ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇಶಾದ್ಯಂತ ದಾಳಿ ಮಾಡಲು ಐಎಸ್ಐಎಸ್ ಸಂಚು ರೂಪಿಸಿತ್ತೆ?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜು.29: ಐಎಸ್ ಐಎಸ್ ಉಗ್ರ ಸಂಘಟನೆ ಭಾರತದಾದ್ಯಂತ ದಾಳಿ ಮಾಡಲು ಸಂಚು ರೂಪಿಸಿದೆ ಎಂಬ ವದಂತಿಯನ್ನು ಗುಪ್ತಚರ ದಳ ತಳ್ಳಿಹಾಕಿದ್ದು ಅಂಥ ಯಾವುದೇ ಅಪಾಯ ಇಲ್ಲ ಎಂದು ಹೇಳಿದೆ. ಕೆಲ ಯುವಕರನ್ನು ಸೆಳೆಯಲು ಉಗ್ರರು ಪ್ರಯತ್ನ ಪಡುತ್ತಿರುವುದು ನಿಜ ಎಂದು ತಿಳಿಸಿದೆ.

ಭಾರತದಲ್ಲಿ ಉಗ್ರರು ದಾಳಿ ಮಾಡಲು ಸಂಚು ರೂಪಿಸಿದ್ದಾರೆ ಎಂದು ಅಮೆರಿಕ ಹೇಳಿತ್ತು. ಇದನ್ನು ಗುಪ್ತಚರ ಇಲಾಖೆ ತಳ್ಳಿಹಾಕಿದ್ದು ಶಾಂತಿ ಭಂಗದಂತ ಕೆಲಸಕ್ಕೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ.[ಯಾಕೂಬ್ ಕೇಸಿನಲ್ಲಿ ನ್ಯಾ. ಕುರಿಯನ್ ಅಪಸ್ವರ ಹಾಡಿದ್ದೇಕೆ?]

terrorism

ಶಿಯಾ ಮತ್ತು ಸುನ್ನಿ ಪಂಗಡಗಳ ನಡುವೆ ಭಿನ್ನಾಭಿಪ್ರಾಯ ಹುಟ್ಟುಹಾಕುವಂತೆ ಮಾಡಿ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಉಗ್ರ ಸಂಘಟನೆ ಮುಂದಾಗಿತ್ತು ಎಂದು ಅಮೆರಿಕ ಹೇಳಿತ್ತು.

ಐಎಸ್ ಐಎಸ್ ನಕಾಶೆಯಲ್ಲೇನಿತ್ತು?
2014 ರ ಆರಂಭದಲ್ಲಿ ತಮ್ಮದೇ ನಕಾಶೆಯೊಂದನ್ನು ಬಿಡುಗಡೆ ಮಾಡಿದ್ದ ಉಗ್ರರು ಮಹಾರಾಷ್ಟ್ರ, ಜಮ್ಮು ಕಾಶ್ಮೀರ ಮತ್ತು ಗುಜರಾತನ್ನು ಸೇರಿಸಿಕೊಂಡಿದ್ದರು. ಅದನ್ನು ಜಾಗತಿಕ ಇಸ್ಲಾಂ ಕೌನ್ಸಿಲ್ ಎಂದು ಕರೆದುಕೊಂಡಿದ್ದರು.

ಗುಪ್ತಚರ ದಳದ ಅಧಿಕಾರಿಗಳು ತಿಳಿಸಿರುವಂತೆ ಐಎಸ್ ಐಎಸ್ ಸಂಘಟನೆ ಸಿರಿಯಾ ಮತ್ತು ಇರಾಕ್ ನಲ್ಲಿ ಕಾರ್ಯನಿರತವಾಗಿದೆ. ಅಪಘಾನಿಸ್ತಾನದಲ್ಲೂ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದು ಭಾರತದ ಸಂಗತಿಯನ್ನು ಸದ್ಯ ಬದಿಗಿಟ್ಟಿದೆ ಎಂದು ತಿಳಿಸಿದ್ದಾರೆ.

English summary
Intelligence Bureau (IB) officials have termed the report of the ISIS trying to strike India as wrong. There is no foot print of the ISIS in India, they say while adding that the problems of recruitment of a few youth has been taken care of. The USA today published a story claiming that the ISIS has been attempting to carry out an attack in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X