ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು-ಕಾಶ್ಮೀರ ಸಿಎಂ ಮುಫ್ತಿ ಮೊಹಮದ್ ಸಯೀದ್ ವಿಧಿವಶ

|
Google Oneindia Kannada News

ನವದೆಹಲಿ, ಜನವರಿ 07 : ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ (79) ಅವರು ಗುರುವಾರ ವಿಧಿವಶರಾದರು. ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಡಿಸೆಂಬರ್ 24ರಂದು ದೆಹಲಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಜಮ್ಮು ಮತ್ತು ಕಾಶ್ಮೀರದ ಶಿಕ್ಷಣ ಸಚಿವ ನಯೀಮ್ ಅಕ್ತರ್ ಅವರು ಮುಖ್ಯಮಂತ್ರಿ ಮುಫ್ತಿ ಮೊಹಮದ್ ಸಯೀದ್ ಅವರು ವಿಧಿವಶರಾಗಿದ್ದಾರೆ ಎಂದು ಗುರುವಾರ ಬೆಳಗ್ಗೆ ಹೇಳಿದ್ದಾರೆ. ಶ್ವಾಸಕೋಶ ಮತ್ತು ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸಯೀದ್ ಅವರನ್ನು ಡಿಸೆಂಬರ್ 24ರಂದು ಶ್ರೀನಗರದಿಂದ ದೆಹಲಿಗೆ ಕರೆತಂದು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. [ಜಮ್ಮುವಿನಲ್ಲಿ ಪಿಡಿಪಿ-ಬಿಜೆಪಿ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ]

Mufti Mohammad Sayeed

2015ರ ಮಾರ್ಚ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ-ಪಿಡಿಪಿ (ಪೀಪಲ್ ಡೆಮಾಕ್ರಟಿಕ್ ಪಾರ್ಟಿ) ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಪಿಡಿಪಿ ಅಧ್ಯಕ್ಷ ಮುಫ್ತಿ ಮೊಮಹದ್ ಸಯೀದ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. 2002ರಿಂದ 2005ರವರೆಗೆ ಮೊದಲ ಬಾರಿಗೆ ಕಾಶ್ಮೀರದ ಸಿಎಂ ಆಗಿದ್ದರು. 1989 ರಿಂದ 1990ರ ತನಕ ಕೇಂದ್ರ ಸರ್ಕಾರದಲ್ಲಿ ಗೃಹ ಸಚಿವರಾಗಿಯೂ ಸಯೀದ್ ಕೆಲಸ ಮಾಡಿದ್ದರು. [ಬಿಜೆಪಿ ಸಖ್ಯ ಬೆಳೆಸಿರುವ ಸಿಎಂ ಮುಫ್ತಿ ಎಂಥಾ ರಾಜಕಾರಣಿ ಗೊತ್ತಾ?]

ಮುಫ್ತಿ ಮೊಮಹದ್ ಸಯೀದ್ ಅವರ ಪುತ್ರಿ ಮೆಹಬೂಬಾ ಮುಫ್ತಿ ಅವರು ಜಮ್ಮು ಮತ್ತು ಕಾಶ್ಮೀರದ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ಇದೆ. ಪಿಡಿಪಿ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮೆಹಬೂಬಾ ಮುಫ್ತಿ ಅವರು ಮುಖ್ಯಮಂತ್ರಿಯಾಗಲು ಒಪ್ಪಿಗೆ ನೀಡಿದೆ.

ಮೋದಿ ಸಂತಾಪ : ಮುಫ್ತಿ ಮೊಮಹದ್ ಸಯೀದ್ ಅವರ ನಿಧನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ತುಂಬಲಾರದ ನಷ್ಟ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವಿಟ್ ಮಾಡಿ ಸಂತಾಪ ಸೂಚಿಸಿದ್ದಾರೆ. [ಪಿಟಿಐ ಚಿತ್ರ]

English summary
Jammu and Kashmir Chief Minister Mufti Mohammad Sayeed (79) passed away after being in critical condition for the past few days. J&K Education Minister Naeem Akhtar announced that Chief Minister passed away in Delhi VIMS hospital on Thursday, January 7, 2016.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X