ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಇ-ಟಿಕೆಟ್ ಬುಕಿಂಗ್‌ಗೆ 15 ನಿಮಿಷ ಹೆಚ್ಚುವರಿ ಅವಕಾಶ

|
Google Oneindia Kannada News

ನವದೆಹಲಿ, ಅಕ್ಟೋಬರ್. 07: ಕೊನೆ ಕ್ಷಣದಲ್ಲಿ ಐಆರ್ ಸಿಟಿಸಿ(ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಆಂಡ್ ಟೂರಿಸಂ ಕಾರ್ಪೋರೇಶನ್)ಗೆ ಲಾಗ್ ಇನ್ ಆಗಿ ಟಿಕೆಟ್ ಸಿಗಲಿಲ್ಲ ಎಂದು ಪರಿತಪಿಸುವುದಕ್ಕೆ ಇನ್ನು ಮುಂದೆ ಬ್ರೇಕ್ ಬೀಳಲಿದೆ. ಐಆರ್‌ಸಿಟಿಸಿ ಪೋರ್ಟಲ್ ಮೂಲಕ ಟಿಕೆಟ್ ಬುಕ್ ಮಾಡುವವರಿಗೆ ಬುಕಿಂಗ್‌ಗೆ ಹೆಚ್ಚುವರಿ 15 ನಿಮಿಷಗಳ ಕಾಲಾವಕಾಶವನ್ನು ಒದಗಿಸಲಾಗಿದೆ.

ಐಆರ್‌ಸಿಟಿಸಿ ಸಿಂಗಾಪುರದಿಂದ ಎಚ್‌ಪಿ ಟೈಟಾನಿಯಂ ಸರ್ವರ್‌ಗಳನ್ನು ತರಿಸಿಕೊಂಡಿದ್ದು ಇ ಟಿಕೆಟಿಂಗ್ ಇನ್ನಷ್ಟು ವೇಗವಾಗಿ ನಡೆಯಲಿದೆ. ಹೀಗಾಗಿ ರಾತ್ರಿ 11.45ರವರೆಗೂ ಟಿಕೆಟ್ ಬುಕ್ಕಿಂಗ್‌ಗೆ ಅವಕಾಶ ನೀಡಲಾಗಿದೆ. ಈ ಹಿಂದೆ ರಾತ್ರಿ 11.30ರವರೆಗೆ ಮಾತ್ರ ಟಿಕೆಟ್ ಕಾಯ್ದಿರಿಸಲು ಸಾಧ್ಯವಿತ್ತು.[30 ಸೆಕೆಂಡ್ ನಲ್ಲಿ ತತ್ಕಾಲ್ ಟಿಕೆಟ್ ಬುಕ್ ಮಾಡುವುದು ಹೇಗೆ?]

IRCTC extends e-ticketing timing by 15 minutes

ಸಪ್ಟೆಂಬರ್ 20 ರಿಂದಲೇ ಹೊಸ ಯೋಜನೆ ಜಾರಿಗೆ ಬಂದಿದೆ. ರಾತ್ರಿ 11.30ಕ್ಕೆ ಬಂದ್ ಆಗುತ್ತಿದ್ದ ಸರ್ವರ್ ಮತ್ತೆ ಒಂದು ಗಂಟೆ ನಂತರ ತೆರೆದುಕೊಳ್ಳುತ್ತಿತ್ತು.ಮ ಆದರೆ ಇದೀಗ ಹೆಚ್ಚುವರಿ 15 ನಿಮಿಷ ಕಾಲಾವಕಾಶ ನೀಡಲಾಗಿದೆ.[ರೈಲ್ವೆ ತತ್ಕಾಲ್ ಟಿಕೆಟ್ ಬುಕಿಂಗ್ ಸಮಯ ಬದಲು]

ಸದ್ಯ ಟಿಕೆಟ್ ನೀಡಿಕೆ ಮಾಡುತ್ತಿರುವ ಕೌಂಟರ್ ಗಳಲ್ಲಿಯೂ ಸಹ ಹೊಸ ಸೌಲಭ್ಯ ಲಭ್ಯವಿದೆ ಎಂದು ಐಆರ್ ಸಿಟಿಸಿ ಎಂಡಿ ಡಾ. ಡಿಕೆ ಮನೋಚಾ ಮಾಹಿತಿ ನೀಡಿದ್ದಾರೆ. ಕಳೆದ ಜೂನ್ ತಿಂಗಳಲ್ಲೂ ಐಆರ್ ಸಿಟಿಸಿ ಹೊಸ ಆಧುನಿಕ ತಂತ್ರಗಳನ್ನು ಅಳವಡಿಸಿಕೊಂಡಿತ್ತು.

English summary
Indian Railways e-ticketing timing has been extended by the IRCTC (Indian Railway Catering and Tourism Corporation) on its portal by 15 minutes to 11.45 p.m. Before the introduction of the new timing, Indian Railways allowed passengers to book tickets through e-ticketing feature till 11.30 p.m. With the introduction of the new system IRCTC's main server will be closed for 45 minutes only-from 11.45 p.m. to 12.30 a.m.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X