ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮ್ಮ ಇಲ್ಲದ ಮೇಲೆ ರಾಜ್ಯ ನಡೆದೀತು ಹೇಗೆ ?

By Ananthanag
|
Google Oneindia Kannada News

ಚೆನ್ನೈ, ಡಿಸೆಂಬರ್ 6: ತಮಿಳುನಾಡಿನ ಆರಾಧ್ಯದೈವ ಜಯಲಲಿತಾ ವಿಧಿವಶರಾಗಿದ್ದಾರೆ. ಅನೇಕ ರಾಜಕಾರಣಿಗಳು, ಸಿನಿ ನಟರು ಅಂತಿಮ ನಮನ ಸಲ್ಲಿಸಿದ್ದಾರೆ. ಪನ್ನೀರು ಸೆಲ್ವಂ ಮುಖ್ಯಮಂತ್ರಿಯಾಗಿ ಪ್ರಮಾಣವಚನವನ್ನೂ ಸ್ವೀಕರಿಸಿದ್ದಾರೆ. ಈ ವೇಳೆ ಜನರ ಮನಸ್ಸಿನಲ್ಲಿ ಇರುವ ಏಕೈಕ ಪ್ರಶ್ನೆ ಅಮ್ಮ ಇಲ್ಲದ ಮೇಲೆ ರಾಜ್ಯದ ಆಡಳಿತ ಹೇಗೆ ನಡೆಯುತ್ತದೆ ಎಂಬ ಆತಂಕ, ಭಯ ಕಾಡಲು ಪ್ರಾರಂಭವಾಗಿದೆ.

[ಗ್ಯಾಲರಿ: ಶೋಕಸಾಗರದಲ್ಲಿ 'ಅಮ್ಮ'ನ ಮಕ್ಕಳು]

ಪನ್ನೀರ್ ಸೆಲ್ವಂ ಅವರಿಗೆ ಅಮ್ಮ ತೋರಿದ ದಾರಿ ಮಾತ್ರ ಇದೆ. ಅಮ್ಮ ನಡೆದ ಕಲ್ಲುಮುಳ್ಳಿನ ದಾರಿಯಲ್ಲಿ ಅವರು ನಡೆಯಬೇಕಿದೆ. ಜನರನ್ನು, ಪಕ್ಷದ ಸದಸ್ಯರ ಬಗ್ಗೆ ಗಮನಹರಿಸ ಬೇಕಿದೆ. ಅಮ್ಮಾ ಇದ್ದಾಗ ಅವರ ಮಾತನ್ನು ಎಲ್ಲರು ಕೇಳುತ್ತಿದ್ದರು, ಈಗ ಕೇಳುವರೇ?[ತಮಿಳು ಭಾಷಿಗರ 'ಅಮ್ಮ' ಕು. ಜಯಲಲಿತಾ ವ್ಯಕ್ತಿಚಿತ್ರ]

jayalalitha no more: next what happened in tamilnadu

ರಾಜ್ಯದ ರಾಜಕೀಯದಲ್ಲಿ ತಮಿಳುನಾಡು ಮೊದಲಿನಿಂದಲು ಪ್ರತ್ಯೆಕತೆಯನ್ನು ಕಾಯ್ದುಕೊಂಡು ಬಂದ ಆಡಳಿತ, ತೃತೀಯರಂಗದಲ್ಲಿ ಕೆಲವೊಮ್ಮೆ ಒಲವು ತೋರಿದ್ದು, ರಾಷ್ಟೀಯ ಪಕ್ಷಗಳೊಂದಿಗೆ ಸಹಕರಿಸಿದ್ದು ಎಲ್ಲವೂ ಇದೆ. ಅದರೆ ಅಮ್ಮ ಇಲ್ಲದ ರಾಜ್ಯದಲ್ಲಿ ಮುಂದೆ ಏನಾಗುತ್ತದೆ ಎಂಬ ಪ್ರಶ್ನೆಯಂತೂ ಕಾಡುತ್ತಿದೆ.

ರಾಜ್ಯದಲ್ಲಿ ಮೊದಲಿನಿಂದಲು ಪೈಪೋಟಿಯನ್ನು ನೀಡುತ್ತಿದ್ದ ಡಿಎಂಕೆ ಇನ್ನು ತನ್ನ ಆಟ ಶುರು ಮಾಡುವುದೇ? ಅಥವಾ ಪನ್ನೀರ್ ಸೆಲ್ವಂ ಜಯಾ ಆಶೀರ್ವಾದದಿಂದ ಮುನ್ನುಗುವರೇ? ತಿಳಿಯಬೇಕಿದೆ.
ತಮಿಳರು ಭಾವನಾತ್ಮಕ ಜೀವಿಗಳು ಎಂಬುದಕ್ಕೆ ಅಪೋಲೋ ಆಸ್ಪತ್ರೆ ಬಳಿ ಅವರು ಮಾಡಿದ ಪೂಜೆ ಪುನಸ್ಕಾರಗಳೇ ಸಾಕ್ಷಿ, ಅಮ್ಮ ಇಲ್ಲದ ರಾಜ್ಯದಲ್ಲಿ ಅವರನ್ನು ಯಾರು ಕೈ ಹಿಡಿಯಬೇಕು ಜನ ಅಮ್ಮನ ಹೊರತಾಗಿ ಯಾರನ್ನು ಒಪ್ಪುತ್ತಾರೆ ಎಂಬುದೇ ಪ್ರಶ್ನೆ.

ಅಮ್ಮಾ ವಿಧಿವಶವಾದ ಬೆನ್ನಲ್ಲೇ ಮತ್ತೆ ಡಿಎಂಕೆ ಬಾಲ ಬಿಚ್ಚುತ್ತದೆಯೇ ? ಅಥವಾ ರಾಷ್ಟೀಯ ಪಕ್ಷ ಮುಂದೆ ತಮಿಳುನಾಡನ್ನು ಆಕ್ರಮಿಸುವುದೇ, ಅಥವಾ ಎಐಎಡಿಎಂಕೆ ರಾಜಕೀಯವಾಗಿ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

English summary
Tamil Nadu Chief Minister J Jayalalithaa passed away on 5th December in Chennai. What happened in next political field in tamilnadu
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X