ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾವಿ ಸಿಎಂ ಶಶಿಕಲಾ ಭವಿಷ್ಯ ನಿರ್ಧರಿಸಲಿರುವ ಸುಪ್ರೀಂಕೋರ್ಟ್

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ. ಜಯಲಲಿತಾ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಜೀವಂತವಾಗಿದೆ. ಈ ವಾರ ತೀರ್ಪು ಪ್ರಕಟವಾಗಲಿದೆ. ಈ ಕೇಸಿನಲ್ಲಿ ಶಶಿಕಲಾ ಸಹ ಆರೋಪಿ.

By Mahesh
|
Google Oneindia Kannada News

ಚೆನೈ, ಫೆಬ್ರವರಿ 06: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ, ದಿವಂಗತ ಜೆ. ಜಯಲಲಿತಾ ಅವರ ಮೇಲಿನ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಇನ್ನೂ ಜೀವಂತವಾಗಿದೆ. ಈ ವಾರ ಮತ್ತೊಮ್ಮೆ ಪ್ರಕರಣ, ವಿಚಾರಣೆಗೆ ಬರಲಿದ್ದು, ಅಂತಿಮ ತೀರ್ಪು ಹೊರಬೀಳಲಿದೆ.

ಜಯಾ ಅವರು ಅನಾರೋಗ್ಯ ಪೀಡಿತರಾಗಿ ಅಪೋಲೋ ಆಸ್ಪತ್ರೆ ಸೇರಿದವರು ಇಹಲೋಕ ವ್ಯಾಪಾರ ಮುಗಿಸಿದ್ದಾರೆ. ಆದರೆ, ತಮಿಳುನಾಡಿನ ನಿಯೋಜಿತ ಸಿಎಂ ಶಶಿಕಲಾ ನಟರಾಜನ್ ಹಾಗೂ ಇತರೆ ಆರೋಪಿಗಳಿಗೆ ಭಯ ಕಾಡುತ್ತಿದೆ. ಜಸ್ಟೀಸ್ ಪಿಸಿ ಘೋಸೆ ಹಾಗೂ ಅಮಿತಾವ್ ರಾಯ್ ಅವರಿರುವ ವಿಭಾಗೀಯ ಪೀಠದಿಂದ ತೀರ್ಪು ಹೊರ ಬೀಳಲಿದೆ.[ಪನ್ನೀರ್ ಸೆಲ್ವಂ ರಾಜೀನಾಮೆ, ಸಿಎಂ ಪಟ್ಟಕ್ಕೆ ಶಶಿಕಲಾ ನಟರಾಜನ್]

ಕಳೆದ ವರ್ಷ ದಸರಾ ರಜೆ ಮುಗಿದ ಬಳಿಕ ಅಕ್ಟೋಬರ್ 15ರಿಂದ ಈ ಪ್ರಕರಣದ ವಿಚಾರಣೆ, ತೀರ್ಪು ಹೊರಬೀಳಬೇಕಿತ್ತು. ಕಾರಣಾಂತರದಿಂದ ಮುಂದೂಡಲ್ಪಟ್ಟಿದೆ. [ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

ಈ ವೇಳೆಗಾಗಲೇ ಜಯಾ ಅವರು ಅನಾರೋಗ್ಯ ಪೀಡಿತರಾಗಿ ಅಪೋಲೋ ಆಸ್ಪತ್ರೆ ಸೇರಿದವರು ಡಿಸೆಂಬರ್ 05, 2016ರಂದು ಇಹಲೋಕ ವ್ಯಾಪಾರ ಮುಗಿಸಿದ್ದಾರೆ. ಹಾಗಾದರೆ ಮಿಕ್ಕವರ ಕಥೆ ಏನು?

ಸಿಎಂ ಆಗಿ ಅಧಿಕಾರ ಮುಂದುವರೆಸಿದ್ದರು.

ಸಿಎಂ ಆಗಿ ಅಧಿಕಾರ ಮುಂದುವರೆಸಿದ್ದರು.

ತಮಿಳುನಾಡಿನ ಜನತೆ ಪಾಲಿಗೆ 'ಅಮ್ಮ' ಜೆ. ಜಯಲಲಿತಾ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಅಕ್ರಮ ಆಸ್ತಿ ಗಳಿಕೆ ಮಾಡಿದ್ದು ಸಾಬೀತಾಗಿ ಅಪರಾಧಿ ಎನಿಸಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಸೇರಿದ್ದು ನೆನಪಿರಬಹುದು. ನಂತರ ಜಾಮೀನು ಪಡೆದು ಚೆನ್ನೈ ತೆರಳಿ ಮತ್ತೊಮ್ಮೆ ಸಿಎಂ ಆಗಿ ಅಧಿಕಾರ ಮುಂದುವರೆಸಿದ್ದರು.

ಸಿಎಂ ಅಗಲು ಹೊರಟಿರುವ ಶಶಿಕಲಾ

ಸಿಎಂ ಅಗಲು ಹೊರಟಿರುವ ಶಶಿಕಲಾ

ಜೆ ಜಯಲಲಿತಾ, ಶಶಿಕಲಾ ನಟರಾಜನ್, ಇಳವರಸಿ ಹಾಗೂ ಸುಧಾಕರಣ್ ಅವರನ್ನು ಅಪರಾಧಿ ಎಂದು ಕೆಳಹಂತದ ನ್ಯಾಯಲಯ ಘೋಷಿಸಿದೆ. ಈ ಬಗ್ಗೆ ಹೈಕೋರ್ಟಿನಲ್ಲಿ ಅಪೀಲ್ ಹಾಕಿದ ಬಳಿಕ ಎಲ್ಲರಿಗೂ ನೆಮ್ಮದಿ ಸಿಕ್ಕಿತ್ತು. ಈಗ ಪ್ರಕರಣ ಸುಪ್ರೀಂಕೋರ್ಟಿನಲ್ಲಿದ್ದು ,ತೀರ್ಪು ಹೊರ ಬೀಳಬೇಕಿದೆ.

ದುಷ್ಯಂತ್ ದಾವೆರಿಂದ ವಾದ

ದುಷ್ಯಂತ್ ದಾವೆರಿಂದ ವಾದ

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೆ ಜಯಲಿತಾ ಅವರಿಗೆ ಜಾಮೀನು ಸಿಕ್ಕಿರುವುದನ್ನು ಪ್ರಶ್ನಿಸಿ ಕರ್ನಾಟಕ ಅರ್ಜಿ ಸಲ್ಲಿಸಿದೆ. ಕಳೆದ ಮೂರು ತಿಂಗಳ ಹಿಂದೆಯೇ ಈ ಪ್ರಕರಣದ ತೀರ್ಪು ಹೊರಬೀಳಬೇಕಿತ್ತು. ಈ ಬಗ್ಗೆ ಘನ ನ್ಯಾಯಾಲಯಕ್ಕೆ ನಾನು ಮನವರಿಕೆ ಮಾಡಿಕೊಡಬೇಕಾಗಿತ್ತು ಎಂದು ಕರ್ನಾಟಕ ಪರ ವಕೀಲ ದುಷ್ಯಂತ್ ಹೇಳಿದ್ದಾರೆ.

ಆರೋಪಿಗಳ ವಿರುದ್ಧ ಶಿಕ್ಷೆ ಪ್ರಮಾಣ

ಆರೋಪಿಗಳ ವಿರುದ್ಧ ಶಿಕ್ಷೆ ಪ್ರಮಾಣ

ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತವಾದರೆ ಜಯಲಲಿತಾ ಅವರು ಅಕ್ರಮವಾಗಿ ಗಳಿಸಿದ ಆಸ್ತಿ ಎಲ್ಲವನ್ನು ಜಪ್ತಿ ಮಾಡಿ ಸರ್ಕಾರದ ಬೊಕ್ಕಸಕ್ಕೆ ಸೇರಿಸಲಾಗುತ್ತದೆ. ಮಿಕ್ಕ ಆರೋಪಿಗಳ ವಿರುದ್ಧ ಶಿಕ್ಷೆ ಪ್ರಮಾಣ ಪ್ರಕಟಿಸಲಾಗುತ್ತದೆ. ಕೆಳಹಂತದ ನ್ಯಾಯಾಲಯ 4 ವರ್ಷ ಶಿಕ್ಷೆ ಪ್ರಕಟಿಸಿತ್ತು. ಶಶಿಕಲಾ ಅವರ ಸಿಎಂ ಪಟ್ಟದ ಕನಸು ನುಚ್ಚುನೂರಾಗಲಿದೆ.

English summary
The Supreme Court is likely to deliver its verdict in the Jayalithaa Disproportionate assets case by the end of this week. Sources say that the verdict to be pronounced by a division bench comprising Justices P C Ghose and Amitava Roy is ready.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X