ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಹಾವುರ್ ರಾಣಾ ಬಗ್ಗೆ ಡೇವಿಡ್ ಹೆಡ್ಲಿ ಹೇಳಿದ್ದೇನು?

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮಾರ್ಚ್, 23: ಮುಂಬೈ ದಾಳಿಗೂ ತಹಾವುರ್ ರಾಣಾಗೂ ಸಂಬಂಧವಿಲ್ಲ ಎಂದು ಸಾಬೀತು ಮಾಡಲು ರೂವಾರಿ ಡೇವಿಡ್ ಹೆಡ್ಲಿ ನಿರಂತರ ಯತ್ನ ಮಾಡುತ್ತಿದ್ದಾನೆ.

ಡೇವಿಡ್ ಹೆಡ್ಲಿಯನ್ನು ನಿರಂತರ ವಿಚಾರಣೆಗೆ ಒಳಪಡಿಸಲಾಗಿದೆ. ವಕೀರಾದ ಜಬಿಯುದ್ದೀನ್ ಅನ್ಸಾರಿ ಹೆಡ್ಡಿಯನ್ನು ಕ್ರಾಸ್ ಎಕ್ಸಾಮಿನೆಶನ್ ಮಾಡಿದ ಪ್ರತಿಯೊಂದು ಸಂದರ್ಭದಲ್ಲಿಯೂ ಹೆಡ್ಡಿ ರಾಣಾ ಹೆಸರನ್ನು ಹೇಳುತ್ತಿದ್ದರೂ ಆತನಿಗೂ ಮುಂಬೈ ದಾಳಿಗೂ ಸಂಬಂಧವಿಲ್ಲ ಎಂದು ಹೇಳಲು ಯತ್ನ ಮಾಡುತ್ತಿರುವುದು ಯಾಕೆ? ಎಂಬ ಪ್ರಶ್ನೆ ಮೂಡುತ್ತಿದೆ.

ರಾಣಾ ಯಾರು?
ಪಾಕಿಸ್ತಾನದ ನಿವಾಸಿಯಾಗಿದ್ದ ರಾಣಾ ಅಮೆರಿಕದ ಚಿಕಾಗೊಗೆ ವಲಸೆ ಹೋಗಿ ಉದ್ಯಮವೊಂದನ್ನು ನಡೆಸುತ್ತಿದ್ದ. ಉಗ್ರ ಸಂಘಟನೆ ಲಷ್ಕರ್ ಇ ತೊಯ್ಬಾ ಜತೆ ರಾಣಾ ನಿಕಟ ಸಂಪರ್ಕ ಇರಿಸಿಕೊಂಡಿದ್ದ. ಆದರೆ ಚಿಕಾಕೋ ನ್ಯಾಯಾಲಯ ಆತನನ್ನು ನಿರ್ದೋಷಿ ಎಂದು ತೀರ್ಪು ನೀಡಿತ್ತು.

ಮುಂಬೈ ದಾಳಿಗೂ ಮುನ್ನ ರಾಣಾ ನನಗೆ ಅನೇಕ ಮಾತುಗಳನ್ನು ಹೇಳಿದ್ದ. ಮುಂಬೈನಲ್ಲಿ ಕಚೇರಿ ಮಾಡಿಕೊಂಡು ಕಾರ್ಯನಿರ್ವಹಿಸುವುದು ಸರಿಯಲ್ಲ ಎಂದಿದ್ದ ಎಂದು ಹೇಡ್ಲಿ ತಿಳಿಸಿದ್ದ ಎಂಬ ಅಂಶವನ್ನು ಹೇಡ್ಲಿ ಬಾಯಿ ಬಿಟ್ಟಿದ್ದ.[26/11 ದಾಳಿ : ಡೇವಿಡ್ ಹೆಡ್ಲಿ ಬಾಯ್ಬಿಟ್ಟರೆ ಭಾರತಕ್ಕೇನು ಲಾಭ!]

Is Headley trying to de-link Tahawwur Rana from the Mumbai 26/11 case?

ನನ್ನ ಹೆಂಡತಿ ಶಾಜಿಯಾ ಬಗ್ಗೆ ಏನೂ ಹೇಳಲಾರೆ. ನನ್ನ ಬಗ್ಗೆ ಕೇಳಿ ಹೇಳುತ್ತೇನೆ. ನನ್ನ ಮತ್ತು ನನ್ನ ಹೆಂಡತಿ ನಡುವೆ ಏನು ನಡೆಯಿತು ಎಂಬುದನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಡ್ಲಿ ಹೇಳಿದ್ದಾನೆ.

ಗುಪ್ತಚರ ಇಲಾಖೆ ಅಮೆರಿಕದಲ್ಲಿ ತಹಾವುರ್ ರಾಣಾ ನನ್ನು ಪ್ರಶ್ನೆ ಮಾಡಲು ಯತ್ನ ನಡೆಸಿತ್ತು. ಆದರೆ ಸಫಲವಾಗಿರಲಿಲ್ಲ. ದಳ ಹೇಳುವಂತೆ ಹೇಡ್ಲಿ ಭಾರತಕ್ಕೆ ತೆರಳಲು ವ್ಯವಸ್ಥೆ ಮಾಡಿಕೊಟ್ಟವನೇ ರಾಣಾ.[ಮುಂಬೈ ದಾಳಿ ರುವಾರಿ ಹೆಡ್ಲಿಗೆ 35 ವರ್ಷ ಶಿಕ್ಷೆ]

ಗುಪ್ತಚರ ದಳ ವಿಚಾರಣೆಯನ್ನು ಮುಂದುವರಿಸಿದ್ದು ಹೇಡ್ಲಿ ಬಾಯಿಂದ ಇನ್ನು ಮುಂದೆ ಯಾವ ಯಾವ ಹೊಸ ಅಂಶಗಳು ಹರಿದು ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.(ಒನ್ ಇಂಡಿಯಾ ನ್ಯೂಸ್)

English summary
David Headley who has turned approver before a Mumbai court made every attempt to de-link his friend Tahawwur Rana from the 26/11 case. If the statements by Headley are considered by the court, then it would make it extremely difficult for the NIA to question Rana leave alone seek his extradition from the US.Meta Keys
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X