ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್ ಎಲ್ ವಿ-ಸಿ 38 ಉಡಾವಣೆ: ಇಸ್ರೋಕ್ಕೆ ಅಭಿನಂದನೆಯ ಮಹಾಪೂರ

|
Google Oneindia Kannada News

ಶ್ರೀಹರಿಕೋಟ (ಆಂಧ್ರಪ್ರದೇಶ), ಜೂನ್ 23: ಆಂಧ್ರಪ್ರದೇಶ ಶ್ರೀಹರಿಕೋಟದ, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಂದು (ಜೂನ್ 23) ಬೆಳಗ್ಗೆ ಪಿಎಸ್ ಎಲ್ ವಿ -ಸಿ38(ಪೊಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಮೂಲಕ 31 ಉಪಗ್ರಹಗಳನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯಶಸ್ವಿಯಾಗಿ ಉಡ್ಡಯನ ಮಾಡಿತು.

ಪಿಎಸ್ ಎಲ್ ವಿ-ಸಿ38 ಉಡಾವಣೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಇಸ್ರೋಪಿಎಸ್ ಎಲ್ ವಿ-ಸಿ38 ಉಡಾವಣೆ: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಇಸ್ರೋ

ಈ 31 ಉಪಗ್ರಹಗಳಲ್ಲಿ ಕ್ಯಾರ್ಟೋಸ್ಯಾಟ್ -2 ಸರಣಿಯ ಭೂ ವೀಕ್ಷಣಾ ಉಪಗ್ರಹವೂ ಸೇರಿದ್ದು, ಈ ಉಪಗ್ರಹಗಳ ಒಟ್ಟೂ ತೂಕ 955 ಕೆ.ಜಿ. ಆಗಿದೆ. ಇಂದು ಬೆಳಗ್ಗೆ ಬೆಳಗ್ಗೆ 9.29 ಕ್ಕೆ ಉಡಾವಣೆಗೊಂಡ ಉಪಗ್ರಹಗಳು ಕೇವಲ ಹದಿನಾರು ನಿಮಿಷಗಳಲ್ಲಿ ಕಕ್ಷೆಗೆ ಸೇರಿವೆ.

ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಇಸ್ರೋ ತಯಾರಿಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಇಸ್ರೋ ತಯಾರಿ

30 ಉಪಗ್ರಹಗಳ ಒಟ್ಟು ತೂಕ 243 ಕೆ.ಜಿ. ಆಗಿದ್ದರೆ, ಕ್ಯಾರ್ಟೋಸ್ಯಾಟ್ ಬರೋಬ್ಬರಿ 712 ಕೆ.ಜಿ.ತೂಗುತ್ತದೆ. ಇಸ್ರೋದ ಈ ಸಾಧನೆಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಅಭಿನಂದನೆ ಸಲ್ಲಿಸಿದ್ದಾರೆ.

ಇಸ್ರೋ, ನಾವು ಹೆಮ್ಮೆ ಪಡುವಂತೆ ಮಾಡಿದೆ

15 ದೇಶಗಳ 31 ಉಪಗ್ರಹಗಳನ್ನು ಹೊತ್ತಿದ್ದ, ಪಿಎಸ್ ಎಲ್ ವಿ -ಸಿ38 ನ ಯಶಸ್ವಿ ಉಡಾವಣೆಗೆ ಇಸ್ರೋಗೆ ನಮ್ಮ ಅಭಿನಂದನೆಗಳು. ಇಸ್ರೋ ನಮ್ಮನ್ನು ಹೆಮ್ಮೆಪಡುವಂತೆ ಮಾಡಿದೆ ಈಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡುವ ಮೂಲಕ, ಇಸ್ರೋ ಸಾಧನೆಯನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಇಸ್ರೋ ರತ್ನಕ್ಕೆ ಅಭಿನಂದನೆ

ಕ್ಯಾರ್ಟೋಸ್ಯಾಟ್- 2 ಸರಣಿಯನ್ನು ಮತ್ತು 30 ಇತರ ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋ ರತ್ನಕ್ಕೆ ಅಭಿನಂದನೆಗಳು ಎಂದು ಬಿಜೆಪಿ ಸಂಸದ ವಿಜಯ ಗೋಯೆಲ್ ಟ್ವೀಟ್ ಮಾಡಿದ್ದಾರೆ.

ಕನಿಷ್ಠ ಸಂಪನ್ಮೂಲ ಗರಿಷ್ಠ ಸಾಧನೆ

ಕನಿಷ್ಠ ಸಂಪನ್ಮೂಲಗಳನ್ನು ಬಳಸಿಕೊಂಡು ಗರಿಷ್ಠ ಸಾಧನೆ ಮಾಡಿ, 100 % ಯಶಸ್ಸು ಗಳಿಸಿದ ಇಸ್ರೋಕ್ಕೆ ಅಭಿನಂದನೆಗಳು ಎಂದು ಮಹಾರಾಷ್ಟ್ರ ಶಾಸಕಾಂಗದ ಉಪಾಧ್ಯಕ್ಷ ಮಾಣಿಕ್ ರಾವ್ ಠಾಕ್ರೆ ಟ್ವೀಟ್ ಮಾಡಿದ್ದಾರೆ.

ಮಾನವ ಸೇವೆಗಾಗಿ ವಿಜ್ಞಾನ

ಕ್ಯಾರ್ಟೋಸ್ಯಾಟ್ 2 ಸರಣಿಯ ಉಪಗ್ರಹವನ್ನು ಉಡಾವಣೆ ಮಾಡಿದ ಇಸ್ರೋಕ್ಕೆ ಅಭಿನಂದನೆಗಳು. ವಿಜ್ಞಾನವನ್ನು ಮಾನವ ಸೇವೆಗಾಗಿ ಬಳಸಿಕೊಳ್ಳುವ ಇಸ್ರೋದ ನಡೆ, ನಾವೆಲ್ಲ ಹೆಮ್ಮೆ ಪಡುವಂತೆ ಮಾಡಿದೆ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಶಿವರಾಜ್ ಸಿಂಗ್ ಚೌಹಾಣ್

ಪಿಎಸ್ ಎಲ್ ವಿ- ಸಿ38 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ ಇಸ್ರೋಕ್ಕೆ ಅಭಿನಂದನೆಗಳು. ಇಸ್ರೋದ ಈ ಸಾಧನೆ, ನಮ್ಮ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ವಿಜ್ಞಾನಿಗಳ ಬಲವೇನು ಎಂಬುದನ್ನು ಜಾಗತಿಕ ಮಟ್ಟದಲ್ಲಿ ಸಾಬೀತುಪಡಿಸಿದೆ.

English summary
Indian Space research centre (ISRO) has launched PSLV-C38 successfully. Cartosat-2 and 30 foreign satellites from Sriharikota has launched by ISRO from satish dhawan space centre, Sriharikota in Andhra Pradesh on 23rd June. Prime minister Narendra Modi and other leaders have congratulated ISRO for this success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X