ಕಾಶ್ಮೀರದ ಶೋಪಿಯಾನ್ ಎನ್ಕೌಂಟರ್ ನಲ್ಲಿ ಇಬ್ಬರು ಸೈನಿಕರ ಬಲಿ

Subscribe to Oneindia Kannada

ಜಮ್ಮು ಮತ್ತು ಕಾಶ್ಮೀರ, ಆಗಸ್ಟ್ 13: ಶೋಪಿಯಾನ್ ನಲ್ಲಿ ಬೆಳ್ಳಂಬೆಳಗ್ಗೆ ನಡೆದ ಎನ್ಕೌಂಟರ್ ನಲ್ಲಿ ಇಬ್ಬರು ಸೈನಿಕರು ಸಾವನ್ನಪ್ಪಿದ್ದಾರೆ. ಸೆಪೋಯ್ ಇಲಯರಾಜ ಪಿ ಮತ್ತು ಸೆಪೋಯ್ ಗೊವಾಯಿ ಸುಮೇದ್ ವಾಮನ್ ಸಾವಿಗೀಡಾದ ಸೈನಿಕರಾಗಿದ್ದಾರೆ.

ಇನ್ನು ಎನ್ಕೌಂಟರ್ ನಲ್ಲಿ ಮೂವರು ಉಗ್ರ ಸಾವನ್ನಪ್ಪಿದ್ದು, ಉಗ್ರರ ಗುಂಡಿಗೆ ಇನ್ನೂ ಮೂವರು ಸೈನಿಕರಿಗೆ ಗಾಯಗಳಾಗಿವೆ. ಇನ್ನು, "ಈ ಪ್ರದೇಶದಲ್ಲಿ ಉಗ್ರರು ಅಡಗಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಹುಡುಕಾಟ ಮುಂದುವರಿಸಲಾಗಿದೆ," ಎಂದು ಈ ಹಿಂದೆ ಜಮ್ಮು ಮತ್ತು ಕಾಶ್ಮೀರ ಡಿಜಿಪಿ ಎಸ್.ಪಿ ವಾಯಿದ್ ಹೇಳಿದ್ದರು. ಈಗ ಕಾರ್ಯಾಚರಣೆ ಮುಗಿದಿದ್ದು ಎಲ್ಲಾ ಉಗ್ರರನ್ನೂ ಹೊಡೆದುರುಳಿಸಲಾಗಿದೆ.

J&K: Two Army soldiers have lost their lives in encounter in Shopian, operations continue

ಇದೇ ವೇಳೆ ಬಂಡಿಪೊರಾದ ಪೊಲೀಸ್ ಬೀಟ್ ಮೇಲೆ ಉಗ್ರರು ದಾಳಿ ನಡೆಸಿದ್ದು ಇಬ್ಬರು ಪೊಲೀಸರಿಗೆ ಗಾಯಗಳಾಗಿವೆ. ಇಲ್ಲಿ ಉಗ್ರರಿಗಾಗಿ ಭದ್ರತಾ ಪಡೆಗಳು ಹುಡುಕಾಟ ಮುಂದುವರಿಸಿದ್ದು ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದೆ.

J&K: Two Army soldiers have lost their lives in encounter in Shopian, operations continue
Indian Army man attacked by mob in Kashmir- Oneindia Kannada

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Two Army soldiers have lost their lives in encounter in Shopian, Jammu and Kashmir.
Please Wait while comments are loading...