ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ನಿತೀಶ್ ತೆಕ್ಕೆಗೆ ಬಿಹಾರ: ಲಾಲೂ ಪುತ್ರಿಗೆ ಡಿಸಿಎಂ?

|
Google Oneindia Kannada News

ಪಾಟ್ನಾ, ಫೆ 21: ಬಿಹಾರ ರಾಜಕೀಯದ ಹಾವು ಏಣಿ ಆಟದಲ್ಲಿ ಮಾಜಿ ಸಿಎಂ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಬಣಕ್ಕೆ ಮುನ್ನಡೆಯಾಗಿದೆ. ನಿತೀಶ್ ಬಿಹಾರದ ಮುಖ್ಯಮಂತ್ರಿಯಾಗಿ ಮತ್ತೆ ಭಾನುವಾರ (ಫೆ 22) ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪ್ರಮಾಣವಚನದ ಜೊತೆಗೆ ಸಂಪುಟ ವಿಸ್ತರಣೆ ಕಸರತ್ತಿನಲ್ಲಿ ತೊಡಗಿರುವ ನಿತೀಶ್, ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಪುತ್ರಿ ಮಿಸಾ ಭಾರತಿಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಬಿಜೆಪಿಯನ್ನು ಹಣೆಯಲು ಎಲ್ಲಾ ರಾಜಕೀಯ ಸಮೀಕರಣವನ್ನೂ ಮುಕ್ತವಾರಿಸಿಕೊಂಡಿರುವ ನಿತೀಶ್, ಆರ್ಜೆಡಿ ಜೊತೆಗೆ ಕಾಂಗ್ರೆಸ್ ಶಾಸಕರಿಗೂ ಸಚಿವ ಸ್ಥಾನ ನೀಡುವ ಸಾಧ್ಯತೆಯೂ ಅಲ್ಲಗಳೆಯುವಂತಿಲ್ಲ. (ಬಿಹಾರ ಸಿಎಂ ಮಾಂಝಿ ರಾಜೀನಾಮೆ)

JDU leader Nitish Kumar likely to appoint Lalu daughter Misa Bharti as DCM

ಪುತ್ರಿಗೆ ಉಪಮುಖ್ಯಮಂತ್ರಿ ಸ್ಥಾನ ಸಿಗುವಂತಿದ್ದರೆ ಲಾಲೂ ಬಿಟ್ಟಾರೆಯೇ? ನಿತೀಶ್ ಜೊತೆಗಿನ ಹಿಂದಿನ ಎಲ್ಲಾ ವೈಷಮ್ಯಗಳನ್ನು ಮರೆತು ನಿತೀಶ್ ಆಫರಿಗೆ ಓಕೆ ಎಂದಿದ್ದಾರೆಂದು ಜೆಡಿಯು ಮೂಲಗಳಿಂದ ತಿಳಿದುಬಂದಿದೆ.

ಬರುವ ಡಿಸೆಂಬರ್ ನಲ್ಲಿ ಬಿಹಾರದ ವಿಧಾನಸಭೆಗೆ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಜೆಡಿಯು, ಆರ್ಜೆಡಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳ ಜೊತೆಗಿನ ಮಹಾಮೈತ್ರಿಗೆ ನಿತೀಶ್ ಮತ್ತು ಲಾಲೂ ವೇದಿಕೆ ಸಿದ್ದಪಡಿಸಿಕೊಳ್ಳಲು ಆರಂಭಿಸಿಕೊಂಡಿದ್ದಾರೆ.

ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಲಾಲೂ ಮತ್ತು ಕಾಂಗ್ರೆಸ್ ಪಕ್ಷದ ಒಲವು ಧಕ್ಕಿಸಿಕೊಳ್ಳಲು ಭಾನುವಾರ ನಡೆಯಲಿರುವ ಪ್ರಮಾಣವಚನದ ನಂತರ ಎರಡೂ ಪಕ್ಷದ ಶಾಸಕರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ತಾನೇ ಸಾಕಿದ ಗಿಣಿ ಮಾಂಝಿ ರಾಜೀನಾಮೆ ವಿಚಾರದಲ್ಲಿ ನಿತೀಶ್ ಕುಮಾರ್ ತಾತ್ಕಾಲಿಕ ಯಶಸ್ಸುಗಳಿಸಿದ್ದರೂ ತನ್ನ ಪಕ್ಷದ ಶಾಸಕರನ್ನು ಮುಂದಿನ ಚುನಾವಣೆಯ ವರೆಗೆ ಒಗ್ಗೂಡಿಸುವುದು ನಿತೀಶ್ ಗೆ ಇರುವ ಮುಂದಿನ ಸವಾಲು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಲಾಲೂ ಪತ್ನಿ ರಾಬ್ರಿ ದೇವಿ ಮತ್ತು ಪುತ್ರಿ ಮಿಸಾ ಭಾರತಿ ಪರಾಭವಗೊಂಡಿದ್ದರು.

English summary
JDU leader Nitish Kumar likely to appoint Lalu Prasad Yadav daughter Misa Bharti as DCM. Nitish Kumar will return as CM of Bihar on Sunday (Fe 22) for the fourth time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X