ರಿಸೋಸ್ಯಾಟ್-2A ಉಡಾವಣೆ, ಕಕ್ಷೆಗೆ ಸೇರಿದ ಉಪಗ್ರಹ

Subscribe to Oneindia Kannada

ಶ್ರೀಹರಿಕೋಟಾ, ಡಿಸೆಂಬರ್ 7: ಭಾರತೀಯ ಭಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸೆಟಲೈಟ್ ರೀಸೊಸ್ಯಾಟ್ -2A ಯಶಸ್ವಿ ಉಡಾವಣೆಯನ್ನು ಮಾಡಿ ಮತ್ತೊಂದು ಮಹತ್ವದ ಮೈಲುಗಲ್ಲನ್ನು ಮೆರೆದಿದೆ. ಅಲ್ಲದೆ ಅದು ತನ್ನ ಕಕ್ಷೆಯಲ್ಲಿ ಸರಿಯಾಗಿ ಸೇರಿದೆ ಎಂದು ಇಸ್ರೋ ತಿಳಿಸಿದೆ.

ಇದು ದೂರಸಂವೇದಿ ಉಪಗ್ರಹವಾಗಿದ್ದು, ಇದನ್ನು ಎ ಪೋಲಾರ್ ಉಪಗ್ರಹ ಲಾಂಚ್ ವಾಹನ- ಪಿಎಸ್ಎಲ್ ವಿ 36 ರಲ್ಲಿ ತಂದು ಉಡಾವಣೆ ಮಾಡಲಾಗಿದೆ. ರೀಸೋಸ್ಯಾಟ್- 2A ನ ಒಟ್ಟು 1.2 ಟನ್ ತೂಕ ಹೊಂದಿದ್ದು ಶ್ರೀ ಹರಿಕೋಟಾದ ಸತೀಶ್ ಧವನ್ ಭಾಹ್ಯಕಾಶ ಕೇಂದ್ರದಿಂದ ಈ ಉಪಗ್ರಹವನ್ನು ಬೆಳಗ್ಗೆ 10.30ಕ್ಕೆ ಹಾರಿಸಲಾಗಿದೆ ಎಂದು ಇಸ್ರೋ ತಿಳಿಸಿದೆ.[ಚಿತ್ರಗಳು : ಇಸ್ರೋ ಸಾಧನೆ, 20 ಉಪಗ್ರಹ ಉಡಾವಣೆ]

Isro successfully places Resourcesat-2A in orbit

ಒಟ್ಟು ಹದಿನೆಂಟು ನಿಮಿಷಗಳಲ್ಲಿ ಶ್ರೀ ಹರಿಕೋಟಾದಿಂದ ಉಡಾವಣೆಯಾದ ಉಪಗ್ರಹವು ಸೌರ ವ್ಯೂಹದ 818 ಕಿಲೋ ಮೀಟರ್ ಕ್ರಮಿಸಿ ತನ್ನ ಕಕ್ಷೆಯನ್ನು ಸೇರಿದೆ.

18 ವರ್ಷಗಳಲ್ಲಿ (1994-2016) ಪಿಎಸ್ಎಲ್ ವಿ ಉಡಾವಣೆಗಳು ಯಶಸ್ವಿಯಾಗಿದ್ದು, ವಿದೇಶದಲ್ಲಿ 79 ಸೇರಿದಂತೆ ಒಟ್ಟು 121 ಉಪಗ್ರಹಗಳು ಯಶಸ್ವಿ ಉಡಾವಣೆಯನ್ನು ಕಂಡಿವೆ.

ರಿಸೋಸ್ಯಾಟ್ 1,2 ಅನ್ನು ಕ್ರಮವಾಗಿ 2003 ಮತ್ತು 2012ರಲ್ಲಿ ಉಡಾವಣೆಮಾಡಲಾಗಿತ್ತು.

English summary
Indian Space Research Organisation, which is basking in the glory of consecutive successful launches, on wednesday successfully placed remote sensing satellite Resourcesat-2A in the orbit.
Please Wait while comments are loading...