ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇಜ್ರಿವಾಲ್ ವಿರುದ್ಧ ಯಾವ ಪಿತೂರಿ ನಡೆದಿಲ್ಲ: ಪೃಥ್ವಿ ರೆಡ್ಡಿ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮಾ, 4 : ಆಮ್ ಆದ್ಮಿ ಪಾರ್ಟಿಯಲ್ಲಿ ಭಿನ್ನಮತ ಭುಗಿಲೆದಿದ್ದು ತಾರಕಕ್ಕೇರಿದೆ. ಪಕ್ಷದ ಪ್ರಮುಖ ನಾಯಕರಾದ ಪ್ರಶಾಂತ್ ಭೂಷಣ್ ಮತ್ತು ಯೋಗೇಂದ್ರ ಯಾದವ್ ಹೇಳಿಕೆಗಳು ಪಕ್ಷದೊಳಗಿದ್ದ ಅಸಮಾಧಾನವನ್ನು ಬೀದಿಗೆ ಎಳೆದು ತಂದಿವೆ.

ಪಾರ್ಟಿಯಲ್ಲಿ ಎದ್ದಿರುವ ಗೊಂದಲಗಳ ಕುರಿತು ಒನ್ ಇಂಡಿಯಾ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ವಕ್ತಾರ ಪೃಥ್ವಿ ರೆಡ್ಡಿ ಅವರನ್ನು ಸಂದರ್ಶನ ಮಾಡಿದೆ. ' ನಾವು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸಬೇಕು. ಈ ಎಲ್ಲ ಗೊಂದಲಗಳನ್ನು ನಿವಾರಿಸಿಕೊಂಡು ಪಕ್ಷ ಮತ್ತಷ್ಟು ಗಟ್ಟಿಯಾಗಲಿದೆ' ಎಂದು ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರೆಡ್ಡಿಯವರೊಂದಿಗೆ ನಡೆಸಿದ ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.[ಎಎಪಿ ನಾಟಕ ಮುಂದುವರಿಕೆ: ಕೇಜ್ರಿವಾಲ್ ರಾಜೀನಾಮೆ]

kejrival

* ಪಕ್ಷದೊಳಗೆ ಭಿನ್ನಮತ ಭುಗಿಲೇಳಲು ಕಾರಣವೇನು?
ರೆಡ್ಡಿ: ನಮ್ಮ ಪಕ್ಷದಲ್ಲಿರುವ ನಾಯಕರ ಹಿನ್ನೆಲೆ ಬೇರೆಬೇರೆಯಾಗಿದೆ. ಭ್ರಷ್ಟಾಚಾರ ನಿರ್ಮೂಲನೆ ಮತ್ತು ಪ್ರಜಾಪ್ರಭುತ್ವ ಸ್ಥಾಪನೆಯೇ ನಿಜವಾದ ಧ್ಯೇಯ. ಚಿಂತನಾ ಲಹರಿಗಳಲ್ಲಿ ಕೊಂಚ ವ್ಯತ್ಯಾಸವಿರುವುದು ಭಿನ್ನಮತದಂತೆ ತೋರುತ್ತಿದೆ. ಕೆಲವೊಂದು ಕಡೆ ಕಂಡುಬಂದ ಅಪನಂಬಿಕೆ ಭಿನ್ನಮತದ ಬೀಜ ಬಿತ್ತಿದೆ.

* ಇಷ್ಟು ದಿನ ಭಿನ್ನಮತ ಮುಚ್ಚಿಡಲಾಗಿತ್ತೇ?
ರೆಡ್ಡಿ: ಇದು ಚರ್ಚಿಸತಕ್ಕ ವಿಷಯವಲ್ಲ. ನಾವು ಒಟ್ಟಾಗಿಯೇ ಚುನಾವಣೆ ಎದುರಿಸಿದ್ದೆವು. ನಮ್ಮೆಲ್ಲರ ಸಾಮಾನ್ಯ ಉದ್ದೇಶ ಒಂದೇ ಆಗಿತ್ತು. ಇಂಥ ಸಮಸ್ಯೆಗಳು ಸಂಘಟನೆ ಅಂದ ಮೇಲೆ ಸಾಮಾನ್ಯ. ಗೊಂದಲಗಳು ಶೀಘ್ರವಾಗಿ ಬಗೆಹರಿಯಲಿದೆ.

* ಅರವಿಂದ ಕೇಜ್ರಿವಾಲ್ ಅವರನ್ನು ಸ್ಥಾನದಿಂದ ಇಳಿಸುವ ಹುನ್ನಾರ ನಡೆದಿದೆಯೇ?
ರೆಡ್ಡಿ: ಇಲ್ಲ, ಅಂಥ ಯಾವ ಸಿದ್ಧತೆಗಳು ನನ್ನ ಪ್ರಕಾರ ಪಕ್ಷದಲ್ಲಿ ನಡೆದಿಲ್ಲ. ಭಿನ್ನಾಭಿಪ್ರಾಯ ಉಂಟಾದ ಮಾತ್ರಕ್ಕೆ ನಾಯಕತ್ವ ಬದಲಾವಣೆ ತಂತ್ರ ಎನ್ನುವುದು ಸರಿಯಲ್ಲ.

* ಪ್ರಶಾಂತ್ ಭೂ‍ಷಣ್ ಮತ್ತು ಯೋಗೇಂದ್ರ ಯಾದವ್ ಮೇಲೆ ಕ್ರಮ ತೆಗೆದುಕೊಳ್ಳುತ್ತೀರಾ?
ರೆಡ್ಡಿ: ಪ್ರತಿಯೊಂದು ಪಕ್ಷದಲ್ಲೂ ಆಂತರಿಕ ಭಿನ್ನಮತ ಇದ್ದೇ ಇರುತ್ತದೆ. ನಮ್ಮ ಪಕ್ಷದ ನಾಯಕರು ಮಾಧ್ಯಮಗಳೆದುರು ಬಹಿರಂಗ ಹೇಳಿಕೆ ನೀಡಿದ್ದಾರೆ ಅಷ್ಟೇ. ಕಠಿಣ ಕ್ರಮ ತೆಗೆದುಕೊಳ್ಳುವುದರಿಂದ ಎಲ್ಲ ಸರಿ ಹೋಗುತ್ತದೆ ಎಂಬ ಭಾವನೆ ನಮಗಿಲ್ಲ. ಪಕ್ಷದ ಕೆಲವು ಜನ ಜವಾಬ್ದಾರಿಯುತವಾಗಿ ಕಾರ್ಯನಿರ್ವಹುಸುತ್ತಿಲ್ಲ ಎಂಬುದು ಸ್ಪಷ್ಟ. ಜನರ ಎದುರೇ ಇಂಥ ಸಮಸ್ಯೆಗೆ ಪರಿಹಾರ ತೆಗೆದುಕೊಳ್ಳಲಾಗುವುದು.

* ಆಮ್ ಆದ್ಮಿಯಲ್ಲಿ ಸರ್ವಾಧಿಕಾರ ಧೋರಣೆ ಹೆಚ್ಚಾಗಿದೆ....!
ರೆಡ್ಡಿ: ಈ ಬಗ್ಗೆ ಯೋಚನೆ ಮಾಡಲು ಸಾಧ್ಯವಿಲ್ಲ. ಎಲ್ಲರಿಗೂ ಅವರವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಅದರಂತೆ ಪಕ್ಷ ಸಹ ಬೆಳೆದು ಬಂದಿದೆ. ಮುಂದಿನ ಅವಕಾಶಗಳ ಬಗ್ಗೆ ಯೋಚಿಸುವುದು ಉತ್ತಮವೇ ವಿನಃ ಹಿಂದೆ ನಡೆದ ಸಂಗತಿಗಳ ಬಗ್ಗೆ ಅಲ್ಲ.

English summary
The Aam Admi Party is going through one its worst crisis with several members questioning the functioning of the party. Leading the pack are Prashanth Bhushan and Yogendra Yadav.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X