ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಮನೆಗೆ ಟ್ರೈನ್ ಟಿಕೆಟ್ ತಲುಪಿಸುತ್ತೇವೆ : ಐಆರ್ ಸಿಟಿಸಿ

ಹತ್ತು ಹಲವು ಹೊಸ ಸೌಲಭ್ಯಗಳನ್ನು ನೀಡುತ್ತಾ ಪ್ರಯಾಣಿಕರಿಗೆ ಅನುಕೂಲ ಒದಗಿಸುತ್ತಿರುವ ಭಾರತೀಯ ರೈಲ್ವೆಯ ಐಆರ್ ಟಿಸಿಟಿ ವೆಬ್ ತಾಣದಲ್ಲಿ ಇನ್ಮುಂದೆ ಟಿಕೆಟ್ ಬುಕ್ ಮಾಡಿ, ಮನೆಗೆ ಟಿಕೆಟ್ ತರಿಸಿಕೊಳ್ಳಿ

By Mahesh
|
Google Oneindia Kannada News

ನವದೆಹಲಿ, ಮೇ 10 : ಹತ್ತು ಹಲವು ಹೊಸ ಸೌಲಭ್ಯಗಳನ್ನು ನೀಡುತ್ತಾ ಪ್ರಯಾಣಿಕರಿಗೆ ಅನುಕೂಲ ಒದಗಿಸುತ್ತಿರುವ ಭಾರತೀಯ ರೈಲ್ವೆಯ ಐಆರ್ ಟಿಸಿಟಿ ವೆಬ್ ತಾಣದಲ್ಲಿ ಇನ್ಮುಂದೆ ಟಿಕೆಟ್ ಬುಕ್ ಮಾಡಿ, ಮನೆಗೆ ಟಿಕೆಟ್ ತರಿಸಿಕೊಳ್ಳಬಹುದು.

ಐಆರ್​ಸಿಟಿಸಿ 'ಪೇ ಆನ್ ಆರ್ಡರ್' ಎಂಬ ಹೊಸ ಸೌಲಭ್ಯದ ಮೂಲಕ ಪ್ರಯಾಣಿಕರು ಆನ್​ಲೈನ್​ನಲ್ಲಿ ಬುಕ್ ಮಾಡಿ, ತಮ್ಮ ಮನೆಗೆ ಟಿಕೆಟ್ ತರಿಸಿಕೊಳ್ಳಬಹುದು, ಈ ಸೌಲಭ್ಯ Cash on Delivery ಮಾದರಿಯಾಗಿದ್ದು, ಪ್ರಯಾಣಿಕರಿಗೆ ಇನ್ನಷ್ಟು ಅನುಕೂಲಕರವಾಗಿದೆ.

IRCTC starts cash-on-delivery service on train tickets

ಅದರಲ್ಲೂ ಸಣ್ಣ ನಗರಗಳಲ್ಲಿ ವಾಸಿಸುತ್ತಿರುವವರಿಗೆ ತುಂಬ ಅನುಕೂಲಕರವಾದುದಾಗಿದೆ. ಇ-ಟಿಕೆಟ್​ಗಳನ್ನು ಬುಕಿಂಗ್ ಮಾಡುವಾಗ ಬಹುತೇಕರು ತಮ್ಮ ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳನ್ನು ನಮೂದಿಸಲು ಹಿಂಜರಿಯುವ ಕಾರಣ ಈ ಉಪಕ್ರಮವನ್ನು ಕೈಗೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ. ಇದು ಆನ್​ಲೈನ್ ಮೂಲಕ ಟಿಕೆಟ್ ಕಾಯ್ದಿರಿಸಲು ಪ್ರಯಾಣಿಕರಿಗೆ ಪ್ರೋತ್ಸಾಹ ನೀಡುತ್ತದೆ ಎನ್ನಲಾಗಿದೆ.

ಐಆರ್​ಸಿಟಿಸಿ ಮೊದಲ ಹಂತದಲ್ಲಿ ಈ ಸೇವೆಯನ್ನು 600 ನಗರ ಹಾಗೂ ಪಟ್ಟಣಗಳಿಗೆ ಒದಗಿಸುತ್ತಿದೆ. ಮನೆಬಾಗಿಲಿಗೆ ಟಿಕೆಟ್ ತಲುಪಿದ ಮೇಲೆ ಹಣ ಪಾವತಿಸುವ ಸೌಲಭ್ಯ ಪಡೆಯಲು ಬಯಸುವ ಗ್ರಾಹಕರು ಆಧಾರ್ ಅಥವಾ ಪಾನ್​ಕಾರ್ಡ್ ಸಲ್ಲಿಸಿ ವೆಬ್​ಸೈಟ್​ನಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. ರೂ. 5000 ಬೆಲೆಯ ಟಿಕೆಟ್​ನ ಡೆಲಿವರಿ ಶುಲ್ಕವಾಗಿ ರೂ. 90 ಹಾಗೂ ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ. ಟಿಕೆಟ್ ಮೌಲ್ಯ ರೂ. 5000 ಮೀರಿದಲ್ಲಿ ಡೆಲಿವರಿ ಶುಲ್ಕ ರೂ. 120 ಆಗಿರುತ್ತದೆ. ಟಿಕೆಟ್ ಮನೆಬಾಗಿಲಿಗೆ ಬಂದ ಮೇಲೆ ಅದನ್ನು ತಿರಸ್ಕರಿಸಲು/ರದ್ದುಪಡಿಸಲು ತಗುಲುವ ಶುಲ್ಕ ಪಾವತಿಸಬೇಕಾಗುತ್ತದೆ. ತಪ್ಪಿದಲ್ಲಿ ಅಂತಹವರ ಯೂಸರ್ ಐಡಿಯನ್ನು ನಿಷ್ಕ್ರಿಯಗೊಳಿಸಲಾಗುವುದಲ್ಲದೆ ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ ಎಂದು ಐಆರ್​ಸಿಟಿಸಿ ಪ್ರಕಟಣೆ ತಿಳಿಸಿದೆ.

English summary
IRCTC has offered delivery of rail tickets allowing passengers to make payment through any payment mode, including cash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X