ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಶಿಕಲಾ ಭವಿಷ್ಯ: 2 ಸುಪ್ರೀಂ ಜಡ್ಜ್ ಗಳ ಮುಂದಿರುವ 4 ಸಾಧ್ಯತೆಗಳು

ತಮಿಳುನಾಡಿನ ಮುಖ್ಯಮಂತ್ರಿಯಾಗಲು ಕಾತುರದಿಂದ ಕಾದಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರ ರಾಜಕೀಯ ಭವಿಷ್ಯ ಮಂಗಳವಾರ ನಿರ್ಧಾರವಾಗಲಿದೆ. ಸುಪ್ರೀಂಕೋರ್ಟಿನ ತೀರ್ಪಿನ ಮೇಲೆ ಶಶಿಕಲಾ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ.

By ವಿಕಾಸ್ ನಂಜಪ್ಪ
|
Google Oneindia Kannada News

ಚೆನ್ನೈ, ಫೆಬ್ರವರಿ 14: ತಮಿಳುನಾಡಿನ ಮುಖ್ಯಮಂತ್ರಿಯಾಗಲು ಕಾತುರದಿಂದ ಕಾದಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್ ಅವರ ರಾಜಕೀಯ ಭವಿಷ್ಯ ಮಂಗಳವಾರ ನಿರ್ಧಾರವಾಗಲಿದೆ. ಸುಪ್ರೀಂಕೋರ್ಟಿನ ತೀರ್ಪಿನ ಮೇಲೆ ಶಶಿಕಲಾ ಮುಂದಿನ ಹೆಜ್ಜೆ ಇಡಬೇಕಾಗುತ್ತದೆ. ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಾಲ್ಕು ರೀತಿ ಆದೇಶ ನೀಡುವ ಸಾಧ್ಯತೆಗಳಿವೆ.

ತಮಿಳುನಾಡಿನ ನಿಯೋಜಿತ ಸಿಎಂ ಶಶಿಕಲಾ ನಟರಾಜನ್ ಹಾಗೂ ಇತರೆ ಆರೋಪಿಗಳಿಗೆ ಭಯ ಕಾಡುತ್ತಿದೆ. ಜಸ್ಟೀಸ್ ಪಿಸಿ ಘೋಸೆ ಹಾಗೂ ಅಮಿತಾವ್ ರಾಯ್ ಅವರಿರುವ ವಿಭಾಗೀಯ ಪೀಠದಿಂದ ತೀರ್ಪು ಹೊರ ಬೀಳಲಿದೆ.

ಜೆ ಜಯಲಲಿತಾ, ಶಶಿಕಲಾ ನಟರಾಜನ್, ಇಳವರಸಿ ಹಾಗೂ ಸುಧಾಕರಣ್ ಅವರನ್ನು ಅಪರಾಧಿ ಎಂದು ಕೆಳಹಂತದ ನ್ಯಾಯಲಯ ಘೋಷಿಸಿದೆ. ಈ ಬಗ್ಗೆ ಹೈಕೋರ್ಟಿನಲ್ಲಿ ಅಪೀಲ್ ಹಾಕಿದ ಬಳಿಕ ಎಲ್ಲರಿಗೂ ನೆಮ್ಮದಿ ಸಿಕ್ಕಿತ್ತು. ಈಗ ಪ್ರಕರಣ ಸುಪ್ರೀಂಕೋರ್ಟಿನಲ್ಲಿದ್ದು ,ತೀರ್ಪು ಹೊರ ಬೀಳಬೇಕಿದೆ.[ಸಂಕಷ್ಟದಲ್ಲಿರುವ ಶಶಿಕಲಾ ನಟರಾಜನ್ ಮಾಡಿದ 5 ನಿರ್ಣಾಯಕ ತಪ್ಪುಗಳು]

ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೆ ಜಯಲಿತಾ ಅವರಿಗೆ ಜಾಮೀನು ಸಿಕ್ಕಿರುವುದನ್ನು ಪ್ರಶ್ನಿಸಿ ಕರ್ನಾಟಕ ಅರ್ಜಿ ಸಲ್ಲಿಸಿದೆ. ಕಳೆದ ಮೂರು ತಿಂಗಳ ಹಿಂದೆಯೇ ಈ ಪ್ರಕರಣದ ತೀರ್ಪು ಹೊರಬೀಳಬೇಕಿತ್ತು. ಈ ಬಗ್ಗೆ ಘನ ನ್ಯಾಯಾಲಯಕ್ಕೆ ನಾನು ಮನವರಿಕೆ ಮಾಡಿಕೊಡಬೇಕಾಗಿತ್ತು ಎಂದು ಕರ್ನಾಟಕ ಪರ ವಕೀಲ ದುಷ್ಯಂತ್ ಹೇಳಿದ್ದಾರೆ.

ಕೆಳಹಂತದ ನ್ಯಾಯಾಲಯದ ತೀರ್ಪು

ಕೆಳಹಂತದ ನ್ಯಾಯಾಲಯದ ತೀರ್ಪು

ಕೆಳಹಂತದ ನ್ಯಾಯಾಲಯದ ತೀರ್ಪು ಎತ್ತಿಹಿಡಿದರೆ ಕನಿಷ್ಠ ನಾಲ್ಕು ವರ್ಷ ಶಿಕ್ಷೆ ಹಾಗೂ 100 ಕೋಟಿ ರು ದಂಡ ತೆರಬೇಕಾಗುತ್ತದೆ. ಆದರೆ, ಶಿಕ್ಷೆ ಪ್ರಮಾಣ ಪ್ರಕಟಣೆಯಲ್ಲಿ ಜಡ್ಡ್ ಗಳ ನಡುವೆ ಭಿನ್ನಾಭಿಪ್ರಾಯ ಮೂಡಿದರೆ, ಶಶಿಕಲಾ ಅವರು ಸಿಎಂ ಪಟ್ಟಕ್ಕೇರಲು ಅನರ್ಹರಾಗುತ್ತಾರೆ. ತ್ರಿಸದಸ್ಯ ಪೀಠ ಮಾತ್ರ ಶಿಕ್ಶ್ಗೆ ಪ್ರಮಾಣ ಪ್ರಕಟಿಸಬಹುದು.[ಶಶಿಕಲಾ ಭವಿಷ್ಯ ನಿರ್ಧರಿಸುವ ಸುಪ್ರೀಂ ತೀರ್ಪು ಮಂಗಳವಾರ ಬೆಳಗ್ಗೆ 10.30ಕ್ಕೆ]

ಇಬ್ಬರು ನ್ಯಾಯಮೂರ್ತಿಗಳ ನಡುವೆ ತೀರ್ಪು

ಇಬ್ಬರು ನ್ಯಾಯಮೂರ್ತಿಗಳ ನಡುವೆ ತೀರ್ಪು

ಇಬ್ಬರು ನ್ಯಾಯಮೂರ್ತಿಗಳ ನಡುವೆ ತೀರ್ಪಿನಲ್ಲಿ ಭಿನ್ನಾಭಿಪ್ರಾಯ ಉಂಟಾದರೆ, ಈ ಪ್ರಕರಣ ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳ ಮುಂದೆ ಬರಲಿದ್ದು, ಹೊಸದಾಗಿ ತ್ರಿಸದಸ್ಯ ಪೀಠವನ್ನು ರಚಿಸಲಾಗುತ್ತದೆ.[ವಿಧಾನಸಭೆಯಲ್ಲಿ ಚಿನ್ನಮ್ಮ-ಒಪಿಎಸ್ ಏಕಕಾಲಕ್ಕೆ ಸಂಖ್ಯಾ ಬಲ ಪ್ರದರ್ಶನ]

ತ್ರಿಸದಸ್ಯ ಪೀಠ

ತ್ರಿಸದಸ್ಯ ಪೀಠ

ತ್ರಿಸದಸ್ಯ ಪೀಠ ಜಾರಿಗೊಂಡರೆ ಕರ್ನಾಟಕ ಹೈಕೋರ್ಟ್ ಆದೇಶ ಎತ್ತಿ ಹಿಡಿದ್ದಂತಾಗುತ್ತದೆ. ಶಶಿಕಲಾ ಸೇರಿದಂತೆ ಎಲ್ಲರೂ ಬಚಾವ್ ಆಗುತ್ತಾರೆ. ಶಶಿಕಲಾ ಸಿಎಂ ಪಟ್ಟಕ್ಕೇರಬಹುದು.[ಮೋಸಗಾರ ಪನ್ನೀರ್ ಬಣ್ಣ ಬಯಲು : ಬೆಂಕಿಯುಗುಳಿದ ಶಶಿ]

ಪ್ರಮುಖ ಆರೋಪಿ ಜಯಲಲಿತಾ

ಪ್ರಮುಖ ಆರೋಪಿ ಜಯಲಲಿತಾ

ಪ್ರಮುಖ ಆರೋಪಿ ಜಯಲಲಿತಾ ನಿಧನರಾಗಿರುವುದರಿಂದ ಪ್ರಕರಣವನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳುವಂತೆ ಕರ್ನಾಟಕ ಹೈಕೋರ್ಟಿಗೆ ಸೂಚಿಸಬಹುದು. ಕರ್ನಾಟಕದ ವಕೀಲರು ವಿಚಾರಣೆಗಾಗಿ ಪುನಃ ಹೊಸದಾಗಿ ಮನವಿ ಸಲ್ಲಿಸಬೇಕಾಗುತ್ತದೆ.(ಒನ್ಇಂಡಿಯಾ ಸುದ್ದಿ)

English summary
It is almost certain that a Division Bench of the Supreme Court will deliver two separate verdicts in the Jayalalithaa disproportionate assets case on Tuesday. The list of business in the Supreme Court's cause list mentions the names of both Justices Pinaki Chandra Ghose and Amitava Roy. This makes it clear
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X