ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉತ್ತರ ಪ್ರದೇಶದಲ್ಲಿ ಐಎಸ್‌ಐ ಏಜೆಂಟ್ ಬಂಧನ

|
Google Oneindia Kannada News

ಲಕ್ನೋ, ನವೆಂಬರ್ 28 : ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಐಎಸ್‌ಐ ಏಜೆಂಟ್‌ನನ್ನು ಬಂಧಿಸಿದೆ. ಬಾಂಗ್ಲಾದೇಶದ ಮೂಲಕ ಭಾರತಕ್ಕೆ ಬಂದಿದ್ದ ಈತ ಭಾರತೀಯ ಸೇನೆಯ ಕುರಿತು ಹಲವು ಮಾಹಿತಿಗಳನ್ನು ಸಂಗ್ರಹಣೆ ಮಾಡಿ ಪಾಕಿಸ್ತಾನಕ್ಕೆ ಕಳುಹಿಸಿದ್ದ ಎಂದು ಎಸ್‌ಟಿಎಫ್ ಐಜಿ ಸುಜೀತ್ ಪಾಂಡೆ ಹೇಳಿದ್ದಾರೆ.

ಬಂಧಿತ ಐಎಸ್‌ಐ ಏಜೆಂಟ್‌ನನ್ನು ಮೊಹಮದ್ ಇಜಾಜ್ ಎಂದು ಗುರುತಿಸಲಾಗಿದೆ. ಭಾರತದಲ್ಲಿ ಮೊಹಮದ್ ಕಲಾಂ ಎಂಬ ಹೆಸರಿನಲ್ಲಿ ಈತ ಕಾರ್ಯಾಚರಣೆ ನಡೆಸುತ್ತಿದ್ದ. ದೆಹಲಿಗೆ ಹೋಗುವ ತಯಾರಿಯಲ್ಲಿದ್ದ ಇಜಾಜ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. [ಶಾರುಖ್ ಅಸಹಿಷ್ಣುತೆ ಬಗ್ಗೆ ಯಾರು ಏನು ಹೇಳಿದರು?]

mohammand eizaz

ಮೊಹಮದ್ ಇಜಾಜ್‌ನಿಂದ ಭಾರತೀಯ ಸೇನೆಗೆ ಸೇರಿದ ಮಾಹಿತಿಗಳ ಪತ್ರ, ಪಾಕಿಸ್ತಾನದ ಗುರುತಿನ ಪತ್ರ, ಪಶ್ಚಿಮ ಬಂಗಾಳದ ನಕಲಿ ಮತದಾರರ ಗುರುತಿನ ಚೀಟಿ, ನಕಲಿ ಆಧಾರ್ ಕಾರ್ಡ್, ದೆಹಲಿ ಮೆಟ್ರೋ ಕಾರ್ಡ್, ಲ್ಯಾಪ್‌ಟಾಪ್ ಸೇರಿದಂತೆ ಹಲವು ದಾಖಲೆಗಳನ್ನು ವಶಕ್ಕೆಪಡೆದುಕೊಳ್ಳಲಾಗಿದೆ. [ಒಡಿಶಾದಲ್ಲಿ ಶಂಕಿತ ಐಎಸ್ಐ ಏಜೆಂಟ್ ಬಂಧನ]

ಪಾಕಿಸ್ತಾನ ಬಾಂಗ್ಲಾದೇಶ ಮೂಲಕ ಪಶ್ಚಿಮ ಬಂಗಾಳಕ್ಕೆ ಮೊಹಮದ್ ಇಜಾಜ್‌ನನ್ನು ಕಳುಹಿಸಿತ್ತು. ಭಾರತೀಯ ಸೇನೆ ಬಗ್ಗೆ ಮಾಹಿತಿ ಕಲೆ ಹಾಕಿ ಪಾಕ್‌ಗೆ ಕಳುಹಿಸಿವ ಕಾರ್ಯವನ್ನು ಈ ಮಾಡುತ್ತಿದ್ದ. ಭಾರತಕ್ಕೆ ಬಂದ ಈತ ಮೊದಲು ವಿಡಿಯೋ ಗ್ರಾಫರ್‌ಆಗಿ ಕೆಲಸ ಆರಂಭಿಸಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.

2012ರಲ್ಲಿ ಐಎಸ್‌ಐ ಮೊಹಮದ್ ಇಜಾಜ್‌ಗೆ ತರಬೇತಿ ನೀಡಿ ಭಾರತಕ್ಕೆ ಕಳುಹಿಸಿಕೊಟ್ಟಿತ್ತು. ಭಾರತೀಯ ಸೇನೆ ಬಗ್ಗೆ ಮಾಹಿತಿ ನೀಡುವ ಕಾರ್ಯವನ್ನು ಈತ ಮಾಡುತ್ತಿದ್ದ. ಇಜಾಜ್‌ಗೆ ಇಲ್ಲಿ ಕೆಲಸ ಮಾಡಲು ಪಾಕ್ ಹಣಕಾಸು ಸಹಾಯ ಮಾಡುವ ಜೊತೆಗೆ ಪಾಕಿಸ್ತಾನದಲ್ಲಿರುವ ಆತನ ಕುಟುಂಬಕ್ಕೆ ಪ್ರತಿ ತಿಂಗಳು 50 ಸಾವಿರ ರೂ.ಗಳನ್ನು ನೀಡುತ್ತಿತ್ತು.

ಸದಾರ್ ಬಜಾರ್ ಪೊಲೀಸ್ ಠಾಣೆಯಲ್ಲಿ ಇಜಾಜ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಈತನ ವಿಚಾರಣೆ ಮುಂದುರೆಸಿದೆ. ಗುಪ್ತಚರ ಸಂಸ್ಥೆಗಳಿಗೂ ಇಜಾಜ್ ಬಂಧನದ ಬಗ್ಗೆ ಮಾಹಿತಿಗಳನ್ನು ರವಾನಿಸಲಾಗಿದೆ.

English summary
Uttar Pradesh Special Task Force (STF) arrested an ISI agent from Meerut Cantt area with sensitive documents related to Indian Army. Mohammand Eizaz alias Mohammad Kalam, a resident of Islamabad, Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X