ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ನೀಲಿಗಣ್ಣಿನ ಹುಡುಗ ಪಾಕಿಸ್ತಾನದ 'ನ್ಯೂ ಕ್ಲಿಯರ್ ವೆಪನ್'!

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ನವದೆಹಲಿ, ಅಕ್ಟೋಬರ್ 18: ಇಸ್ಲಾಮಾಬಾದ್ ನ ಟೀ ಮಾರುವ ಹುಡುಗನೊಬ್ಬ ಭಾರೀ ಸುದ್ದಿ ಮಾಡುತ್ತಿದ್ದಾನೆ. ಸಾಮಾಜಿಕ ಜಾಲತಾಣಗಳಲ್ಲಂತೂ ಅವನನ್ನು ಪಾಕ್ ನ 'ನ್ಯೂಕ್ಲಿಯರ್ ವೆಪನ್'' ಎನ್ನುತ್ತಿದ್ದು, ಭಾರತೀಯ ಹೆಣ್ಣುಮಕ್ಕಳ ಹೃದಯಗಳ ಮೇಲೆ 'ಸರ್ಜಿಕಲ್ ಸ್ಟ್ರೈಕ್' ನಡೆಸುತ್ತಿದ್ದಾನೆ ಎಂದು ತಮಾಷೆ ಮಾಡಲಾಗುತ್ತಿದೆ.

ಈ ಫೋಟೋವನ್ನು ತೆಗೆದವರು ಜವೇರಿಯಾ ಅಥವಾ ಜಿಯಾ, ಅಲಿ ಅದನ್ನು ಇನ್ ಸ್ಟಾಗ್ರಾಂನಲ್ಲಿ ಹಾಕಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ಫೋಟೋಗೆ ವೈರಲ್ ಆಗಿದೆ. ಅಲಿ ಪ್ರಕಾರ ಆತ ಸಿಕ್ಕಿದ್ದು ಇಸ್ಲಾಮಾಬಾದ್ ನ ಇತ್ವಾರ್ ಬಜಾರ್ ನಲ್ಲಿ ಫೋಟೋಗಾಗಿ ಅಡ್ಡಾಡುತ್ತಿದ್ದಾಗ.[ಹೊಸ ದಾರಿ ಹುಡುಕಲು ಬಿಟ್ಟ ಉಗ್ರರಿಗೀಗ ಹಳೆ ಮಾರ್ಗವೇ ಸರಿ!]

Islamabad tea seller

'ಈ ಫೋಟೋ ತೆಗೆದದ್ದು ತಿಂಗಳುಗಳ ಹಿಂದೆ. ಆದರೆ ಇನ್ ಸ್ಟಾ ಗ್ರಾಂನಲ್ಲಿ ಹಾಕಿದ್ದು ಈಚೆಗೆ. ಅದನ್ನು ಯಾರೋ ಸೋಷಿಯಲ್ ಮೀಡಿಯಾಗೆ ಹಾಕಿದ ನಂತರ ವೈರಲ್ ಆಗಿದೆ' ಎನ್ನುತ್ತಾರೆ ಜಿಯಾ. ಈ ಫೋಟೋ ಪಾಕಿಸ್ತಾನದಲ್ಲಿ ಹ್ಯಾಷ್ ಟ್ಯಾಗ್ #Chaiwala ಎಂದು ಟ್ವಿಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ.

ಈ ಫೋಟೋ ಇಷ್ಟು ಬೇಡಿಕೆ ಪಡೆಯುತ್ತದೆ ಎಂದು ನೀವು ಅಂದುಕೊಂಡಿದ್ದಿರಾ ಎಂದು ಜವೇರಿಯಾ ಅವರನ್ನು ಕೇಳಿದರೆ, ನಾನು ಖಂಡಿತಾ ಅಂದುಕೊಂಡಿರಲಿಲ್ಲ. ಬೇಕಾದಷ್ಟು ಫೋಟೋ ಷೇರ್ ಮಾಡ್ತಿರ್ತೀನಿ. ಆದರೆ ಈ ಹುಡುಗನ ಫೋಟೋ ಮಹಿಳೆಯರಿಗೆ ಬಹಳ ಇಷ್ಟ ಆಗಿದೆ ಅಂದುಕೊಳ್ತೀನಿ ಎಂದಿದ್ದಾರೆ.[ಪಾಕ್ ಮಹಾನ್ ತ್ಯಾಗಮಯಿ ಅಂತಿದೆ ಚೀನಾ, ಒಪ್ತೀರಾ?]

ಒಬ್ಬರಂತೂ ಪಾಕಿಸ್ತಾನದ ಟೀವಾಲಾ ಭಾರತದ ಕರಣ್ ಜೋಹರ್ ಗಿಂತ ವಾಸಿ ಎಂದು ಟ್ವೀಟ್ ಮಾಡಿದ್ದಾರೆ. ಈ ಚಾಯ್ ವಾಲಾಗೋಸ್ಕರವಾದರೂ ಶಾಂತಿ ನೆಲೆಸಬೇಕು ಎಂದು ಭಾರತೀಯರೊಬ್ಬರು ಟ್ವೀಟ್ ಮಾಡಿದ್ದಾರೆ. ಇನ್ನೊಬ್ಬರಂತೂ ಈತ ಭಾರತೀಯನೂ ಅಲ್ಲ, ಪಾಕಿಸ್ತಾನಿಯೂ ಅಲ್ಲ ಎಂದು ಪೋಸ್ಟ್ ಮಾಡಿದ್ದಾರೆ.

ಪಾಕಿಸ್ತಾನ ಉಗ್ರಗಾಮಿಗಳ ವಿರುದ್ಧ ಕ್ರಮ ತೆಗೆದುಕೊಳ್ಳೋಕೆ ಆಗ್ತಿಲ್ಲ. ಇಂಥ ಸಮಯದಲ್ಲಿ ಆ ದೇಶದ ರಾಯಭಾರಿಯಾಗಿ ಈ ಚಾಯ್ ವಾಲಾನ ಮಾಡಿ. ಅಂತರರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗುವುದನ್ನು ತಪ್ಪಿಸಿಕೊಳ್ಳಲಿ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದಾರೆ.[ಪಾಕ್ ಉಗ್ರರ ಬೆದರಿಕೆ - ಅರ್ನಬ್ ಗೋಸ್ವಾಮಿಗೆ ಬಿಗಿ ಭದ್ರತೆ]

ಆತನಿಗಾಗಿ ನಾನಿನ್ನೂ ಹುಡುಕುತ್ತಲೇ ಇದ್ದೀನಿ. ಕೆಲವು ತಿಂಗಳ ಹಿಂದೆ ಅವನನ್ನು ನೋಡಿದ್ದು ಭಾನುವಾರದ ಮಾರುಕಟ್ಟೆಯಲ್ಲಿ. ಅವನನ್ನು ಮತ್ತೊಮ್ಮೆ ನೋಡಲು ಭಾನುವಾರದ ಮಾರುಕಟ್ಟೆಗೋಸ್ಕರ ಕಾಯ್ತೀನಿ' ಎಂದಿದ್ದಾರೆ ಜವೇರಿಯಾ.

English summary
An Islamabad tea seller, become Pakistan's blue-eyed boy, with people on social media calling him Pakistan's 'nuclear weapon' who could be unleashed for'surgical strikes on Indian girls.'
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X