ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಶ್ಮೀರದಲ್ಲಿ ಪಾಕಿಸ್ತಾನದ ಗುಂಡಿಗೆ ಭಾರತದ ಸೈನಿಕ ಹುತಾತ್ಮ

By ವಿಕಾಸ್ ನಂಜಪ್ಪ
|
Google Oneindia Kannada News

ಜಮ್ಮು ಮತ್ತು ಕಾಶ್ಮೀರ, ಜೂನ್ 16: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತದ ಸೈನಿಕರೊಬ್ಬರು ಬಲಿಯಾಗಿದ್ದಾರೆ.

34 ವರ್ಷದ ಭಾರತೀಯ ಸೈನಿಕ ನಾಯಕ್ ಭಟವರ್ ಸಿಂಗ್ ಇಂದು ಮುಂಜಾನೆ 5.15 ನಿಮಿಷಕ್ಕೆ ನೌಶೆರಾ ಭಾಗದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆ.

ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಪೊಲೀಸ್ ಅಧಿಕಾರಿ ಬಲಿಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಪೊಲೀಸ್ ಅಧಿಕಾರಿ ಬಲಿ

 Indian soldier martyred in ceasefire violation by Pak at J&K

ಕಳೆದೊಂದು ವಾರದಲ್ಲಿ ಪಾಕಿಸ್ತಾನ ನಡೆಸುತ್ತಿರುವ ಮೂರನೇ ಅಪ್ರಚೋದಿತ ಗುಂಡಿನ ದಾಳಿ ಇದಾಗಿದೆ.

ಇಂದು ಬೆಳಿಗ್ಗೆ ಪಾಕಿಸ್ತಾನದ ಕಡೆಯಿಂದ ಅಪ್ರಚೋದಿತ ಗುಂಡಿನ ದಾಳಿ ಆರಂಭವಾಗಿದೆ. ಬೆನ್ನಿಗೆ ಭಾರತೀಯ ಸೇನೆಯೂ ಪ್ರತ್ಯುತ್ತರ ನೀಡಿದೆ. ಹೀಗಿದ್ದೂ ಜವಾನರೊಬ್ಬರು ಅಸುನೀಗಿದ್ದಾರೆ.

ಪಾಕ್ ದಾಳಿಗೆ ಭಾರತ ಪ್ರತಿ ದಾಳಿ, ಇಬ್ಬರು ಪಾಕ್ ಸೈನಿಕರು ಉಡೀಸ್ಪಾಕ್ ದಾಳಿಗೆ ಭಾರತ ಪ್ರತಿ ದಾಳಿ, ಇಬ್ಬರು ಪಾಕ್ ಸೈನಿಕರು ಉಡೀಸ್

ಈ ಕುರಿತು ಹೇಳಿಕೆ ನೀಡಿರುವ ಗುಪ್ತಚರ ಇಲಾಖೆ, "ಪಾಕಿಸ್ತಾನದಿಂದ ಉಗ್ರರು ಭಾರತದೊಳಕ್ಕೆ ನುಸುಳಲು ಸಹಾಯ ಮಾಡುವ ಸಲುವಾಗಿ ಪಾಕಿಸ್ತಾನ ಪ್ರಚೋದಿತ ಗುಂಡಿನ ದಾಳಿ ನಡೆಸುತ್ತದೆ," ಎಂದು ಹೇಳಿದೆ.

English summary
A soldier has been martyred in a ceasefire violation by Pakistan. The 34 year old Indian Army Jawan Naik Bhahtawar Singh lost his life in the ceasefire violation by Pakistan at the Naushera sector at 5.15 am today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X