ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿತ್ರ ಸಂಪುಟ: ಸೋಮವಾರ ಕಂಡೂ ಕಾಣೆಯಾದ 5 ಪ್ರಮುಖ ಸುದ್ದಿಗಳು

|
Google Oneindia Kannada News

ಸೋಮವಾರದ ಸುದ್ದಿಸಂತೆಯಲ್ಲಿ ಕಾಣೆಯಾದ ಸುದ್ದಿಗಳ ಒಂದು ಝಲಕ್ ಇಲ್ಲಿದೆ. ಹೀಗೆ ಮಿಸ್ ಆದ ಸುದ್ದಿಗಳಲ್ಲಿ ಪ್ರಮುಖವಾದದ್ದು ನವದೆಹಲಿಯಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದ ಅಂಕುರ್ ಮಿತ್ತಲ್ ಅವರು ಬೆಳ್ಳಿ ಗೆದ್ದಿರುವುದು.

ಇತರ ಸುದ್ದಿಗಳೆಂದರೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ತಮಿಳುನಾಡಿನ ನೂತನ ಮುಖ್ಯಮಂತ್ರಿ ಪಳನಿ ಸ್ವಾಮಿ ಭೇಟಿಯಾಗಿ ಮಾತುಕತೆ ನಡೆಸಿದರು.

ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಕರ್ನಾಟಕದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ಕಾಂಗ್ರೆಸ್ ನಾಯಕ ಕುಮಾರ್ ಬಂಗಾರಪ್ಪ ಭೇಟಿಯಾಗಿ ಮಾತುಕತೆ ನಡೆಸಿದ್ದು ವಿಶೇಷವಾಗಿತ್ತು.

ಅಂಕುರ್ ಗೆ ರಜತ ಗೌರವ

ಅಂಕುರ್ ಗೆ ರಜತ ಗೌರವ

ಭಾರತೀಯ ಶೂಟರ್ ಅಂಕುರ್ ಮಿತ್ತಲ್ ಅವರು, ನವದೆಹಲಿಯಲ್ಲಿ ಸೋಮವಾರ ನಡೆದ ಅಂತಾರಾಷ್ಟ್ರೀಯ ಶೂಟಿಂಗ್ ಸಂಸ್ಥೆಯ ವಿಶ್ವಕಪ್ ಪಂದ್ಯಾವಳಿಯ ಪುರುಷರ ಡಬಲ್ ಟ್ರಾಪ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದರು.

ನೂತನ ಸಿಎಂ ಜತೆ ಮಾತುಕತೆ

ನೂತನ ಸಿಎಂ ಜತೆ ಮಾತುಕತೆ

ತಮಿಳುನಾಡಿನ ನೂತನ ಮುಖ್ಯಮಂತ್ರಿ ಪಳನಿಸ್ವಾಮಿ, ಸೋಮವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಕೊಲಂಬೊಕ್ಕೆ ಬಂದಿಳಿದ ರೆಹಮಾನ್

ಕೊಲಂಬೊಕ್ಕೆ ಬಂದಿಳಿದ ರೆಹಮಾನ್

ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗಾಗಿ ಸೋಮವಾರ ಕೊಲಂಬೋ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಫಿಜುರ್ ರಹಮಾನ್ ಅವರು ಕಾಣಿಸಿದ್ದು ಹೀಗೆ.

 ಹಿರಿಯರ, ಕಿರಿಯರ ಕುಶಲೋಪರಿ

ಹಿರಿಯರ, ಕಿರಿಯರ ಕುಶಲೋಪರಿ

ಬೆಂಗಳೂರಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಕುಮಾರ್ ಬಂಗಾರಪ್ಪ ಭೇಟಿಯಾಗಿ ಮಾತುಕತೆ ನಡೆಸಿದರು.

ಗೌರವ ವಂದನೆ

ಗೌರವ ವಂದನೆ

ನವದೆಹಲಿಯಲ್ಲಿ ದಿವಂಗತ ಪ್ರೊಫೆಸರ್ ಮೂನಿಸ್ ರಾಜಾ ಮೆಮೋರಿಯಲ್ ಲೆಕ್ಚರ್ ನಲ್ಲಿ ಭಾಗವಹಿಸಿದ್ದ ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ ಅವರು, ಮೂನಿಸ್ ರಾಜಾ ಅವರ ಫೋಟೋಕ್ಕೆ ಪುಷ್ಪಾಂಜಲಿ ಸಲ್ಲಿಸಿದರು.

English summary
On Monday, Indian Shooter Ankur Mittal won Silver medal in ongoing ISSF Shootin world cup in New Delhi on Monday. Including this, we have some news which might have gone unnoticed in our routine life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X