ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾ ಪ್ರಕರಣ: ಸರ್ಕಾರದಿಂದ 4 ಸಾವಿರ ಪುಟಗಳ ಅಪೀಲ್

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜೂ. 22: ಕರ್ನಾಟಕ ರಾಜ್ಯ ಸರ್ಕಾರ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಗೆ 4 ಸಾವಿರ ಪುಟಗಳ ಮೇಲ್ಮನವಿಯನ್ನು ಮಂಗಳವಾರ ಸಲ್ಲಿಕೆ ಮಾಡಲಿದೆ.

ಸಲ್ಲಿಸಿರುವ ಅಪೀಲ್ ನಲ್ಲಿ ಕರ್ನಾಟಕ ಹೈ ಕೋರ್ಟ್ ನೀಡಿರುವ ಜಡ್ಜ್‌ ಮೆಂಟ್ ಪ್ರತಿಗಳು ಸೇರಿದೆ. ಒಟ್ಟು 3900 ಪುಟಗಳ ಮನವಿಯೊಂದಿಗೆ ನೂರು ಪುಟಗಳ ಜಡ್ಜ್‌ ಮೆಂಟ್ ಪ್ರತಿಗಳು ಸೇರಿವೆ.[ಜಯಲಲಿತಾ ವಿರುದ್ಧ ಮೇಲ್ಮನವಿ ಸಲ್ಲಿಸಲು 7 ಕಾರಣಗಳು!]

 jayalalithaa

ಜಯಲಲಿತಾ ಮತ್ತು ಮೂವರ ವಿರುದ್ಧ ದಾಖಲಾಗಿದ್ದ ಅಕ್ರಮ ಆಸ್ತಿ ಗಳಿಕೆ ಸಂಬಂಧಿಸಿದ ಪ್ರಕರಣದ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿಯನ್ನು ಸಲ್ಲಿಕೆ ಮಾಡಲಾಗುವುದು.

4000 ಪುಟಗಳ ಮೇಲ್ಮನವಿ
ಜಯಲಲಿತಾ ಪ್ರಕರಣದ ಎಲ್ಲ ಮಾಹಿತಿಗಳನ್ನು ಒಟ್ಟು ಗೂಡಿಸಿ 4000 ಪುಟಗಳ ಮನವಿ ಸಲ್ಲಿಕೆ ಮಾಡಲಾಗುವುದು. ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ದೆಹಲಿಗೆ ತಲುಪಿದೆ ಎಂದು ಕಾನೂನು ಇಲಾಖೆ ಮಾಹಿತಿ ನೀಡಿದೆ.[ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಟೈಮ್ ಲೈನ್]

ಎಲ್ಲ ದಾಖಲೆಗಳನ್ನು ಮಂಗಳವಾರವೇ (ಜೂನ್ 23) ರಂದೇ ಸಲ್ಲಿಸಲು ನಿರ್ಧರಿಸಲಾದ್ದರೂ ಮಾಹಿತಿಗಳ ವ್ಯವಸ್ಥಿತ ಸೇರ್ಪಡೆಗೆ ಇನ್ನೆರಡು ದಿನ ಹಿಡಿಯಬಹುದು ಎಂದು ಕಾನೂನು ಇಲಾಖೆ ತಿಳಿಸಿದೆ.

ಯಾವ ಆಧಾರದಲ್ಲಿ ಮೇಲ್ಮನವಿ ಸಿದ್ಧಪಡಿಸಲಾಗಿದೆ?
ಭ್ರಷ್ಟಾಚಾರದ ಪ್ರಕರಣವನ್ನೇ ಆಧಾರವಾತಗಿ ಇಟ್ಟುಕೊ೦ಡು ಮೇಲ್ಮನವಿ ಪ್ರತಿಗಳನ್ನು ಸಿದ್ಧಮಾಡಲಾಗಿದೆ. ಬೆನಿಫಿಟ್ ಆಫ್ ಡೌಟ್ ಆಧಾರದಲ್ಲಿ ಹೈ ಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಮೇಲೆ ಸಂಪೂರ್ಣ ವಿಶ್ವಾಸ ಇರಿಸಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದ ಅಷ್ಟೂ ಮಾಹಿತಿಗಳನ್ನು ಏಕಕಾಲಕ್ಕೆ ನೀಡುವ ಇರಾದೆ ರಾಜ್ಯ ಸರಕಾರದ್ದು.

ಈ ಬಗ್ಗೆ ಮಾಹಿತಿ ನೀಡಿರುವ ಅಡ್ವೋಕೇಟ್ ಜನರಲ್ , ತಮಿಳು ನಾಡಿನಿಂದ ಕರ್ನಾಟಕಕ್ಕೆ ಪ್ರಕರಣ ವರ್ಗಾವಣೆಗೊಂಡ ನಂತರದ ಎಲ್ಲ ದಾಖಲೆಗಳನ್ನು, ಪ್ರಕರಣದ ವಿಚಾರಣೆಯ ಪ್ರಮುಖ ಅಂಶಗಳನ್ನು ಒಟ್ಟುಗೂಡಿಸಿ ಸಲ್ಲಿಕೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.

English summary
The appeal filed by the Karnataka government in the J Jayalithaa disproportionate assets case in the Supreme Court comprises 4,000 pages. The appeal which will in all probability filed by Tuesday contains annexures running upto 3,900 pages while the grounds seeking to set aside the verdict of the Karnataka High Court contains 100 pages.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X