್ರಮಂದಿರಗಳಲ್ಲೂ ಸಿನಿಮಾ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗಿಸಬೇಕು ಎಂಬ ಆದೇಶ ನೀಡಿತ್ತು. ರಾಷ್ಟ್ರಗೀತೆಗೆ ಎಲ್ಲರೂ ಎದ್ದುನಿಂತು ಗೌರವ ನೀಡುವುದು ಕಡ್ಡಾಯ ಹಾಗೂ ಚಿತ್ರಮಂದಿರಗಳ ಸಿಬ್ಬಂದಿ ರಾಷ್ಟ್ರಗೀತೆ ಮೊಳಗುವ ವೇಳೆ ಚಿತ್ರಮಂದಿರದ ಬಾಗಿಲುಗಳನ್ನು ಮುಚ್ಚಿ ಯಾರಿಂದಲೂ ಆ ವೇಳೆ ತೊಂದರೆಯಾಗದಂತೆ ನೋಡಿಕೊಳ್ಳಬೇಕೆಂದೂ ಸೂಚಿಸಿತ್ತು.

ಇದೀಗ, ಈ ಆದೇಶದ ವಿರುದ್ಧ ಜೆಹೋವಾ ವಿಟ್ನೆಸ್ ಪಂಥವು ಸುಪ್ರೀಂ ಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಲು ಮುಂದಾಗಿದ್ದು, ಮುಂದಿನ ತಿಂಗಳು ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠದ ಮುಂದೆ ಈ ಮೇಲ್ಮನವಿ ವಿಚಾರಣೆಗೆ ಬರುವ ಸಾಧ್ಯತೆಗಳಿವೆ.

30 ವರ್ಷಗಳ ಹಿಂದೆ ಇಂಥದ್ದೇ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಕದ ತಟ್ಟಿದ್ದ ಜೆಹೋವಾ ವಿಟ್ನೆಸ್ ಪಂಥವು, ಶಾಲೆಗಳಲ್ಲಿ ಅನ್ಯಧರ್ಮೀಯ ಮಕ್ಕಳಿಗೆ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಕೂಡದೆಂಬ ಮೇಲ್ಮನವಿ ಸಲ್ಲಿಸಿತ್ತು. ಆಗ, ಜೆಹೋವಾ ಪಂಥದ ಪರವಾಗಿ ಕೇರಳದ ಪ್ರೊಫೆಸರ್ ವಿ.ಜೆ. ಇಮ್ಯಾನ್ಯುವಲ್ ಎಂಬುವರು ಮೇಲ್ಮನವಿ ಸಲ್ಲಿಸಿದ್ದರು.

1986ರ ಆಗಸ್ಟ್ 11ರಂದು ಇದರ ಅಂತಿಮ ವಿಚಾರಣೆ ನಡೆದು ತೀರ್ಪು ಹೊರಬಿದ್ದಿತ್ತಲ್ಲದೆ, ಈ ವಾದದಲ್ಲಿ ಜೆಹೋವಾ ವಾದಕ್ಕೆ ಜಯ ಸಂದಿತ್ತು. ಇದೀಗ, ಮತ್ತೊಂದು ಬಾರಿ ಜೆಹೋವಾ ರಾಷ್ಟ್ರಗೀತೆಯ ವಿಚಾರವನ್ನು ಕೆದಕಿದೆ.

ಯಾವುದೀ ಜೆಹೋವಾ ವಿಟ್ನೆಸ್ ಪಂಥ ?: ಜೆಹೋವಾ ವಿಟ್ನೆಸ್ ಪಂಥೀಯರು ಸಾಮಾನ್ಯವಾಗಿ ಕ್ರೈಸ್ತ ಧರ್ಮೀಯರೆಂದು ಕರೆದುಕೊಳ್ಳುತ್ತಾರಾದರೂ, ಇವರಿಗೂ ಹಾಗೂ ಕ್ರಿಶ್ಚಿಯನ್ನರಿಗೂ ಸಾಕಷ್ಟು ವೈಚಾರಿಕ ಬೇಧಗಳಿವೆ. ಇವರು ಕ್ರಿಸ್ತನನ್ನು ಕೇವಲ ಪ್ರವಾದಿಯೆನ್ನುತ್ತಾರೆಯೇ ವಿನಃ ದೇವರೆಂದು ಒಪ್ಪಿಕೊಳ್ಳುವುದಿಲ್ಲ. ಧರ್ಮಗ್ರಂಥದ ವಿಚಾರದಲ್ಲಿಯೂ ಇವರು ಹಳೇ ಒಡಂಬಡಿಕೆಗೆ ತಲೆಬಾಗುತ್ತಾರೆ. ಆದರೆ, ಹೊಸ ಒಡಂಬಡಿಕೆ ಬಗ್ಗೆ ಇವರು ಅಷ್ಟಾಗಿ ಆಸಕ್ತಿ ಹೊಂದಿಲ್ಲ.

English summary
Jehovah’s Witnesses sect knocked the door of supreme court, against its order in november last year, to play national anthem in cinema theaters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X