ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಧರ ಶೋಚನೀಯ ಸ್ಥಿತಿ ತೆರೆದಿಟ್ಟಿದ್ದ ಸೈನಿಕ ಅನುಮಾನಾಸ್ಪದ ಸಾವು

ಮಹಾರಾಷ್ಟ್ರದ ಡಿಯೊಲಾಲಿ ಕಂಟೋನ್ಮೆಂಟ್ ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಆಗಿ ಸೇವೆ ಸಲ್ಲಿಸುತ್ತಿದ್ದ ಸೈನಿಕ; ಕೆಲ ದಿನಗಳ ಹಿಂದೆ ಸೇನೆಯಲ್ಲಿನ ಸೈನಿಕ ಶೋಷಣೆಯನ್ನು ವೀಡಿಯೊ ಮೂಲಕ ಜಗಜ್ಜಾಹೀರು ಮಾಡಿದ್ದ ಯೋಧ.

|
Google Oneindia Kannada News

ಮುಂಬೈ, ಮಾರ್ಚ್ 3: ಭಾರತೀಯ ಸೇನೆಯಲ್ಲಿರುವ ಬ್ರಿಟಿಷರ ಕಾಲದ 'ಸಹಾಯಕ್' (ಯೋಧರನ್ನು ವೈಯಕ್ತಿಕ ಕೆಲಸಗಳಿಗೆ ಬಳಸಿಕೊಳ್ಳುವುದು) ವ್ಯವಸ್ಥೆಯನ್ನು ವೀಡಿಯೋ ಮೂಲಕ ಇತ್ತೀಚೆಗೆ ಬಹಿರಂಗಗೊಳಿಸಿದ್ದ ಭಾರತೀಯ ಯೋಧ ರಾಯ್ ಥಾಮಸ್ (33) ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಈತ ಮಹಾರಾಷ್ಟ್ರದ ಡಿಯೊಲಾಲಿ ಕಂಟೋನ್ಮೆಂಟ್ ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಆಗಿ ಸೇವೆ ಸಲ್ಲಿಸುತ್ತಿದ್ದನೆಂದು ಸೇನಾ ಮೂಲಗಳು ತಿಳಿಸಿವೆ.

Jawan Roy Mathew who exposed Army's 'Sahayak' System Found dead

ಮುಂಬೈನಲ್ಲಿನ ಸೇನಾ ಬರಾಕ್ ನಲ್ಲಿಯೇ ಆತನ ದೇಹ ಪತ್ತೆಯಾಗಿದ್ದು, ದೇಹ ದೊರೆತಾಗ ದೇಹವು ಕೊಳೆತ ಸ್ಥಿತಿಯಲ್ಲಿತ್ತು ಪೊಲೀಸರು ತಿಳಿಸಿದ್ದಾರೆ.

ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ವರದಿ ಬಂದ ನಂತರವಷ್ಟೇ ಅದು ಆತ್ಮಹತ್ಯೆಯೋ, ಕೊಲೆಯೋ ಎಂಬುದು ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅತ್ತ, ಭಾರತೀಯ ಸೇನೆಯು ಈ ಬಗ್ಗೆ ಪ್ರತ್ಯೇಕ ತನಿಖೆ ನಡೆಸುವುದಾಗಿ ಹೇಳಿದೆ.

English summary
A 33-year-old soldier named Roy Mathew, gunner in the Deolali Cantonment in Maharashtra, had been missing since last Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X