ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಯಾ ಕೇಸ್: ಮಾರ್ಚ್ 10ಕ್ಕೆ ವಿಚಾರಣೆ ಮುಂದೂಡಿಕೆ

|
Google Oneindia Kannada News

ನವದೆಹಲಿ, ಫೆಬ್ರವರಿ, 25: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿ ಪ್ರಕರಣ ಖುಲಾಸೆ ಸಂಬಂಧ ರಾಜ್ಯ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯು ಮುಂದಿವ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಾರ್ಚ್ 10ಕ್ಕೆ ಮುಂದೂಡಿದೆ. ಜತೆಗೆ ಎರಡು ಪಾರ್ಟಿಗಳು ಸಮರ್ಪಕ ಆಧಾರಗಳನ್ನು ಹಾಜರು ಪಡಿಸಬೇಕು ಎಂದು ತಿಳಿಸಿದೆ.

ಇಂದು ರಾಜ್ಯ ಸರ್ಕಾರ ಕೆಲ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದೆ ಎಂದು ಹೇಳಲಾಗಿತ್ತು. ಜಯಲಲಿತಾರ ಪೋಸ್ ಗಾರ್ಡನ್ ನಿವಾಸದಲ್ಲಿ ವಾಸವಿದ್ದ ಇತರರು ಅಂದರೆ ಶಶಿಕಲಾ, ಇಳವರಸಿ ಮತ್ತು ವಿ ಸುಧಾಕರನ್ ಬಹುಮೌಲ್ಯದ ಹಣವನ್ನು ಬ್ಯಾಂಕ್ ನಲ್ಲಿ ಡಿಪಾಸಿಟ್ ಮಾಡಿದ್ದರು ಎಂದು ರಾಜ್ಯ ಸರ್ಕಾರದ ನ್ಯಾಯವಾದಿ ದುಶ್ಯಂತ ದಾವೆ ವಾದ ಮಂಡಿಸಿದರು. ಆದರೆ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಮುಂದೂಡಿದೆ.[ಜಯಾ ಕೇಸ್: ಹೈಕೋರ್ಟ್ ವಿಶ್ಲೇಷಣೆ ಗೇಲಿ ಮಾಡಿದ ಸರ್ಕಾರ!]

jayalalithaa

ಕರ್ನಾಟಕ ಹೈ ಕೋರ್ಟ್ ಈ ಪ್ರಕರಣದಲ್ಲಿ ವಿಶೇಷ ಆಸಕ್ತಿ ವಹಿಸಿ ವಿಚಾರಣೆ ಮಾಡಿದಂತೆಯೂ ಕಾಣಲಿಲ್ಲ ಎಂದಿರುವ ದಾವೆ ಇಂದು ಕೆಲ ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ. ಜಯಲಲಿತಾ ಜನ್ಮದಿನ ಆಚರಿಸಿಕೊಂಡಿರಬಹುದು, ಆದರೆ ಜನ್ಮದಿನಕ್ಕೆ ಖರ್ಚು ಮಾಡಿದ ಹಣ ಕಾನೂನು ಬದ್ಧವಾಗಿ ಬಂದದ್ದಲ್ಲ ಎಂದು ದಾವೆ ಹೇಳಿದ್ದರು.[ಜಯಾ ಅಕ್ರಮ ಆಸ್ತಿ ಟೈಮ್ ಲೈನ್]

ಪ್ರಕರಣವನ್ನು ಯಾವ ಆಧಾರದಲ್ಲಿ ವಿಚಾರಣೆ ನಡೆಸಲಾಯಿತು ಎಂಬ ಬಗ್ಗೆಯೇ ಸ್ಪಷ್ಟನೆಗಳಿಲ್ಲ. ಇದನ್ನು ಮೊದಲು ಭ್ರಷ್ಟಾಚಾರದ ಪ್ರಕರಣ ಎಂದು ಪರಿಗಣಿಸಬೇಕು ಎಂದು ದಾವೆ ಮಂಗಳವಾರ ಮತ್ತು ಬುಧವಾರ ವಾದ ಮುಂದಿಟ್ಟಿದ್ದರು.

English summary
Hearing on the J Jayalalithaa DA case will continue for the third day. Karnataka is expected to wind up arguments today. Karnataka will have to produce a list of witnesses in the case.The three other accused staying the Poes Garden were taking bags of currency notes and depositing them in banks and this was not accounted for said Dushyanth Dave, senior advocate arguing on the behalf of Karnataka which is challenging the acquittal of Tamil Nadu Chief Minister, J Jayalalithaa in the disproportionate assets case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X