ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಐಎಸ್ಐಎಸ್ ನಿಷೇಧ ಅಗತ್ಯವಿಲ್ಲವೇ?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ,ಡಿ.19: ಇರಾಕಿ ಉಗ್ರ ಸಂಘಟನೆ ಐಎಸ್ಐಎಸ್ ಪರ ಟ್ವಿಟ್ಟರ್ ಮೂಲಕ ಕಾರ್ಯ ನಿರ್ವಹಿಸುತ್ತಿದ್ದ ಆರೋಪದ ಇಂಜಿನಿಯರ್ ಮೆಹ್ಡಿ ಬಂಧನವಾದ ಮೇಲೆ ಉಗ್ರ ಸಂಘಟನೆ ನಿಷೇಧಕ್ಕೆ ಆಗ್ರಹಿಸಲಾಗಿತ್ತು.ಕೊನೆಗೆ ಐಎಸ್ಐಎಸ್ ಸಂಘಟನೆಗೆ ನಿಷೇಧ ಹೇರುವ ಮೂಲಕ ಭಾರತ ದಿಟ್ಟ ಹೆಜ್ಜೆ ಇಟ್ಟಿದೆ.

ಇರಾಕ್ ಹಾಗೂ ಸಿರಿಯಾದಲ್ಲಿ ಕಾರ್ಯಾ ಚರಿಸುತ್ತಿರುವ ಉಗ್ರ ಸಂಘಟನೆಯ ಕೃತ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ನಿಷೇಧ ಹೇರಲಾಗಿದೆ ಎಂದು ಗೃಹ ಸಚಿವ ರಾಜ್‌ನಾಥ್ ಸಿಂಗ್ ಹೇಳಿದ್ದಾರೆ.

ವಿಶ್ವಸಂಸ್ಥೆ ನಿಯಮದ ಪ್ರಕಾರ ಒಂದು ಸಂಘಟನೆ ಮೇಲೆ ನಿಷೇಧ ಹೇರಿದರೆ ಅದರ ಎಲ್ಲಾ ಸದಸ್ಯರು ಉಪ ಸಂಘಟನೆಗಳು ನಿಯಮಕ್ಕೆ ಬದ್ಧವಾಗಿರಬೇಕಾಗುತ್ತದೆ.

ನಿಷೇಧದ ಬಗ್ಗೆ ರಾಜನಾಥ್ ಸಿಂಗ್ ಹೇಳಿದ್ದೇನು?
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ISIS ಅಥವಾ ISIL(Islamic State of Iraq & the Levant) ಈಗಾಗಲೇ ನಿಷೇಧಕ್ಕೆ ಒಳಪಟ್ಟಿವೆ. ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯ್ದೆಯಡಿಯಲ್ಲಿ ನಿಷೇಧಕ್ಕೆ ಒಳಪಟ್ಟಿರುವ ಸಂಘಟನೆಗಳ ಪಟ್ಟಿಯಲ್ಲಿ ನಂ.33ನೇ ಸ್ಥಾನದಲ್ಲಿವೆ ಎಂದಿದ್ದಾರೆ.

ಹೀಗಾಗಿ, ಸಿಮಿ ಸಂಘಟನೆ, ಇಂಡಿಯನ್ ಮುಜಾಹೀದ್ದೀನ್ ಹಾಗೂ ಇನ್ನಿತರ 33 ಸಂಘಟನೆಗಳನ್ನು ನಿಷೇಧಕ್ಕೆ ಒಳಪಡಿಸಿದಂತೆ ಮತ್ತೊಮ್ಮೆ ಪ್ರತ್ಯೇಕವಾಗಿ ಇಸೀಸ್ ನಿಷೇಧ ಹೇರುವ ಅಗತ್ಯವಿಲ್ಲ. ನಿಷೇಧಿತ ಸಂಘಟನೆಗಳ ಪಟ್ಟಿ ಗೃಹ ಸಚಿವಾಲಯದ ವೆಬ್ ತಾಣದಲ್ಲಿ ಸಿಗಲಿದೆ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆ ಹೊರಡಿಸಿರುವ ಅಧಿನಿಯಮದಂತೆ ಸಂಸ್ಥೆ ಗುರುತಿಸಿದ ಭಯೋತ್ಪಾದನೆ ಸಂಘಟನೆಯನ್ನು ನಾವು ಕೂಡಾ ನಿಷೇಧಿಸಬೇಕಾಗುತ್ತದೆ.

 ISIS ban in India- Setting the record straight

ಪ್ರತ್ಯೇಕವಾಗಿ ನಿಷೇಧದ ಅಗತ್ಯವಿಲ್ಲ?
ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ ನ ಮಾಜಿ ಮುಖ್ಯಸ್ಥ ಸಿ.ಡಿ ಸಹಾಯ್ ಅವರ ಪ್ರಕಾರ ವಿಶ್ವಸಂಸ್ಥೆ ಹೇರಿರುವ ನಿಯಮಗಳು ಸೂಕ್ತವಾಗಿವೆ. ಭಾರತದಲ್ಲಿ ಮತ್ತೊಮ್ಮೆ ಪ್ರತ್ಯೇಕವಾಗಿ ನಿಷೇಧಿಸುವ ಅಗತ್ಯವಿಲ್ಲ, ಜಾಗತಿಕವಾಗಿ ಈ ನಿಯಮ ಜಾರಿಗೊಳ್ಳಲಿದೆ ಎಂದಿದ್ದಾರೆ.

ಕಾನೂನು ಏನು ಹೇಳುತ್ತದೆ?:
ವಿಶ್ವಸಂಸ್ಥೆ ಅಧಿನಿಯಮಗಳು ಭಾರತಕ್ಕೂ ಅನ್ವಯವಾಗುವುದರಿಂದ ಹೊಸ ಕಾನೂನು ತಿದ್ದುಪಡಿ ಅಗತ್ಯವಿಲ್ಲವಾದರೂ ಮೆಹ್ದಿ ಮಸ್ರೂರ್ ಬಿಸ್ವಾಸ್ ಹಾಗೂ ಆರೀಫ್ ಮಜೀದ್ ಕೇಸ್ ಗಮನಿಸಿದರೆ ಅಕ್ರಮ ಚಟುವಟಿಕೆ ನಿಯಂತ್ರಣ ಕಾಯ್ದೆಯಲ್ಲಿ ಈ ಬಗ್ಗೆ ಉಲ್ಲೇಖವಿರುವುದು ಸ್ಪಷ್ಟವಾಗುತ್ತದೆ. UAPA ನ ಪರಿಚ್ಛೇದ 33ರ ಅನ್ವಯ ವಿಶ್ವಸಂಸ್ಥೆ ನಿಯಮಗಳು ಇಲ್ಲೂ ಅಳವಡಿಸಬೇಕಾಗುತ್ತದೆ.

ಭಾರತದಲ್ಲಿ ಗೊಂದಲವೇಕೆ?
ವಿಶ್ವಸಂಸ್ಥೆ ನಿಯಮವಿದ್ದರೂ ಕೂಡಾ ಭಾರತದಲ್ಲಿ ಸಿಮಿ, ಇಂಡಿಯನ್ ಮುಜಾಹಿದ್ದೀನ್ ಇನ್ನಿತರ ಉಗ್ರ ಸಂಘಟನೆಗಳನ್ನು ಪ್ರತ್ಯೇಕವಾಗಿ ನಿಷೇಧಿಸಲಾಗಿದೆ. ಇದಕ್ಕಾಗಿಯೇ ಭಾರತದಲ್ಲಿ TADA ಬಳಸಲಾಗುತ್ತುದೆ. ನಿಷೇಧಿತ ಸಂಘಟನೆಯ ಚಲನವಲನ ಗಮನಿಸಲು ಪ್ರತ್ಯೇಕ ಪ್ರಾಧಿಕಾರ ರಚನೆಯಾಗಿರುತ್ತದೆ.

ಭಾರತದ ಕೊನೆಯ ನಿಲುವೇನು?
ಐಎಸ್ ಐಎಸ್ ಉಗ್ರರ ಸಂಘಟನೆಗಳು ನೇರವಾಗಿ ಭಾರತದಲ್ಲಿ ಇನ್ನೂ ಕಾರ್ಯಾಚರಣೆಗಿಳಿದಿಲ್ಲ. ಕೆಲವು ವ್ಯಕ್ತಿಗಳನ್ನು ಶಂಕಿತರಾಗಿ ಪರಿಗಣಿಸಿ ಐಪಿಸಿ ಸೆಕ್ಷನ್ 125 ಅನ್ವಯ ವಿಚಾರಣೆಗೊಳಪಡಿಸಲಾಗುತ್ತಿದೆ. ಈಗ ಪ್ರತ್ಯೇಕವಾಗಿ ಇಂಥ ಸಂಘಟನೆಗಳನ್ನು ನಿಷೇಧಿಸುವ ಕ್ರಮಕ್ಕೆ ಭಾರತ ಮುಂದಾಗುವ ಸಾಧ್ಯತೆಯಿದೆ. ಎನ್ ಐಎ ಹಾಕುವ ಚಾರ್ಜ್ ಶೀಟ್ ಮೇಲೆ ಇದು ನಿರ್ಧಾರವಾಗಲಿದೆ. ಎನ್ ಐಎ ಸಲಹೆಗಾರರು ಈ ಬಗ್ಗೆ ಅಧ್ಯಯನ ನಡೆಸಿ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಲಿದ್ದಾರೆ. ಮುಂದಿನ ನಿರ್ಧಾರ ಸಚಿವಾಲಯ ತೆಗೆದುಕೊಳ್ಳಲಿದೆ.

English summary
There has been a great deal of debate in the recent days regarding the status of the ISIS and whether it has been banned in India. The rule is clear and speaking to experts one gets a clear picture and that is if there is a ban on a particular outfit by the United Nations, then all members are required to abide by the same as per the convention signed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X