ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಣಿಪುರ ಚುನಾವಣಾ ಕಣದಲ್ಲಿ ಕಳಂಕಿತರೇ ಇಲ್ಲ.. ಆಶ್ಚರ್ಯ!

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಮಾರ್ಚ್ 3: ಬಹುಶಃ ಇದೊಂದು ಅಪರೂಪದ ದಾಖಲೆಯೇ ಸರಿ. ಮಣಿಪುರ ಎರಡನೇ ಹಂತದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ 98 ಅಭ್ಯರ್ಥಿಗಳಲ್ಲಿ ಕೇವಲ ಒಬ್ಬರ ಮೇಲೆ ಮಾತ್ರ ಕ್ರಿಮಿನಲ್ ಕೇಸ್ ಇದೆ.

ಅಸೋಸಿಯೇಶನ್ ಫಾರ್ ಡೆಮಾಕ್ರಾಟಿಕ್ ರಿಫಾರ್ಮ್ಸ್ ಅಭ್ಯರ್ಥಿಗಳು ಸಲ್ಲಿಸಿದ ಅಫಿದವಿತ್ ಜಾಲಾಡಿದ್ದುಈ ಮಾಹಿತಿಗಳು ಸಿಕ್ಕಿವೆ.[20 ಕಿ.ಮೀ ಸೈಕಲ್ ಏರಿ ಬಂದ ಶರ್ಮಿಳಾಗೆ ಕೇಜ್ರಿವಾಲ್ ಕೊಟ್ರು 50,000]

Is it a record? Just one candidate with criminal background in Manipur polls 2017

ಕಣದಲ್ಲಿರುವ ಮಂಗಳಂ ರಾಮೇಶ್ವರ್ ಸಿಂಗ್ ಮೇಲೆ ಮಾತ್ರ ಕ್ರಿಮಿನಲ್ ಮೊಕದ್ದಮೆ ಇದೆ. ಅದೂ ಕೇವಲ ಚೀಟಿಂಗ್ (ವಂಚನೆ) ಕೇಸ್ ಮಾತ್ರ ಇದೆ. ಇವರು ಬಿಜೆಪಿ ಟಿಕೆಟ್ ನಿಂದ ಕಾಕ್ಚಿಂಗ್ ಕ್ಷೇತ್ರದಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.[ಮಣಿಪುರ: ಕಾಂಗ್ರೆಸ್ ಸರಕಾರ ಕಿತ್ತೊಗೆಯಲು ಬಿಜೆಪಿ ಮಾಸ್ಟರ್ ಪ್ಲಾನ್]

ಇನ್ನು ಕಣದಲ್ಲಿ 29 ಕೋಟ್ಯಾಧಿಪತಿಗಳಿದ್ದಾರೆ. ಕಾಂಗ್ರೆಸ್ ನಿಂದ 8, ಬಿಜೆಪಿಯಿಂದ 1, ಎನ್.ಪಿ.ಪಿಯಿಂದ 5, ಎನ್.ಪಿ.ಎಫ್ ನಿಂದ 1 ಹಾಗೂ ಎಂ.ಎನ್.ಡಿ ಯಿಂದ 1 ಕೋಟ್ಯಾಧಿಪತಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದಾರೆ.

ಕಾಂಗ್ರೆಸ್ ನ ಆಲ್ಫ್ರೆಡ್ ಎಸ್ ಅರ್ಥುರ್ 36 ಕೋಟಿ ಆಸ್ತಿ ಘೋಷಿಸಿದ್ದು ಕಣದಲ್ಲಿರುವ ಶ್ರೀಮಂತ ಅಭ್ಯರ್ಥಿಯಾಗಿದ್ದಾರೆ. ಎಐಟಿಸಿಯ ಕಮೆವಿಲೈಮ್ ಕಬುಯ್ 13,000 ರೂಪಾಯಿ ಆಸ್ತಿ ಘೋಷಿಸಿದ್ದು ಕಣದಲ್ಲಿರುವ ಅತ್ಯಂತ ಬಡ ಅಭ್ಯರ್ಥಿಯಾಗಿದ್ದಾರೆ.

English summary
This could be a record of sorts. Just one candidate out of the 98 contesting in the second phase of the Manipur Assembly Elections 2017 has declared a pending criminal case against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X