ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಿಯಾಂಕಾ ನನ್ನ ಉತ್ತರಾಧಿಕಾರಿ ಎಂದಿದ್ದ ಇಂದಿರಾ ಗಾಂಧಿ!

By Mahesh
|
Google Oneindia Kannada News

ನವದೆಹಲಿ, ಅ.21: ಮಾಜಿ ಪ್ರಧಾನಿ, ದಿವಂಗತ ಇಂದಿರಾಗಾಂಧಿ ಅವರು ತಮ್ಮ ಬದುಕಿನ ಅಂತ್ಯ ಕಾಲದಲ್ಲಿ ತಮ್ಮ ಉತ್ತರಾಧಿಕಾರಿಯ ಬಗ್ಗೆ ಸುಳಿವು ನೀಡಿದ್ದರು. ಮೊಮ್ಮಗಳು ಪ್ರಿಯಾಂಕಾ ಗಾಂಧಿ ಭವಿಷ್ಯದ ನಾಯಕಿ ಎಂದಿದ್ದರು ಎಂದು ಹಿರಿಯ ಕಾಂಗ್ರೆಸ್ ನಾಯಕ ಎಂಎಲ್ ಫೋತೆದಾರ್ ಹೇಳಿದ್ದಾರೆ.

ಪ್ರಧಾನಿ ಇಂದಿರಾಗಾಂಧಿ ಅವರಿಗೆ ದೀರ್ಘಕಾಲ ರಾಜಕೀಯ ಸಲಹೆಗಾರರಾಗಿದ್ದ ಫೋತೇದಾರ್, ಇಂದಿರಾ ಅವರು ಪ್ರಿಯಾಂಕಾಳಲ್ಲಿ ತಮ್ಮ ಪ್ರತಿಬಿಂಬವನ್ನೇ ಕಂಡಿದ್ದಿರಬಹುದು. ಅದಕ್ಕೇ ಅವರು, ಪ್ರಿಯಾಂಕಾ ಮುಂದೆ ಉತ್ತಮ ನಾಯಕಿಯಾಗಬಲ್ಲಳು ಎಂದು ಹೇಳಿದ್ದರು. ಆಕೆ ಹೇಳಿದ ಪ್ರತಿ ಮಾತುಗಳನ್ನು ನಾನು ದಾಖಲಿಸಿದೆ.

ಹತ್ಯೆಯಾಗುವ ಕೇವಲ ಮೂರು ದಿನಗಳ ಮೊದಲಷ್ಟೇ ಜಮ್ಮು-ಕಾಶ್ಮೀರಕ್ಕೆ ತೆರಳಿದ್ದ ಇಂದಿರಾ, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡು ಬಂದಿದ್ದರು. ಅಂದು ಶನಿವಾರ ನಾವು ಕಾಶ್ಮೀರದಲ್ಲಿದ್ದೆವು. ಇಂದಿರಾ ಹಿಂದೂ ಹಾಗೂ ಮುಸಲ್ಮಾನರ ಮಂದಿರಗಳ ದರ್ಶನ ಮಾಡಿದ್ದರು. ದೆಹಲಿಗೆ ಹಿಂದಿರುಗುವಾಗ ಅವರು ಪ್ರಿಯಾಂಕಾ ನನ್ನ ಉತ್ತರಾಧಿಕಾರಿ ಎಂದಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

'Indira Gandhi wanted grand daughter Priyanka Gandhi to be her political heir

ಆಕೆಯಲ್ಲಿ ನಾಯಕತ್ವದ ಗುಣ ಇತ್ತು ಎನ್ನುವುದನ್ನು ಬಲವಾಗಿ ನಂಬಿದ್ದರು ಎಂದಿದ್ದಾರೆ. ಅಲ್ಲದೇ ಅವರು ಹತ್ಯೆಯಾಗುವುದಕ್ಕೂ ಕೆಲವೇ ದಿನಗಳ ಮೊದಲು ತನ್ನನ್ನು ಹತ್ಯೆ ಮಾಡುತ್ತಾರೆನ್ನುವ ಅನುಮಾನ ಅವರನ್ನು ಕಾಡಿತ್ತು ಈ ಬಗ್ಗೆ ಪುಸ್ತಕದಲ್ಲಿ ವಿವರಿಸಿದ್ದೇನೆ ಎಂದು ಫೊತೆದಾರ್ ತಿಳಿಸಿದ್ದಾರೆ.

ಪ್ರಿಯಾಂಕಾ ಸಮರ್ಥ ನಾಯಕಿ: ಇಂದಿರಾಗಾಂಧಿ ಅವರ ಮನದ ಇಂಗಿತವನ್ನು ನಾನು ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರಿಗೆ ತಿಳಿಸಿದೆ. ನನಗೆ ಇಂದಿರಾಜೀ ಹಾಗೂ ಪ್ರಿಯಾಂಕಾಜೀ ಅವರಲ್ಲಿ ಸಾಮ್ಯತೆ ಕಾಣಿಸುತ್ತದೆ. ಮುಂದಿನ ದಿನಗಳಲ್ಲಿ ಪ್ರಿಯಾಂಕಾ ಅವರು ಸಮರ್ಥ ನಾಯಕಿಯಾಗಿ ಆಡಳಿತ ನಡೆಸುವುದನ್ನು ಕಾಣಬಹುದು ಎಂದು ಫೋತೆದಾರ್ ಹೇಳಿದ್ದಾರೆ.

ಇಂದಿರಾಗಾಂಧಿ ಅವರು ಅಕ್ಟೋಬರ್ 31,1984ರಲ್ಲಿ ನವದೆಹಲಿಯಲ್ಲಿ ಹತ್ಯೆಗೀಡಾದರು. ಇಂದಿರಾಗಾಂಧಿ ಅವರ ರಾಜಕೀಯ ಸಲಹೆಗಾರರಾಗಿದ್ದ ಫೋತೆದಾರ್ ಅವರು 'ಚಿನಾರ್ ಲೀವ್ಸ್' ಹೆಸರಿನಲ್ಲಿ ಅಕ್ಟೋಬರ್ 30ರಂದು ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. (ಒನ್ ಇಂಡಿಯಾ ಸುದ್ದಿ)

English summary
If Indira's close aid and veteran Congress leader ML Fotedar is to be believed, then, the former Prime Minister Indira Gandhi, in her last days, too wished her grand daughter Priyanka Gandhi should carry forward her political legacy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X