ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹನಿ ಟ್ರ್ಯಾಪ್ ಮೂಲಕ ಲೇಡಿ ಉಗ್ರರ ಎಂಟ್ರಿ?

By ಒನ್ ಇಂಡಿಯಾ ಸಿಬ್ಬಂದಿ
|
Google Oneindia Kannada News

ಭಾರತದೊಳಗೆ ಉಗ್ರರನ್ನು ನುಸುಳಲು ಬಿಲ ತೊಡಲು ತಯಾರಿ ನಡೆಸಿರುವ ಇರಾಕಿನ ಇಸ್ಲಾಂ ರಾಜ್ಯಗಳ ಒಕ್ಕೂಟದ ಸಂಘಟನೆ ಈಗ ಹೊಸ ರಣ ತಂತ್ರ ರೂಪಿಸಿರುವ ಸುದ್ದಿ ಬಂದಿದೆ. ಮಹಿಳಾ ಉಗ್ರರಿಗೆ ತರಬೇತಿ ನೀಡುವುದಲ್ಲದೆ, ಹನಿಟ್ರ್ಯಾಪ್ ಮೂಲಕ ಭಾರತೀಯ ಸೇನೆಯ ರಹಸ್ಯ ಮಾಹಿತಿ ಪಡೆಯಲು ಐಸಿಸ್ ಹವಣಿಸುತ್ತಿದೆ.

ಇತ್ತೀಚೆಗೆ ಹೈದರಾಬಾದ್ ಮೂಲದ ಕೆಲವು ಯುವತಿಯರನ್ನು ಪಶ್ಚಿಮ ಬಂಗಾಳದಲ್ಲಿ ಕೌನ್ಸಿಲಿಂಗ್ ಗೆ ಒಳಗಾಗಿದ್ದರು. ISIS ಸೇರಲು ಈ ಯುವತಿಯರು ಬಯಸಿದಾದ್ದರೂ ಏಕೆ? ಮಹಿಳೆಯರು ತನ್ನ ತಂಡದಲ್ಲಿ ಏಕೆ ಇರಿಸಿಕೊಳ್ಳಲು ಐಸಿಸ್ ಬಯಸಿದೆ? ಹನಿಟ್ರ್ಯಾಪ್ ನಿಜಕ್ಕೂ ಸಾಧ್ಯವೇ? ಎಂಬೆಲ್ಲಾ ಪ್ರಶ್ನೆಗಳಿಗೆ ಉತ್ತರ ಒನ್ ಇಂಡಿಯಾಕ್ಕೆ ಮಾತ್ರ ಲಭ್ಯವಿದೆ. [ಸಂಘಟನೆ ಸೇರಿದ್ದ ಮುಂಬೈ ಯುವಕ ಸಾವು]

ಐಸಿಸ್ ತರಬೇತಿ ಕೇಂದ್ರ ಬಾಗಿಲು ತಟ್ಟಿದ ಯುವತಿಯರು ಹೇಳಿದ್ದೇನು?
ನಾವು ನಮಗಾಗಿ ಯುದ್ಧ(ಜಿಹಾದ್) ಮಾಡುತ್ತಿರುವ ನಮ್ಮ ಸೋದರರ ಬೆಂಬಲಕ್ಕೆ ನಿಲ್ಲಬೇಕಿದೆ ಎಂದೆನಿಸಿ ಅವರ ಬಳಿಗೆ ತೆರಳಿದ್ದೆವು. ಇದು ದೀರ್ಘಕಾಲಿಕ ಯುದ್ಧ ಹಾಗಾಗಿ ನಮ್ಮ ನೆರವು ಅವರಿಗೆ ಅಗತ್ಯವಿದೆ.

ನಾವು ವೈವಿಧ್ಯಮಯ ಪಾತ್ರಗಳನ್ನು ಇಲ್ಲಿ ನಿರ್ವಹಿಸಬೇಕಾಗುತ್ತದೆ ಎಂಬುದನ್ನು ವಿವರಿಸಿದರು. ಮುಖ್ಯವಾಗಿ ಯುದ್ಧದಲ್ಲಿ ತೊಡಗುವ ಸೋದರರಿಗೆ ಅಡುಗೆ ಮುಂತಾದ ಕಾರ್ಯದಲ್ಲಿ ನೆರವಾಗಬೇಕು. ಇಷ್ಟವಾದರೆ ನಾವು ಹನಿ ಟ್ರ್ಯಾಪ್ ನಲ್ಲಿ ತೊಡಗಿಕೊಳ್ಳಬಹುದಾಗಿದೆ. [ಬಾಂಬ್ ಹಾಕಿ ನಕ್ಕ ಮಹಿಳೆ, ನಗುವಿನಲ್ಲೂ ಸಾರ್ಥಕತೆ!]

ಒನ್ ಇಂಡಿಯಾ ಜೊತೆ ಮಾತನಾಡಿದ ಮಹಿಳೆ, "ನಾವು ಇರಾಕಿಗೆ ತೆರಳಿದ ಮೇಲೆ ನಮಗೆ ಹೆಚ್ಚಿನ ತರಬೇತಿ ನೀಡಲಾಗುತ್ತದೆ. ರಹಸ್ಯ ಮಾಹಿತಿ ಕಲೆ ಹಾಕುವುದು ಹೇಗೆ. ಹನಿ ಟ್ರ್ಯಾಪ್ ಮೂಲಕ ಶತ್ರು ರಾಷ್ಟ್ರಗಳ ಸೈನಿಕರು, ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವುದು ಹೇಗೆ? ಎಂಬುದನ್ನು ವಿವರಿಸಲಾಗುತ್ತದೆ. ಆದರೆ, ನೇರವಾಗಿ ಯುದ್ಧ ಭೂಮಿಗೆ ಇಳಿಯಲು ನಮಗೆ ತರಬೇತಿ ನೀಡುವುದಿಲ್ಲ. ಆತ್ಮರಕ್ಷಣೆಗೆ ಬೇಕಾದ ತರಬೇತಿ ಸಿಕ್ಕಿರುತ್ತದೆ. ನಾವು ಶಸ್ತ್ರಾಸ್ತ್ರಗಳನ್ನು ಬಳಸುವಂತಿಲ್ಲ. ಅಗತ್ಯಬಿದ್ದರೆ ದೇಹವನ್ನು ಅರ್ಪಿಸಿ ಮಾಹಿತಿ ಕಲೆ ಹಾಕುವುದು ನಮ್ಮ ಕೆಲಸ"

Now ISIS recruits women from India, trains them how to lay honey trap

ನಮ್ಮ ಗೆಳೆಯರ ರಕ್ಷಣೆ, ನಮ್ಮ ಹೊಣೆ
ಐಸಿಸ್ ಗೆ ಸೇರಿದ ಮೇಲೆ ನಮ್ಮ ಸೋದರರ ರಕ್ಷಣೆ ಹೊಣೆಯೂ ನಮ್ಮ ಮೇಲಿರುತ್ತದೆ. ವಿದೇಶಿ ನೆಲದಲ್ಲಿ ಅವರನ್ನು ಕಾಯಲು ನಾವು ಇದ್ದೇವೆ ಎಂಬ ಭಾವ ಅವರಲ್ಲಿ ಉಂಟಾದರೆ ಸಾಕು. ಇಲ್ಲಿ ಯಾರು ಯಾರಿಗೂ ನೇರ ಸಂಬಂಧಿಗಳಲ್ಲ ಆದರೆ, ಸಿದ್ಧಾಂತಕ್ಕಾಗಿ ಹೆಚ್ಚಾಗಿ ಕರ್ತವ್ಯ ಎಂಬಂತೆ ಅವರ ರಕ್ಷಣೆ ಹೊಣೆಯನ್ನು ಹೊತ್ತುಕೊಳ್ಳಲಾಗುತ್ತದೆ. [ಉಗ್ರರ ಸದೆಬಡೆಯಲು ಒಬಾಮಾ ರಣತಂತ್ರ]

ಇತ್ತೀಚಿನ ಐಸಿಸ್ ನೇಮಕಾತಿ ಪ್ರಕ್ರಿಯೆ ಗಮನಿಸಿದರೆ ಇನ್ನೂ ಹೆಚ್ಚೆಚ್ಚು ಮಹಿಳೆಯರನ್ನು ಉಗ್ರ ಸಂಘಟನೆಯ ಸದಸ್ಯೆಯರನ್ನಾಗಿಸುವುದು ಅವರ ಉದ್ದೇಶ ಎಂಬುದು ತಿಳಿದು ಬರುತ್ತದೆ. ಇದರಿಂದ ಭಾರತಕ್ಕೂ ಸ್ಪಷ್ಟ ಸಂದೇಶ ಸಿಕ್ಕಿದ್ದಂತಾಗಿದೆ.

ರಾಷ್ಟ್ರೀಯ ಗುಪ್ತಚರ ಇಲಾಖೆ ಇನ್ನಿತರ ಜಾಗತಿಕ ಏಜೆನ್ಸಿಗಳ ಮೂಲಕ ಸಿಕ್ಕಿರುವ ಮಾಹಿತಿ ಪ್ರಕಾರ ಐಸಿಸ್ ಸಂಪೂರ್ಣವಾಗಿ ಪೂರ್ವ ತಯಾರಿ ನಡೆಸಿ ಯುದ್ಧಕ್ಕಿಳಿಯಲು ಸಜ್ಜಾಗುತ್ತಿದೆ.

ಮಹಿಳೆಯರ ಬಳಕೆ ಐಸಿಎಸ್ ನೈಜ ಉದ್ದೇಶವೇನು?
'ಅಡುಗೆ ಬೇಯಿಸಿ ಹಾಕಲು ಒಬ್ಬರು ಬೇಕು' ಹೀಗಾಗಿ ಐಸಿಸ್ ಗೆ ಮಹಿಳೆಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದೆ.ಇನ್ನು ಕೆಲವರು ನರ್ಸ್ ಗಳಾಗಿ ಸೇವೆ ಸಲ್ಲಿಸಬೇಕಾಗುತ್ತದೆ. ಒಟ್ಟಾರೆ ಯುದ್ಧಭೂಮಿಯಲ್ಲಿ ಹೋರಾಡುವ ಪುರುಷರಿಗೆ ಸಹಾಯಕ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. [ಹನಿ ಟ್ರ್ಯಾಪಿಂಗ್ ಮಾಡಿದ್ದ ನಟಿ ನಯನಾ]

ಆಸಕ್ತ ಮಹಿಳೆಯರನ್ನು ಹನಿಟ್ರ್ಯಾಪ್ ಆಗಿ ಬಳಕೆ ಮಾಡಲಾಗುತ್ತದೆ. ಅಂದರೆ, ಮಹಿಳೆಯರನ್ನು ಮುಂದಿಟ್ಟುಕೊಂಡು ಸೈನಿಕರು, ಅಧಿಕಾರಿಗಳನ್ನು ಬಲೆಗೆ ಬೀಳಿಸಿಕೊಳ್ಳುವುದು ಅವರೊಂದಿಗೆ ಲೈಂಗಿಕ ಸಂಪರ್ಕ ಸಾಧಿಸುವುದು ಹಾಗೂ ಅದರ ದಾಖಲೆ ಹೊಂದುವುದು. ಅವರಿಂದ ಆದಷ್ಟು ರಹಸ್ಯ ಮಾಹಿತಿಗಳನ್ನು ಕಲೆ ಹಾಕುವುದು ಬಾಯ್ಬಿಡದ ಅಧಿಕಾರಿಗಳನ್ನು ವಿಡಿಯೋ ದಾಖಲೆ ತೋರಿಸಿ ಬೆದರಿಸುವುದು, ಮಾನಿನಿಯರ ಜಾಲದಲ್ಲಿ ಸಿಲುಕುವಂತೆ ಮಾಡುವುದೇ ಹನಿ ಟ್ರ್ಯಾಪ್.

ಮಹಿಳೆಯರನ್ನು ಸೈನ್ಯದಲ್ಲಿ ಬಳಸುವುದಿಲ್ಲ ಎಂದು ಹೇಳಿಕೊಂಡು ಬಂದಿದ್ದ ಐಸಿಸ್ ಈ ರೀತಿ ನೇಮಕಾತಿ, ಹನಿಟ್ರ್ಯಾಪ್ ತಂತ್ರಕ್ಕೆ ಇಳಿದಿರುವುದು ಆತಂಕಕಾರಿಯಾಗಿದೆ. ಉಗ್ರರ ಸ್ಲೀಪಿಂಗ್ ಸೆಲ್ ಗಳನ್ನು ಬೆನ್ನಟ್ಟಿದ್ದ ಭಾರತದ ಸರ್ಕಾರಿ ಏಜೆನ್ಸಿಗಳು ಈಗ ಮಹಿಳೆಯರನ್ನು ತಡೆಯುವುದು ಹೇಗೆ? ಯಾರು ಐಸಿಸ್ ಪರ ಇದ್ದಾರೆ? ಎಂಬುದರ ಮಾಹಿತಿ ಪಡೆಯಲು ಕಷ್ಟಪಡುವಂತಾಗಿದೆ. ಪರಿಪೂರ್ಣ ಮಿಲಿಟರಿ ಪಡೆ ಹೊಂದಲು ತಯಾರಾಗಿರುವ ಐಸಿಸ್ ಹಾಗೂ ಅಲ್ ಖೈದಾ ಉಗ್ರ ಸಂಘಟನೆಗಳತ್ತ ಸುಳಿಯಬೇಡಿ ಎಂದು ಮಹಿಳೆಯರ ಕಿವಿಗೆ ಪಿಸುಮಾತು ಊದುವವರು ಯಾರು?

English summary
The ISIS is serious about building a formidable force. It's recent release of guidelines for its women operatives is a sign that it seeks not to build a terrorist outfit but a full fledged army.Women are also being roped in to lay honey traps and collect military intelligence from enemies.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X