ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇವಲ 90 ವೋಟು ಪಡೆದ ಶರ್ಮಿಳಾ ರಾಜಕೀಯಕ್ಕೆ ಗುಡ್ ಬೈ

ಹೋರಾಟಗಾರ್ತಿಯಾಗಿ ಹೆಸರು ಮಾಡಿ ರಾಜಕೀಯದಲ್ಲೇನಾದರೂ ಸಾಧಿಸಬೇಕೆಂಬ ಆಸೆಯಿಂದ ಬಂದಿದ್ದ ಇರೋಮ್ ಶರ್ಮಾಳಾ ಅವರ ಆಸೆ ಕೈಗೂಡಲಿಲ್ಲ.

|
Google Oneindia Kannada News

ಇಂಫಾಲ್, ಮಾರ್ಚ್ 11: ಮಣಿಪುರದ ವಿಧಾಸಭೆ ಚುನಾವಣೆಗೆ ನಿಂತಿದ್ದ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು, ಈ ಚುನಾವಣೆಯಲ್ಲಿ ಸೋಲುವ ಮೂಲಕ ರಾಜಕೀಯಕ್ಕೆ ಗುಡ್ ಬೈ ಹೇಳಿದ್ದಾರೆ.

ಗೋವಾ</a> | <a title=ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್" title="ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್" />ಗೋವಾ | ಮಣಿಪುರ | ಪಂಜಾಬ್ | ಉತ್ತರಪ್ರದೇಶ | ಉತ್ತರಾಖಂಡ್

ಅಚ್ಚರಿಯೆಂದರೆ, ಇವರು ಚುನಾವಣೆಗೆ ಸ್ಪರ್ಧಿಸಿದ್ದ ತೌಬೊಲ್ ಕ್ಷೇತ್ರದಲ್ಲಿ ಇವರು ಗಳಿಸಿದ ಮತಗಳ ಸಂಖ್ಯೆ ಕೇವಲ 90! ನೋಟಾದಡಿ (NOTA) ಬಂದಿರುವ ಮತಗಳೇ ಇರೋಮ್ ಗಳಿಸಿರುವ ಮತಗಳಿಗಿಂತ ಹೆಚ್ಚಾಗಿವೆ! ಇವರ ಎದುರಾಳಿಯಾಗಿದ್ದ ಹಾಲಿ ಮುಖ್ಯಮಂತ್ರಿ, ಕಾಂಗ್ರೆಸ್ ನ ಒಕ್ರಮ್ ಐಬೊಬಿ ಅವರು, 18,649 ಮತಗಳಿಂದ ಜಯ ಸಾಧಿಸಿದ್ದಾರೆ.

Irom says goodbye to politics after getting just 90 votes

ಇದರಿಂದ ಬೇಸತ್ತಿರುವ ಇರೋಮ್ ಶರ್ಮೀಳಾ, ತಾವು ರಾಜಕೀಯ ತೊರೆಯುವುದಾಗಿ ತಿಳಿಸಿದ್ದಾರೆ. ಆದರೆ, ಅವರು ಸ್ಥಾಪಿಸಿರುವ ಪಿಆರ್ ಜೆಎ (ಪೀಪಲ್ ರಿಸರ್ಜೆನ್ಸ್ ಆ್ಯಂಡ್ ಜಸ್ಟಿಸ್ ಅಲಯನ್ಸ್) ಪಕ್ಷವು ರಾಜಕೀಯದಲ್ಲಿ ಮುಂದುವರಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಮಣಿಪುರದಲ್ಲಿ ಸೇನೆಗೆ ನೀಡಿರುವ ವಿಶೇಷ ಅಧಿಕಾರವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದ್ದ ಶರ್ಮೀಳಾ ಅವರು 16 ವರ್ಷಗಳ ಕಾಲ ಅನ್ನ ಸತ್ಯಾಗ್ರಹ ಮಾಡಿದ್ದರು. ಕಳೆದ ವರ್ಷವಷ್ಟೇ ಅವರು ತಮ್ಮ ಉಪವಾಸಕ್ಕೆ ಇತಿಶ್ರೀ ಹಾಡಿ, ಆನಂತರ ರಾಜಕೀಯ ಪ್ರವೇಶಿಸಿದ್ದರು.

English summary
The anti-AFSPA activist Irom Sharmila, says good bye to politics after getting defeated in recent Assembly election. In her constituency he got just 90 votes, which is very less than NOTA votes i.e, 140.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X